Author name: Newskarkala Desk

ಕೊರೊನಾ ಟೆಸ್ಟ್ ಮಾಡಿಸಲು ಪ್ರಿಸ್ಕ್ರಿಪ್ಶನ್‌ ಬೇಡ

ದಿಲ್ಲಿ: ಈ ದಿನಗಳಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಕೊರೊನಾ ವೈರಸ್‌ ಭೀತಿಯಿದೆ.ದೇಶದಲ್ಲಿ ಅನ್ಲಾಕ್‌ ಪ್ರಾರಂಭವಾದ ಬಳಿಕ ಪ್ರತಿಯೊಬ್ಬರೂ ಒಂದು ದಿನ ಸೋಂಕು ಹೆಚ್ಚಾಗಬಹುದು ಎಂದು ಯೋಚಿಸಲು ಪ್ರಾರಂಭಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿ ಅದು ನೆಗೆಟಿವ್ ಎಂದು ಬಂದಾಗಲಷ್ಟೇ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೊರೊನಾ ಟೆಸ್ಟ್ ಮಾಡಿಸಲು ಸಾಧ್ಯವಿಲ್ಲ ಎಂಬುರಿಂದಾಗಿ ಹಲವು ಜನರು ಕರೋನಾ ಪರೀಕ್ಷೆಯನ್ನು ಮಾಡಲು ಹಿಂಜರಿಯುತ್ತಾರೆ. ಆದರೆ ಈಗ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗ ನೀವು ಯಾವುದೇ ವೈದ್ಯಕೀಯ ಸ್ಲಿಪ್

ಕೊರೊನಾ ಟೆಸ್ಟ್ ಮಾಡಿಸಲು ಪ್ರಿಸ್ಕ್ರಿಪ್ಶನ್‌ ಬೇಡ Read More »

ಕೊರೊನಾ ದುರಂತ ಕತೆಗಳು

ರೈಲು ಇಲ್ಲದೆ ಮುಂಬಯಿ ಇಲ್ಲ 79 ವರ್ಷದ ಜೆ.ಆರ್‌. ಭೋಸಲೆ ಮುಂಬಯಿಯ ಕಾರ್ಮಿಕ ನಾಯಕ.ಸುಮಾರು ಆರು ದಶಕಗಳಿಂದ ಮುಂಬಯಿಯ ಲೋಕಲ್‌ ರೈಲುಗಳನ್ನು ಹತ್ತಿರದಿಂದ ನೋಡುತ್ತಾ ಬಂದವರು.1976ರ ಕಾರ್ಮಿಕ ಮುಷ್ಕರ ಅವರ ಮನಸಿನಲ್ಲಿನ್ನೂ ಹಸಿರಾಗಿದೆ.ಜಗತ್ತಿನ ಅತಿ ದೊಡ್ಡ ಕಾರ್ಮಿಕ ಮುಷ್ಕರ ಎಂದು ಹೆಸರಾಗಿದ್ದ ಈ ಮುಷ್ಕರದ ಸಂದರ್ಭದಲ್ಲಿ 20 ದಿನ ರೈಲು ಸಂಚಾರ ಸ್ಥಗಿತವಾಗಿತ್ತು.ಅನಂತರ 2006ರಲ್ಲಿ ಲೋಕಲ್‌ ರೈಲುಗಳಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದಾಗೊಮ್ಮೆ 24 ತಾಸುಗಳ ಮಟ್ಟಿಗೆ ಲೋಕಲ್‌ ರೈಲು ಸಂಚಾರ ಬಂದ್‌ ಆಯ್ತು.ಆದರೆ ಇವೆಲ್ಲ ತಾತ್ಕಾಲಿಕ

ಕೊರೊನಾ ದುರಂತ ಕತೆಗಳು Read More »

ರಾಜ್ಯ ಸರ್ಕಾರವೂ ಕೊಡಲಿದೆ ಉಚಿತ ಪಡಿತರ

ಐದು ತಿಂಗಳು ಸಿಗಲಿದೆ ಉಚಿತ ದವಸ ಧಾನ್ಯ ಬೆಂಗಳೂರು:ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯಡಿ ಮುಂದಿನ 5 ತಿಂಗಳು ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದ ಬೆನ್ನಲ್ಲೆ, ರಾಜ್ಯ ಸರ್ಕಾರವೂ ಗ್ರಾಹಕರಿಗೆ ಅದೇ ಮಾದರಿಯಲ್ಲಿ ಆಹಾರಧಾನ್ಯ ವಿತರಿಸಲು ಮುಂದಾಗಿದೆ. ಈ ತಿಂಗಳಿನಿಂದಲೇ ಅನ್ವಯವಾಗುವಂತೆ ಮುಂದಿನ ಐದು ತಿಂಗಳು ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ , ಬೇಳೆ , ಗೋಧಿ, ರಾಗಿ ವಿತರಣೆ ಮಾಡಲು ತೀರ್ಮಾನಿಸಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ

