ಬೆಂಗಳೂರು ಗಲಭೆ : ನವೀನ್‌ ತಲೆಗೆ 51 ಲ.ರೂ. ಘೋಷಿಸಿದ ಮೇರಠ್‌ ವ್ಯಕ್ತಿ

0

ಬೆಂಗಳೂರು, ಆ. 15: ನಗರದಲ್ಲಿ ಕಳೆದ ಮಂಗಳವಾರ ಸಂಭವಿಸಿದ ಗಲಭೆಗೆ ನೆಪವಾಗಿದ್ದ ಪ್ರವಾದಿಯನ್ನು ಅವಹೇಳನ ಮಾಡುವ ಫೇಸ್ ಬುಕ್‌ ಪೋಸ್ಟ್‌  ಹಾಕಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಬಂಧು ನವೀನ್‌ ತಲೆ ತೆಗೆದವರಿಗೆ 51 ಲ.ರೂ. ಬಹುಮಾನ ಕೊಡುವುದಾಗಿ ಮೇರಠ್ ನ ವ್ಯಕ್ತಿಯೊಬ್ಬ ಘೋಷಿಸಿದ್ದಾನೆ.

ಮುಸ್ಲಿಮ್‌ ಮಖಂಡನೊಬ್ಬ  ನವೀನ್‌ ತಲೆ ತಂದುಕೊಡುವವರಿಗೆ 51 ಲ.ರೂ. ಬಹುಮಾನ ಕೊಡುತ್ತೇನೆ ಎನ್ನುತ್ತಿರುವ ವೀಡಿಯೊ ಇಂದು ಬೆಳಕಿಗೆ ಬಂದು ವೈರಲ್‌ ಆಗಿದೆ.ಖಾಸಗಿ ಟಿವಿ ವಾಹಿನಿಗಳು ಈ ವೀಡಿಯೊವನ್ನು ತೋರಿಸಿವೆ.

ಈ ವೀಡಿಯೊ ಬೆಂಗಳೂರು ಗಲಭೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರ ಇತ್ತು ಎಂಬ ಅನುಮಾನವನ್ನು ಪುಷ್ಟೀಕರಿಸುತ್ತಿದೆ. ನವೀನ್‌ನನ್ನು ಪೊಲೀಸರು ಬಂಧಿಸಿದ್ದು, ಪ್ರಸ್ತುತ ಕಸ್ಟಡಿಯಲ್ಲಿದ್ದಾನೆ.

ಮಂಗಳವಾರ ನವೀನ್‌  ಪ್ರವಾದಿಯ ಕುರಿತಾಗಿ ಮಾಡಿದ ಒಂದು ಟ್ವೀಟ್‌ ಅನ್ನು  ಪ್ರತಿಭಟಿಸುತ್ತಿದ್ದ ಮುಸ್ಲಿಮರು ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆಸಿದ್ದರು. ಪೊಲೀಸ್‌ ಋಅಣೆ, ಶಾಲಕರ ಮನೆ ಸೇರಿ ಹಲವು ಮನೆಗಳು ಮತ್ತು ಪೊಲೀಸ್‌ ಠಾಣೆ, ಶಾಸಕರ ಮನೆ ಸೇರಿ ಹಲವು ಮನೆಗಳು ಮತ್ತು ಸುಮಾರು 200 ವಾಹನಗಳನ್ನು ಸುಟ್ಟು ಹಾಕಿದ್ದಾರೆ.

ಮುಸ್ಲಿಮ್‌  ಶಿಕ್ಷಕಿಯೊಬ್ಬರು ಕೃಷ್ಣಾಷ್ಟಮಿಯಂದು ಕೃಷ್ಣನ ಕುರಿತು ಅವಹೇಳನಕಾರಿಯಾಗಿ ಹಾಕಿದ ಫೇಸ್ ಬುಕ್‌ ಪೋಸ್ಟ್‌ಗೆ ವಿರುದ್ಧವಾಗಿ ನವೀನ್‌  ಪ್ರವಾದಿಯ ವಿರುದ್ಧ ಪೋಸ್ಟ್‌  ಹಾಕಿದ್ದರು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹರಿದಾಡುತ್ತಿದೆ.

 

 ---
Previous articleಪ್ರಣವ್‌ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ
Next articleಜೇಸೀಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

LEAVE A REPLY

Please enter your comment!
Please enter your name here