ರಾಜʼಪಥ (ರಾಜೇಂದ್ರ ಭಟ್‌ ಬರಹ)

ರಾಜಪಥ-ಇನ್ನಷ್ಟು ಯೋಧರ ಕುಟುಂಬದ ಕಣ್ಣೀರ ಕಥೆಗಳು

ಹುತಾತ್ಮ ಯೋಧರ ಕುಟುಂಬದ ಜತೆ ದೇಶ ಒಂದಾಗಿ ನಿಲ್ಲಬೇಕು ಯೋಧ ಪ್ರಾಂಜಲ್ ಅವರ ಬಲಿದಾನ ಇಡೀ ಕನ್ನಡ ನಾಡಿನಲ್ಲಿ ಉಂಟುಮಾಡಿದ ದುಃಖದ ಅಲೆ ಯುವ ಸಮುದಾಯವನ್ನು ಬಡಿದೆಬ್ಬಿಸಿರುವುದು ಖಂಡಿತ. ಅಲ್ಲಲ್ಲಿ ಯೋಧರ ಸಂಸ್ಮರಣ ಕಾರ್ಯಕ್ರಮಗಳು ಈಗ ನಡೆಯುತ್ತಿವೆ. ಕಾರ್ಕಳ ತಾಲೂಕಿನ ಹಾಳೆಕಟ್ಟೆ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಪ್ರಾಂಜಲ್ ಸ್ಮಾರಕದ ಭೂಮಿ ಪೂಜೆಯ ಕಾರ್ಯಕ್ರಮ ತುಂಬ ಭಾವುಕ ಆಗಿತ್ತು. ಇಡೀ ಊರಿಗೆ ಊರೇ ಸೇರಿ ಕಂಬನಿ ಮಿಡಿದದ್ದು ಒಂದು ಅನೂಹ್ಯ ಸಂವೇದನೆ. ಇನ್ನಷ್ಟು ಸೈನಿಕರ ಕುಟುಂಬದ […]

ರಾಜಪಥ-ಇನ್ನಷ್ಟು ಯೋಧರ ಕುಟುಂಬದ ಕಣ್ಣೀರ ಕಥೆಗಳು Read More »

ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್

ಹುತಾತ್ಮ ಯೋಧರ ಸಂಸ್ಕಾರ ಆಗುವಾಗ ಅವರ ಕುಟುಂಬದ ಭಾವನೆ ಹೇಗಿರುತ್ತದೆ? ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಪತ್ನಿ ರಾಷ್ಟ್ರಧ್ವಜವನ್ನು ಸ್ವೀಕರಿಸುವಾಗ ತೋರಿದ ದಿಟ್ಟತನ ನಿನ್ನೆ ನೋಡಿದ ಒಂದು ವೀಡಿಯೊ ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ನನ್ನ ನಿದ್ದೆ ಹಾರಿಹೋಯಿತು. ಅದು ಮೊನ್ನೆ ಹುತಾತ್ಮರಾದ ಸೈನಿಕ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೀಡಿಯೊ. ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ರಾಷ್ಟ್ರಕ್ಕೆ ಮಾದರಿ ಅವರ ಅಪ್ಪ ಎಂ.ವೆಂಕಟೇಶ್ ಮಂಗಳೂರಿನ ಎಂಆರ್‌ಪಿಎಲ್ ಎಂಬ ಮಹಾನ್ ಕೈಗಾರಿಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್

ರಾಜಪಥ-ಹುತಾತ್ಮ ಯೋಧರ ಕುಟುಂಬಗಳಿಗೆ ಇರಲಿ ನಮ್ಮದೊಂದು ಸೆಲ್ಯೂಟ್ Read More »

ರಾಜಪಥ-ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ

ಸಚಿನ್ ತೆಂಡೂಲ್ಕರ್ ‘ಟೆನ್ನಿಸ್ ಎಲ್ಬೋ’ ಎಂಬ ತೀವ್ರ ನೋವನ್ನು ಗೆದ್ದದ್ದು ಹೇಗೆ? ‘ಗಾಡ್ ಆಫ್ ಕ್ರಿಕೆಟ್ ‘ ಎಂದು ಎಲ್ಲರಿಂದ ಕರೆಸಿಕೊಂಡ ಸಚಿನ್ ತೆಂಡೂಲ್ಕರ್ 24 ವರ್ಷ ಭಾರತಕ್ಕಾಗಿ ಆಡಿದ್ದು, ಶತಕಗಳ ಶತಕವನ್ನು ಪೂರ್ತಿ ಮಾಡಿದ್ದು, ಕ್ರಿಕೆಟಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದದ್ದು ನಮಗೆ ಗೊತ್ತೇ ಇದೆ. ಅದೇ ಸಚಿನ್ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಸಂಭವಿಸಿದ ಒಂದು ತೀವ್ರವಾದ ದೈಹಿಕ ನೋವು, ಅದನ್ನು ಆತ ಗೆದ್ದ ರೀತಿ ಅದು ಅದ್ಭುತವೇ ಆಗಿದೆ. ಅದು ಟೆನ್ನಿಸ್