ರಾಜ್ಯ ಸರ್ಕಾರವೂ ಕೊಡಲಿದೆ ಉಚಿತ ಪಡಿತರ Read More »

ಈ ಸಲ ಲಾಲ್ ಬಾಗ್ಚಾ ರಾಜನ ಎತ್ತರ ಬರೀ 3 ಅಡಿ

ಮುಂಬಯಿ: ನಗರದ ಅತಿ ಪ್ರಸಿದ್ಧ ಗಣೇಶ ಮಂಡಲಗಳಲ್ಲಿ ಒಂದಾಗಿರುವ ಲಾಲ್‌ ಬಾಗ್ಚಾ ರಾಜನ ಎತ್ತರ ಈ ಸಲ ಗರಿಷ್ಠ ಎಂದರೆ ಮೂರರಿಂದ ನಾಲ್ಕು ಅಡಿ ಮಾತ್ರ ಇರಲಿದೆ.ಕೊರೊನಾ ವೈರಸ್‌ ಮಹಾರಾಷ್ಟ್ರದ ಜನಪ್ರಿಯ ಹಬ್ಬವಾಗಿರುವ ಗಣೇಶೋತ್ಸವವನ್ನು ಕಾಡುವುದು ನಿಶ್ಚಿತ. ಹೀಗಾಗಿ ಸರಕಾರ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಿದೆ. ದೊಡ್ಡ ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲಾಗಿದೆ.ಹೀಗಾಗಿ ಲಾಲ್‌ ಬಾಗ್ಚಾ ರಾಜ ಗಣೇಶ ಮಂಡಳಿಯವರು ಚಿಕ್ಕ ವಿಗ್ರಹವನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದಾರೆ. ಈ ಸಲ ಗಣೇಶೋತ್ಸವವನ್ನು ಹೆಚ್ಚು ಭಕ್ತಿ ಮತ್ತು ಕಡಿಮೆ ಆಡಂಬರದಿಂದ

ಈ ಸಲ ಲಾಲ್ ಬಾಗ್ಚಾ ರಾಜನ ಎತ್ತರ ಬರೀ 3 ಅಡಿ Read More »

ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರಿಂದ ನೆರವು

ಬೆಂಗಳೂರು:  ಕಳೆದ ನಾಲ್ಕು ತಿಂಗಳಿನಿಂದ ವೇತನ ಇಲ್ಲದೆ ಜೀವನ ನಡೆಸಲು ಪರದಾಡುತ್ತಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಖಾಯಂ ಉಪನ್ಯಾಸಕರು ತಮ್ಮ ಒಂದು ದಿನದ ವೇತನ ನೀಡಿ ನೆರವಾಗಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು ಮೂರು ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಜೂನ್‍ನಲ್ಲಿ ಅವರನ್ನು ನೇಮಿಸಿಕೊಂಡು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಹೇಗೋ ಜೀವನ

ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರಿಂದ ನೆರವು Read More »

ಇಂದಿನಿಂದ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ

ತೈಲ ಕಂಪನಿಗಳು  ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ದಿಲ್ಲಿ: ಜುಲೈ ತಿಂಗಳಲ್ಲಿ ನಿಮ್ಮ ಜೇಬಿನ ಹೊರೆ ಹೆಚ್ಚಾಗುವ  ಹಲವು ಬದಲಾವಣೆಗಳು ಸಂಭವಿಸುತ್ತಿವೆ. ಆದರೆ ಈ ಬದಲಾವಣೆಗಳ ಮಧ್ಯೆ ಅಡಿಗೆ ವೆಚ್ಚವೇ ದೊಡ್ಡ ಹೊರೆಯಾದಂತೆ ಕಾಣುತ್ತಿದೆ. ತಿಂಗಳ ಮೊದಲ ದಿನ, ಸಾಮಾನ್ಯ ಜನರ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್  ದರವನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 1 ರೂ. ಹೆಚ್ಚಿಸಲಾಗಿದೆ.

