ನೋಟಿನ ಮಳೆ ಸುರಿಸಿದ ವ್ಯಕ್ತಿ ; ಹಣ ಪಡೆಯಲು ಮುಗಿಬಿದ್ದ ಜನ

ಬೆಂಗಳೂರು: ಕೆಆರ್‌ ಮಾರುಕಟ್ಟೆಯಲ್ಲಿ ಜ. 24 ರಂದು, ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ನೋಟುಗಳನ್ನು ಎಸೆಯುವ ಮೂಲಕ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.
ವ್ಯಕ್ತಿಯ ವರ್ತನೆಯಿಂದ ಕೆಳಗೆ ಮಾತ್ರವಲ್ಲದೇ ಫ್ಲೈ ಓವರ್ ಮೇಲೂ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ವ್ಯಕ್ತಿ ತನ್ನ ಹೋಂಡಾ ಆಕ್ಟೀವಾ ಗಾಡಿ ಹತ್ತಿ ಅಲ್ಲಿಂದ ಹೋಗಿದ್ದಾನೆ. ಇನ್ನು ಈ ವ್ಯಕ್ತಿ ಹಣ ಎರಚುತ್ತಿರುವ ವಿಡಿಯೋಗಳು ವ್ಯಾಪಕ ವೈರಲ್ ಆಗಿದ್ದು, ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ವ್ಯಕ್ತಿ ಫ್ಲೈ ಓವರ್ ಮೇಲಿಂದ 10 ರೂ. ನೋಟುಗಳಿರುವ ಸುಮಾರು 3 ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ಸುಮಾರು ಮೂರು ನಾಲ್ಕು ಸಾವಿರದಷ್ಟು ಹಣ ಎಸೆದಿದ್ದಾನೆ. ವಿಡಿಯೋದಲ್ಲಿ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾನೆ.

Latest Articles

error: Content is protected !!