ರಾಜಪಥ-ಎಲ್ಲರೂ ಆತನ ಕ್ರಿಕೆಟ್ ಭವಿಷ್ಯ ಮುಗಿಯಿತು ಎನ್ನುವಾಗ ಆತ ಬೂದಿಯಿಂದ ಎದ್ದು ಬಂದಿದ್ದ Read More »

ರಾಜಪಥ-ಪುಸ್ತಕಗಳನ್ನು ಓದುವ, ಓದಿಸುವ ನಿಮ್ಮ ಅಭಿಯಾನ ಶುರುವಾಗಲಿ

10-14 ವಯಸ್ಸಿನ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಸಣ್ಣ ಸಣ್ಣ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಯಾವ ರೀತಿಯ ಪುಸ್ತಕಗಳನ್ನು ಓದಿಸಬೇಕು ಎಂದು ನಿನ್ನೆಯ ಸಂಚಿಕೆಯಲ್ಲಿ ವಿವರವಾಗಿ ಬರೆದಿದ್ದೆ. ಇಂದು 10-14 ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ಆಗುವ ಪುಸ್ತಕಗಳ ಬಗ್ಗೆ ನಾನು ಬರೆಯಬೇಕು. ಈ ವಯಸ್ಸಿನ ಮಕ್ಕಳು ತಮ್ಮ ಕಲ್ಪನಾ ಲೋಕವನ್ನು ವಿಸ್ತಾರ ಮಾಡುತ್ತ ನಿಧಾನವಾಗಿ ವಾಸ್ತವದ ಕಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಅವರಲ್ಲಿ ಸ್ವಅರಿವು ದಟ್ಟವಾಗಿ ಮೂಡುವ ವಯಸ್ಸದು. ಅಂತಹ ಮಕ್ಕಳಿಗೆ ವಾಸ್ತವದ ಪರಿಕಲ್ಪನೆ ಮೂಡಿಸುವ ಪುಸ್ತಕಗಳನ್ನು

ರಾಜಪಥ-ಪುಸ್ತಕಗಳನ್ನು ಓದುವ, ಓದಿಸುವ ನಿಮ್ಮ ಅಭಿಯಾನ ಶುರುವಾಗಲಿ Read More »

ರಾಜಪಥ-ಓದುವುದರಲ್ಲಿ ಇರುವ ಸುಖ ಗೊತ್ತೇ ಇರಲಿಲ್ಲ…

ನಿಮ್ಮ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಮಕ್ಕಳ ಕೈಗೆ ಮೊಬೈಲ್ ಬಂದ ನಂತರ ಪುಸ್ತಕ ಓದುವುದು ಕಡಿಮೆ ಆಗಿದೆ ಎನ್ನುವ ಮಾತು ಬಹಳ ಮಂದಿ ಹೇಳುತ್ತಿದ್ದಾರೆ. ಅದು ಪೂರ್ತಿ ಸತ್ಯ ಅಲ್ಲ ಎಂದು ನಾನು ಹೇಳುತ್ತೇನೆ. ಇಂದು ಮೊಬೈಲ್‌ನ ಮೂಲಕ ಬರೆಯುವ ಮತ್ತು ಓದುವವರ ಸಂಖ್ಯೆ ತುಂಬಾ ಹೆಚ್ಚಿದೆ. ತಮಗೆ ಇಷ್ಟವಾದ ಪುಸ್ತಕಗಳ ಪಿಡಿಎಫ್ ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ಓದುವವರ ಸಂಖ್ಯೆ ಇಂದು ಹೆಚ್ಚಿದೆ.ಆದರೆ ಪುಸ್ತಕವನ್ನು ಓದುವ ಖುಷಿ ಮತ್ತು ಅನುಭವಗಳು ನಿಮಗೆ ಮೊಬೈಲ್ ಓದಿನಲ್ಲಿ ಸಿಗುವುದಿಲ್ಲ

