ಮೋದಿ ಹುಟ್ಟುಹಬ್ಬಕ್ಕೆ 70 ಅಡಿ ಉದ್ದದ ಕೊರೊನಾ ವಾರಿಯರ್‌ ಕೇಕ್‌

ಸೂರತ್, ಸೆ. 17 :  ಸೂರತ್ ನಲ್ಲಿರುವ  ಬೇಕರಿಯೊಂದು 70 ಅಡಿ ಉದ್ದದ  771 ಕೆಜಿ ತೂಕದ ‘ ಕೊರೊನಾ ವಾರಿಯರ್’ ಥೀಮ್‌ನ ಕೇಕ್‌  ತಯಾರಿಸಿ ಮಕ್ಕಳಿಗೆ ಹಂಚುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ.  

ಕೇಕ್ ಕಟ್ಟಿಂಗ್ ಕಾರ್ಯಕ್ರಮವನ್ನು ಡಿಜಿಟಲ್ ಆಗಿ ಪ್ರಸಾರ ಮಾಡಲಾಗಿದೆ.ಕಳೆದ ಮೂರು ವರ್ಷದಿಂದ ಬ್ರೆಡ್ ಲೈನರ್ ಬೇಕರಿ ಮೋದಿಯವರ ಜನ್ಮದಿನವನ್ನು ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಮೂಲಕ ಆಚರಿಸುತ್ತಾ ಬರುತ್ತಿದೆ. ಈ ಬಾರಿ ಅದು ಕೊರೋನಾ ವಾರಿಯರ್ಸ್‌ಗೆ ಧನ್ಯವಾದ ಅರ್ಪಿಸುವ ಕೇಕ್ ಅನ್ನು ತಯಾರಿಸಿ ಆ ಮೂಲಕ ಜಾಗೃತಿಯನ್ನು ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೇಕರಿ ಮಾಲೀಕ, “ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮೋದಿಯವರ ಜನ್ಮದಿನದ ಕೇಕ್ ಕಟ್ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಕೊರೊನಾ ಯೋಧರು ಉಪಸ್ಥಿತರಿದ್ದರು. ಕೇಕ್‌ನಲ್ಲಿ ಕೊರೊನಾ ಯೋಧರ ಚಿತ್ರವನ್ನು ಬಿಡಿಸಲಾಗಿದೆ” ಎಂದಿದ್ದಾರೆ.

ಮೊದಲು ಕೇಕನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು.  ಬಳಿಕ ಕೇಕನ್ನು 500 ಗ್ರಾಂಗಳಂತೆ ವಿಂಗಡಿಸಿ ಇತರ ಬೇಕರಿಗಳಲ್ಲಿ ಜನರಿಗಾಗಿ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.















































































































































error: Content is protected !!
Scroll to Top