ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್, ಕುಕ್ಕುಂದೂರು-ಮುಂಬೈ ಸಂಘದ 14 ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಜ. 28 ರಂದು ಟಪ್ಪಾಲುಕಟ್ಟೆ ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲಾ ಬಳಿಯ ಸಮಾಜ ಮಂದಿರದಲ್ಲಿ ಜರುಗಲಿದೆ.
ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಬಳಿಕ ಸುನೀಲ್ ಕುಕ್ಕುಂದೂರು ಫ್ರೆಂಡ್ಸ್ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಮಧ್ಯಾಹ್ನ ಗಂಟೆ 12 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 6 ಗಂಟೆಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಘದ ಸದಸ್ಯರಿಂದ ಪ್ರಸನ್ನ ಕುಕ್ಕುಂದೂರು ರಚನೆಯ ಮಾತೆರ್ಲಾ ಬದಲಾಪೆರ್ ನಾಟಕ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ರಚಿಸಿ, ನಿರ್ದೇಶಿಸಿರುವ, ನಮ್ಮ ಕಲಾವಿದೆರ್ ಬೆದ್ರ ತಂಡ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಆತೇ ಪನೊಡಾತೆ ಪ್ರದರ್ಶನಗೊಳ್ಳಲಿದೆ.
ಸಭಾ ಕಾರ್ಯಕ್ರಮ
ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಸಲಿರುವರು. ಬೈಲೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವಿನಾಯಕನಂದಜಿ ಮಹಾರಾಜ್ ಆಶೀರ್ವಚನ ನೀಡಲಿದ್ದು, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಘನ ಉಪಸ್ಥಿತಿಯಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ್ ಶೆಣೈ, ಅತಿಥಿಗಳಾಗಿ ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲೆಯ ಸಂಚಾಲಕ ರಾಜೇಂದ್ರ ಕುಮಾರ್ ಬಳ್ಳಾಲ್, ಮುಂಬಯಿ ವಚನಾ ಹಾಸ್ಪಿಟಾಲಿಟಿ ಸರ್ವಿಸಸ್ನ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಎನ್. ರಾಜ್, ಉದ್ಯಮಿ ಕಮಲಾಕ್ಷ ನಾಯಕ್, ಕುಕ್ಕುಂದೂರು ಫ್ರೆಂಡ್ಸ್-ಮುಂಬೈ ಅಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತರಿರುವರು ಎಂದು ಕುಕ್ಕುಂದೂರು ಫ್ರೆಂಡ್ಸ್ – ಮುಂಬೈ ಸಂಘದ ಅಧ್ಯಕ್ಷ ಸಂದೀಪ್ ಪೂಜಾರಿ, ಗೌರವಾಧ್ಯಕ್ಷ ತ್ರಿವಿಕ್ರಮ ಕಿಣಿ ಹಾಗೂ ಕಾರ್ಯದರ್ಶಿ ಲತೇಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.