ರಾಜಪಥ-ಓದುವುದರಲ್ಲಿ ಇರುವ ಸುಖ ಗೊತ್ತೇ ಇರಲಿಲ್ಲ… Read More »

ರಾಜಪಥ-ತುಳಸಿ ಎಂಬ ವೃಂದಾವನ

ಉತ್ಥಾನ ದ್ವಾದಶಿಯ ತುಳಸಿ ಹಬ್ಬ ಇಂದು ಹಿಂದೂಗಳ ಸಣ್ಣ, ದೊಡ್ಡ ಪ್ರತೀಯೊಂದು ಹಬ್ಬವೂ ಒಂದಲ್ಲ ಒಂದು ಪೌರಾಣಿಕ ಕಥೆಯ ಹಿನ್ನೆಲೆಯನ್ನು ಹೊಂದಿರುತ್ತದೆ. ಕಾರ್ತಿಕ ಮಾಸದಲ್ಲಿ ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ತುಳಸಿ ಪೂಜೆಯೂ ಒಂದು. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಹಿಂದೂಗಳಿಗೆ ತುಳಸಿ ಹಬ್ಬದ ಸಂಭ್ರಮ. ಮನೆಯ ಸಲ್ಲಕ್ಷಣಗಳಲ್ಲಿ ತುಳಸಿ ಕೂಡ ಒಂದು ಹಿಂದೂ ಧರ್ಮದ ನಂಬಿಕೆಗಳು ಎಷ್ಟು ವೈಜ್ಞಾನಿಕ ತಳಹದಿಯನ್ನು ಹೊಂದಿದೆ ಎಂದು ನಾವು ಅಧ್ಯಯನ ಮಾಡುತ್ತ ಮುಂದೆ ಹೋದಾಗ ನೂರಾರು ಅಚ್ಚರಿಯ ಸಂಗತಿಗಳು ನಮಗೆ

ರಾಜಪಥ-ತುಳಸಿ ಎಂಬ ವೃಂದಾವನ Read More »

ರಾಜಪಥ-ಅಂದು ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು ಥೇಟ್ ಕಾಂತಾರ ಸ್ಟೈಲಲ್ಲಿ

ಅಂತಹ ವೀರೋಚಿತ ಇನ್ನಿಂಗ್ಸ್ ಟಿವಿಯಲ್ಲಿ ನೇರಪ್ರಸಾರ ಆಗಲಿಲ್ಲ ಮೊನ್ನೆ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಮೈಯಲ್ಲಿ ಆವೇಶ ಬಂದ ಹಾಗೆ ಬ್ಯಾಟ್ ಬೀಸಿ ಡಬಲ್ ಸೆಂಚುರಿ ಬಾರಿಸಿದಾಗ ಮನಸ್ಸು ಬೇಡ ಬೇಡ ಅಂದರೂ 1983ರಷ್ಟು ಹಿಂದಕ್ಕೆ ಓಡಿತು. ಅದು ಭಾರತದ ಕಪ್ತಾನ ಕಪಿಲದೇವ್ ಅವರ ವೀರೋಚಿತ ಇನ್ನಿಂಗ್ಸ್ ಆಗಿತ್ತು. ಭಾರತ 1983ರ ಏಕದಿನದ ವಿಶ್ವಕಪ್ ಗೆದ್ದದ್ದು, ಕಪಿಲ್ ಹುಡುಗರು ಇಂಗ್ಲೆಂಡ್ ನೆಲದಲ್ಲಿ ಬಲಿಷ್ಠ ವಿಂಡೀಸನ್ನು ಗೆದ್ದು ಚಾಂಪಿಯನ್ ಆದದ್ದು ನಮಗೆಲ್ಲ ಗೊತ್ತಿದೆ.

ರಾಜಪಥ-ಅಂದು ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು ಥೇಟ್ ಕಾಂತಾರ ಸ್ಟೈಲಲ್ಲಿ Read More »

