ಖಾತೆ ಹಂಚಿಕೆಯೂ ಇಂದೇ ನಡೆಯಲಿದೆ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೊನೆಗೂ 24 ಸಚಿವರ ಪಟ್ಟಿಗೆ ಒಪ್ಪಿಗೆ ನೀಡಿದೆ. ಈ 24 ಸಚಿವರು ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಿನ್ನೆ ಪ್ರಮಾಣವಚನ ಸ್ವೀಕರಿಸಲಿರುವ 24 ನೂತನ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಸಂಪುಟ ವಿಸ್ತರಣೆ ಸಂಬಂಧ ಎರಡು ದಿನ ದಿಲ್ಲಿಯಲ್ಲಿ ತೀವ್ರ ಕಸರತ್ತು ನಡೆಸಿದ್ದ ಸಿದ್ದರಾಮಯ್ಯ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆಯ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾಗಿ ಇಂದೇ ಖಾತೆ ಹಂಚಿಕೆಯೂ ಆಗಲಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎಲ್ಲ 24 ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಅವರನ್ನು ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮಾಡಲಾಗಿದೆ.
ನೂತನ ಸಚಿವರ ಪಟ್ಟಿ :
ಎಚ್.ಕೆ.ಪಾಟೀಲ್
ಕೃಷ್ಣ ಭೈರೇಗೌಡ
ಚಲುವರಾಯಸ್ವಾಮಿ
ಕೆ.ವೆಂಕಟೇಶ್
ಎಚ್.ಸಿ.ಮಹದೇವಪ್ಪ
ಈಶ್ವರ ಖಂಡ್ರೆ
ಕೆ.ಎನ್.ರಾಜಣ್ಣ
ದಿನೇಶ್ ಗುಂಡೂರಾವ್
ಶರಣಬಸಪ್ಪ ದರ್ಶನಾಪುರ
ಶಿವಾನಂದ ಪಾಟೀಲ್
ಆರ್.ಬಿ.ತಿಮ್ಮಾಪುರ
ಎಸ್.ಎಸ್.ಮಲ್ಲಿಕಾರ್ಜುನ
ಶಿವರಾಜ ತಂಗಡಗಿ
ಡಾ.ಶರಣ ಪ್ರಕಾಶ್ ಪಾಟೀಲ್
ಮಂಕಾಳು ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್
ರಹೀಂ ಖಾನ್
ಡಿ.ಸುಧಾಕರ್
ಸಂತೋಷ್ ಲಾಡ್
ಬೋಸರಾಜು
ಬಿ.ಎಸ್.ಸುರೇಶ್
ಮಧು ಬಂಗಾರಪ್ಪ
ಎಂ.ಸಿ.ಸುಧಾಕರ್
ಬಿ.ನಾಗೇಂದ್ರ