ಕಾರ್ಕಳ, ಆ. 10: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶೇಖರ್ ಭಂಡಾರಿ ಕಾರ್ಕಳ (72) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ದೈತ್ಯಪ್ರತಿಭೆ
ಶೇಖರ ಭಂಡಾರಿ ಅವರು ಕಾರ್ಕಳದ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ಅವರ ಪುತ್ರರು. ಶಾಲಾ ಕಾಲೇಜು ದಿನಗಳಲ್ಲಿಯೇ ರಂಗಭೂಮಿ ಅವರನ್ನು ಕೈಬೀಸಿ ಕರೆಯಿತು. ಕಾರ್ಕಳದಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ ಅವರು, ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಚಲನ ಚಿತ್ರ ನಟ, ನಾಟಕ ಹಾಸ್ಯ ಕಲಾವಿದ, ಚುಟುಕು, ಪ್ರಾಸ ಸಾಹಿತಿಯಾಗಿ ಗುರುತಿಸಿಕೊಂಡಿದ್ದವರು ಸ್ನೇಹ ಶೀಲ ವ್ಯಕ್ತಿತ್ವ ಕವಿ ಹೀಗೆ ಶೇಖರ ಭಂಡಾರಿ ಬಹುಮುಖ ಪ್ರತಿಭೆಯ ಕಲಾವಿದನಾಗಿದ್ದರು.