Saturday, September 25, 2021
spot_img
Homeಸ್ಥಳೀಯ ಸುದ್ದಿಗೋಪಾಲ್ ಭಂಡಾರಿಯವರ ಬಗ್ಗೆ ಅವಹೇಳನಕಾರಿ ಮಾತು - ಕ್ಷಮೆ ಯಾಚಿಸುವಂತೆ ಶುಭದ ರಾವ್‌ ಆಗ್ರಹ

ಗೋಪಾಲ್ ಭಂಡಾರಿಯವರ ಬಗ್ಗೆ ಅವಹೇಳನಕಾರಿ ಮಾತು – ಕ್ಷಮೆ ಯಾಚಿಸುವಂತೆ ಶುಭದ ರಾವ್‌ ಆಗ್ರಹ

ಕಾರ್ಕಳ‌ : ಮಾರ್ಕೆಟ್ ಉಚ್ಚಂಗಿ ನಗರದ ರಣವೀರ ಕಾಲನಿಯಲ್ಲಿ ನಡೆದ ಸಚಿವರ ಕಾರ್ಯಕ್ರಮದಲ್ಲಿ ಮಾಜಿ ಶಾಸಕ‌ ದಿ. ಗೋಪಾಲ ಭಂಡಾರಿಯವರ ಬಗ್ಗೆ ಉದ್ಯಮಿಯೊಬ್ಬರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಅವರು ಕ್ಷಮೆಯಾಚಿಸಬೇಕು ಇಲ್ಲವಾದರೆ ನಾವೂ ನಿಮ್ಮ ಭಾಷೆಯಲ್ಲಿಯೇ ಉತ್ತರ ನೀಡುವುದು ಅನಿವಾರ್ಯವಾದೀತು‌ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ, ಪುರಸಭಾ ಸದಸ್ಯ ಶುಭದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಜಾತಶತ್ರು ಕಾರ್ಕಳ ಕ್ಷೇತಕ್ಕೆ ಭಂಡಾರಿಯವರ ಕೊಡುಗೆ ಅಪಾರ. ಅಧಿಕಾರವಿದ್ದರೂ ಅಹಂಕಾರ ತೋರದೇ ಎಲ್ಲರೊಂದಿಗೆ ಅತ್ಯಂತ ಪ್ರೀತಿ ಮತ್ತು ಗೌರವದಿಂದ ಬೆರೆಯುತ್ತಿದ್ದರು. ಅವರ ಅಗಲಿಕೆಯ ನೋವು ನಮಗೆ ಇನ್ನೂ ಮಾಸಿಲ್ಲ. ಇಂತಹ ಮೇರು ವ್ಯಕ್ತಿತ್ವದ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಅವರು ಹೇಳಿದರು.
ಇತೀಚಿನ ದಿನಗಳಲ್ಲಿ ಸಚಿವರು ಭಾಗವಹಿಸುವ ‌ಸರಕಾರದ ಕಾರ್ಯಕ್ರಮಗಳು ಪಕ್ಷದ ಕಾರ್ಯಕ್ರಮಗಳಾಗಿ ಬದಲಾಗಿದೆ. ಪಕ್ಷದ ಪದಾಧಿಕಾರಿಗಳಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶಕೊಟ್ಟು ಹಿಂದಿನ ಸರಕಾರವನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಮಾತನಾಡುವುದು, ಟೀಕಿಸುವುದೇ ಒಂದು ಚಾಳಿಯಾಗಿದೆ. ಇದನ್ನು ತೀವ್ರವಾಗಿ ‌ಖಂಡಿಸುತ್ತೇನೆ ಎಂದು ಶುಭದಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ‌ ವಿರುದ್ದ‌ ದೂರು
ರಾಜಕೀಯ ಪ್ರೇರಿತವಾದ ಇಂತಹ ಕಾರ್ಯಕ್ರಮದಲ್ಲಿ ತಹಶೀಲ್ದಾರರೂ‌ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅವರ ಮಾತಿಗೆ ತಲೆಯಾಡಿಸುವುದು ವಿಪರ್ಯಾಸ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರದ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಲಾಗುವುದು, ಅಧಿಕಾರ ಶಾಶ್ವತ‌ ಅಲ್ಲ, ಆದರೆ ಅದನ್ನು‌ ದುರುಪಯೋಗ ಪಡಿಸಿಕೊಂಡರೆ ಪರಿಣಾಮ ಎದುರಿಸಬೇಕಾದೀತು ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!