ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ಗ್ಯಾಂಗ್‌ ಮೇಲೆ ಕ್ರಮವಹಿಸಿ – ಸಿಎಂಗೆ ಸುನಿಲ್‌ ಕುಮಾರ್‌ ಆಗ್ರಹ

ಕಾರ್ಕಳ : ಧರ್ಮಸ್ಥಳ ಪ್ರಕರಣ ಒಂದು ಯೋಜಿತ ಷಡ್ಯಂತ್ರ ಎಂಬುದಕ್ಕೆ ಕ್ಷಣ ಕ್ಷಣಕ್ಕೂ ಮಾಹಿತಿ ಲಭಿಸುತ್ತಿದೆ. ಅನನ್ಯಾ ಭಟ್ ತನ್ನ ಮಗಳೇ ಅಲ್ಲ ಎಂದು ಈ ಪ್ರಕರಣದ ಕೇಂದ್ರ ಬಿಂದು ಸುಜಾತ ಭಟ್ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇಷ್ಟು ದಿನಗಳ ಕಾಲ ಸಮಾಜದ ದಿಕ್ಕನ್ನು ತಪ್ಪಿಸಿದ ಪ್ರತಿಯೊಬ್ಬರನ್ನೂ ಕಾನೂನು ರೀತಿಯಲ್ಲಿ ದಂಡಿಸುವುದಕ್ಕೆ ಇದು ಸಕಾಲ. ತಕ್ಷಣ ಈ ಗ್ಯಾಂಗ್ ವಿರುದ್ದ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ.

ಬುರುಡೆ ಬಯಲು
ಅನನ್ಯಾ ಭಟ್‌ ನನ್ನ ಮಗಳಲ್ಲ. ಗಿರೀಶ್‌ ಮಟ್ಟಣ್ಣನವರ್‌ ಹಾಗೂ ಜಯಂತ್‌ ಟಿ. ಆ ರೀತಿ ಹೇಳಿಸಿದ್ದಾರೆ. ನನ್ನಿಂದ ತಪ್ಪಾಗಿದೆ. ಇದಕ್ಕಾಗಿ ಧರ್ಮಸ್ಥಳದ ಹಾಗೂ ದೇಶದ ಕ್ಷಮೆ ಯಾಚಿಸುತ್ತೇನೆ ಎಂದು ಸುಜಾತಾ ಭಟ್‌ ಆ. 22ರಂದು ಯೂಟ್ಯೂಬ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸುನಿಲ್‌ ಕುಮಾರ್‌ ಸಮಾಜದ ದಿಕ್ಕು ತಪ್ಪಿಸಿದ ಪ್ರತಿಯೊಬ್ಬರನ್ನೂ ಕಾನೂನು ರೀತಿ ದಂಡಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.















































































error: Content is protected !!
Scroll to Top