ರಾಜಪಥ-ಯುವರಾಜ್ ಜೈನ್ ದುಡಿಮೆಗೆ ಕಲ್ಲಬೆಟ್ಟಿನ ಕಲ್ಲು ಕರಗಿತು

ಮೂಡುಬಿದಿರೆಯ ಶ್ರೇಷ್ಠ ಎಕ್ಸಲೆಂಟ್ ಕಾಲೇಜು ಅರಳಿದ ರೀತಿ ಅದ್ಭುತ ಇಂದವರಿಗೆ ಸಾರ್ವಜನಿಕ ಅಭಿನಂದನೆ ನಾನು ತುಂಬಾ ಪ್ರೀತಿಸಿದ ಮತ್ತು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಒಬ್ಬ ಶಿಕ್ಷಕರು ಇಂದು ಮೂಡುಬಿದಿರೆಯ ಕಲ್ಲಬೆಟ್ಟು ಎಂಬಲ್ಲಿ ಬಹು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿದ್ದು, ಅಂದಾಜು 45 ಎಕರೆಯ ಹಸಿರು ಕ್ಯಾಂಪಸ್ ಕಟ್ಟಿ ನಿಲ್ಲಿಸಿದ್ದು ಸಣ್ಣ ಸಾಧನೆ ಅಲ್ಲ. ಅದರ ಹಿಂದೆ ಭಾರಿ ದೊಡ್ಡದಾದ ಪರಿಶ್ರಮ, ಸಂಕಷ್ಟ, ಸವಾಲು, ದುಡಿಮೆ ಎಲ್ಲವೂ ಇದ್ದವು. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು, ಅಪಮಾನ

ರಾಜಪಥ-ಯುವರಾಜ್ ಜೈನ್ ದುಡಿಮೆಗೆ ಕಲ್ಲಬೆಟ್ಟಿನ ಕಲ್ಲು ಕರಗಿತು Read More »

ಕೊಳಚೆಗೇರಿಯಲ್ಲಿ ಕೂಡ ಕನಸುಗಳು ಅರಳಬಹುದು

ಶ್ರೀಮಂತರ ಮಕ್ಕಳು ಕಾಣುವುದಕ್ಕಿಂತ ಹೆಚ್ಚು ಶ್ರೀಮಂತ ಕನಸುಗಳನ್ನು ಬಡವರ ಮಕ್ಕಳು ಕಾಣುತ್ತಾರೆ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು-ನಮ್ಮ ಹಿರಿಯರು ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು ಎಂಬ ಆಶಯದಲ್ಲಿ ಈ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ. ‘ಗುಡಿಸಲಲ್ಲಿ ಪ್ರತಿಭೆಗಳು ಹುಟ್ಟುತ್ತವೆ ಮತ್ತು ಅರಮನೆಯಲ್ಲಿ ಸಾಯುತ್ತವೆ’ ಎಂದು ಶೇಕ್ಸಪಿಯರ್ ಹೇಳಿದ್ದಾನೆ. ಎಲ್ಲರ ಕನಸುಗಳೂ ಹಾಗೆ. ಶ್ರೀಮಂತರ ಮಕ್ಕಳು ಕಾಣುವುದಕ್ಕಿಂತ ಹೆಚ್ಚು ಶ್ರೀಮಂತ ಕನಸುಗಳನ್ನು ಬಡವರ ಮಕ್ಕಳು ಕಾಣುತ್ತಾರೆ

ಕೊಳಚೆಗೇರಿಯಲ್ಲಿ ಕೂಡ ಕನಸುಗಳು ಅರಳಬಹುದು Read More »

ರಾಜಪಥ-ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್

ದೇಶಕ್ಕಾಗಿ ಈ ರೀತಿಯ ತ್ಯಾಗ ಮಾಡಿದವರು ಬೇರೆ ಇದ್ದಾರೆಯೇ? ಡಾ. ಸೂರ್ಯನಾಥ ಕಾಮತ್ ಅವರು ಬರೆದ ʼತ್ಯಾಗ ವೀರʼ ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ತುಂಬ ಅಣೆಕಟ್ಟು ಒಡೆದು ನೀರು ಹರಿಯಿತು. ಅರವಿಂದ ಚೊಕ್ಕಾಡಿ ಬರೆದ ‘ಕಬೀರನಾದ ಕುಬೇರ’ ಪುಸ್ತಕವೂ ತುಂಬಾ ಭಾವಪೂರ್ಣ ಆಗಿದೆ. ತನ್ನ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ನಿಂತ, ಸ್ವಾತಂತ್ರ್ಯದ ಹೋರಾಟದ ಯಜ್ಞಕ್ಕೆ ಹವಿಸ್ಸಾಗಿ ತನ್ನನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿದ ಕಾರ್ನಾಡ್ ಸದಾಶಿವ ರಾವ್ ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು. ಕಾರ್ನಾಡ್

ರಾಜಪಥ-ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್ Read More »

error: Content is protected !!
Scroll to Top