ಇಂದಿನಿಂದ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ Read More »

ಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು

ಕಾರ್ಕಳ : ಏಕದಿನ ಕ್ರಿಕೆಟ್‌ನಲ್ಲಿ ಒಂದೊಂದು ರನ್‌ ಕೂಡ ಮುಖ್ಯ.ಶತಕ , ಅರ್ಧ ಶತಕ ಬಾರಿಸಿದರಂತೂ ಗ್ರೇಟ್.‌ಆದರೆ   ಕ್ರಿಕೆಟ್‌ನ ಯಾವುದೇ ಸ್ವರೂಪದಲ್ಲಿ, ಅರ್ಧ ಶತಕಕ್ಕೆ ಶತಕದಷ್ಟು ಮಹತ್ವ ನೀಡಲಾಗಿಲ್ಲ. ಆದರೂ ಅರ್ಧಶತಕಗಳನ್ನು ಆಟಗಾರನ ವೈಯಕ್ತಿಕ ಸಾಧನೆಯಾಗಿ ಪರಿಗಣಿಸುತ್ತಾರೆ. ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಅರ್ಧಶತಕವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನಿಗೆ ಅರ್ಧಶತಕ ಕಡಿಮೆ ಮಹತ್ವದ್ದಲ್ಲ. ಇಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಐದು ಬ್ಯಾಟಿಂಗ್‌ ದಿಗ್ಗಜರ ವಿವರವಿದೆ. ಸಚಿನ್

ಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು Read More »

ಬಿದಿರಿನ ಕಡ್ಡಿಯಲ್ಲಿ ಮತದಾನ , ಸಿರಿಂಜ್ ಮೂಲಕ ಶಾಹಿ ಗುರುತು ಬಿಹಾರ ಚುನಾವಣೆಗೆ ನಡೆಯುತ್ತಿದೆ ವಿಶೇಷ ತಯಾರಿ

ಕೊರೊನಾ ಸಂಕಷ್ಟಗಳ ನಡುವೆಯೇ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. ಕೊರೊನ ಕಾಲದ ಚುನಾವಣೆ ಮಾಮೂಲಿನಂತಿರುವುದಿಲ್ಲ.ಜನರು ಮತಗಟ್ಟೆಗೆ ಬರುವಂತೆ ಮಾಡಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳವುದು ಅನಿವಾರ್ಯ. ಹೇಗಿರಬಹುದು ದೆ ಈ ಬಾರಿಯ ಚುನಾವಣೆಯ ತಯಾರಿ.ಇಲ್ಲಿದೆ ಒಂದಷ್ಟು ವಿವರ. ದಿಲ್ಲಿ: ಕೊರೊನಾ ಕಾಲದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕೋಟ್ಯಂತರ ಮತದಾರರನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಇವಿಎಂಗಳನ್ನು ಸ್ಪರ್ಶಿಸದೆಯೇ ಬಿದಿರಿನ ಕಡ್ಡಿಯ ಮೂಲಕ ಮತದಾನ, ಪೋಲಿಂಗ್ ಆಫಿಸರ್

ಬಿದಿರಿನ ಕಡ್ಡಿಯಲ್ಲಿ ಮತದಾನ , ಸಿರಿಂಜ್ ಮೂಲಕ ಶಾಹಿ ಗುರುತು ಬಿಹಾರ ಚುನಾವಣೆಗೆ ನಡೆಯುತ್ತಿದೆ ವಿಶೇಷ ತಯಾರಿ Read More »

ಮೋದಿ ಕಾರ್ಯವನ್ನು ಹೊಗಳಿದ ಸಿದ್ದರಾಮಯ್ಯ

ಬೆಂಗಳೂರು:  ಮಂಗಳವಾರ  ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್‌ ವರೆಗೆ ವಿಸ್ತರಿಸುವ ನಿರ್ಧಾರವನ್ನು ಘೋಷಿಸಿದರು. ಇದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೆಚ್ಚಿಕೊಂಡು ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಮೋದಿ ವಿರುದ್ಧ ಕಿಡಿಕಾರಲು ಮರೆತಲಿಲ್ಲ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್  ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ

ಮೋದಿ ಕಾರ್ಯವನ್ನು ಹೊಗಳಿದ ಸಿದ್ದರಾಮಯ್ಯ Read More »

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ

ದಿಲ್ಲಿ: ಕೊರೊನಾ ವೈರಸ್ ಗೆ ಲಸಿಕೆ ನೀಡಲು ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಲಸಿಕೆ ಲಭ್ಯವಾಗುವ ಸಂದರ್ಭದಲ್ಲಿ ಕೈಗಪಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೀಸಲು ನಡೆದ ಸಭೆಯಲ್ಲಿ  ಪ್ರಧಾನಿ ಭಾಗವಹಿಸಿದರು. ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ತಂತ್ರಜ್ಞಾನ ಸಾಧನಗಳ ಮೌಲ್ಯಮಾಪನ ಮಾಡಲು ಪಿಎಂಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂತಹ ದೊಡ್ಡ ಪ್ರಮಾಣದ ಲಸಿಕೆ ಕಾರ್ಯಕ್ರಮದ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಭಾರತೀಯ ಮತ್ತು ಜಾಗತಿಕ ಲಸಿಕೆ ಅಭಿವೃದ್ಧಿ ಪ್ರಯತ್ನಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು.

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ Read More »

error: Content is protected !!
Scroll to Top