ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ಮಿಂಚುತ್ತಿರುವ ಕಾರ್ಕಳದ ಸಹೋದರಿಯರು

0

ಕಾರ್ಕಳ: ತೆಳ್ಳಾರು ರಸ್ತೆ ಸಾಂತ್ರಬೆಟ್ಟುವಿನ ರಾಜೇಂದ್ರ ಪ್ರಸಾದ್ ಹಾಗೂ ಪ್ರಿಯಾ ದಂಪತಿಯ ಪುತ್ರಿಯರಾದ ಶ್ರಿಯಾ ಮತ್ತು ಧ್ರುವಿ ವಾಲಿಬಾಲ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ವಿಶೇಷವಾದ ಸಾಧನೆ ಮಾಡಿದ್ದಾರೆ.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಶ್ರಿಯಾ ರಾಜ್ಯ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಫೆ. 2 ರಿಂದ ಶುರುವಾಗಿ 9ವರೆಗೆ ಅಸ್ಸಾಂನಲ್ಲಿ ನಡೆಯುತ್ತಿರುವ ರಾಷ್ಟ್ರೀಯ 71ನೇ ಮಹಿಳಾ ವಾಲಿಬಾಲ್ ಕ್ರೀಡಾಕೂಟದ ಭಾಗವಹಿಸುತ್ತಿದ್ದಾರೆ.
ಸಹೋದರಿ ಧ್ರುವಿ ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ 10ನೇ ತರಗತಿಯವಿದ್ಯಾರ್ಥಿನಿ. ರಾಜ್ಯ ಸಬ್‌ಜ್ಯೂನಿಯರ್ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ. ಈ ಸಹೋದರಿಯರಿಗೆ ವಿವಿಧ ಸಂದರ್ಭಗಳಲ್ಲಿ ದಿ. ನಾಗೇಶ್, ರಮೇಶ್‌ SDM, ಬಿಜೇಶ್ ಅರಿಗ ಹಾಗೂ ಸಂತೋಷ್ ಡಿಸೋಜ ಮೊದಲಾದವರು ತರಬೇತಿ ನೀಡಿದ್ದಾರೆ.

Previous articleವೇಗವಾಗಿ ಚಲಾಯಿಸಬೇಡ ಬುದ್ಧಿವಾದ ಹೇಳಿದ್ದಕ್ಕೆ ಟಿಪ್ಪರ್‌ ಹರಿಸಿ ವ್ಯಕ್ತಿಯ ಕೊಲೆ
Next articleಗ್ಯಾರೇಜ್‌ನಲ್ಲಿ ಅಗ್ನಿ ದುರಂತ : ಹಲವು ವಾಹನಗಳು ಭಸ್ಮ

LEAVE A REPLY

Please enter your comment!
Please enter your name here