
ಕಾರ್ಕಳ : ವಿದ್ಯುತ್ ಸಂಪರ್ಕವಿಲ್ಲದ ನಗರದ ಸಿಗಡಿಕೆರೆ ಸಮೀಪದ ರಾಜೀವಿ ಅವರ ಮನೆಗೆ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಆ. 15ರಂದು ಸೋಲಾರ್ ದೀಪ ಕೊಡುಗೆಯಾಗಿ ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಸದಸ್ಯರಾದ ವೃಂದಾ ಪಿ. ಶೆಟ್ಟಿ, ಹರ್ಷಿಣಿ ಕೆ., ಹರಿಪ್ರಕಾಶ್ ಶೆಟ್ಟಿ, ಸೆಲ್ಕೋ ಪ್ರೈ.ಲಿ.ನ ಪುನೀತ್, ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್, ಅಮರನಾಥ್ ಪ್ರಸಾದ್, ವಸಂತ ಎಂ., ಸುರೇಶ್ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.