ವಿಕಾಸ್‌ ದುಬೆ ಎನ್‌ಕೌಂಟರ್‌ : ವಿಪಕ್ಷಗಳಿಂದ ಪ್ರಶ್ನೆಗಳ ಸುರಿಮಳೆ

ಮೋಸ್ಟ್‌ ವಾಂಟೆಡ್ ಪಾತಕಿ ವಿಕಾಸ್‌ ದುಬೆ ಎನ್‌ಕೌಂಟರ್‌ಗೆ ಬಲಿಯಾದ ಬೆನ್ನಿಗೆ   ಉತ್ತರಚಪ್ರದೇಶ ಸರಕಾರ ಹಾಗೂ ಪೊಲೀಸರ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಟ್ವೀಟ್‌ ಮೂಲಕ ಪ್ರಶ್ನೆಗಳ ಸುರಿಮಳೆಗೈದಿವೆ.

ಲಕ್ನೊ: ದೇಶವನ್ನೇ ತಲ್ಲಣಗೊಳಿಸಿದ್ದ ಎಂಟು ಮಂದಿ ಪೊಲೀಸರ ಹತ್ಯೆಗೈದ ಕಾನ್ಪುರ್ ಎನ್‌ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್‌ಸ್ಟರ್ , ಮೋಸ್ಟ್‌ ವಾಂಟೆಡ್‌ ಪಾತಕಿ ವಿಕಾಸ್‌ ದುಬೆ ಸೆರೆಯಾದ ಬೆನ್ನಿಗೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಮಧ್ಯಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಬರುವ ವೇಳೆ. ಪೊಲೀಸ್‌ ಬೆಂಗಾವಲು ವಾಹನ ಪಲ್ಟಿಯಾಗಿದ ವೇಳೆ ದುಬೆ ಪರಾರಿಯಾಗಲು ಯತ್ನಿಸಿದ್ದಾನೆ. 

ಪೊಲೀಸರ ಮೇಲೆ ಗುಂಡು ಹಾರಿಸಿ ಎಸ್ಕೇಪ್‌ ಆಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಈ ಘಟನೆ ನಡೆದ ಬೆನ್ನಲ್ಲೆ ಹಲವು ವಿಪಕ್ಷ ನಾಯಕರು ಟ್ವೀಟ್‌ ಮಾಡಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ದುಬೆ ತಪ್ಪಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಯಾಕೆ ಶರಣಾಗತಿಯಾಗ ಬೇಕಿತ್ತು ಎಂದಿದ್ದಾರೆ. ಅಲ್ಲದೇ ಆತನಲ್ಲಿ ಅಧಿಕಾರ ವರ್ಗದವರೊಂದಿಗೆ ಸಂಬಂಧ ಇರುವ ಯಾವ ರಹಸ್ಯವಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ, ಅಪರಾಧಿಯ ಅಂತ್ಯವಾಗಿದೆ. ಹಾಗಾದರೆ ಅಪರಾಧಿಗೆ ಬೆಂಬಲ ನೀಡಿದವರು ಎಂದು ಪ್ರಶ್ನಾರ್ಥಕ ಚಿಹ್ನೆ ಬಳಸಿ ಸರಕಾರವನ್ನ ವ್ಯಂಗ್ಯ ಮಾಡಿದ್ದಾರೆ. 
ನ್ಯಾಷನಲ್‌ ಕಾನ್ಫರೆನ್ಸ್‌ನ ಒಮರ್‌ ಅಬ್ಧುಲ್ಲಾ ಕೂಡ ಟ್ವೀಟ್‌ ಮಾಡಿದ್ದು, ಸತ್ತವರು ಕತೆ ಹೇಳುವುದಿಲ್ಲ ಎಂದು ಎನ್‌ಕೌಂಟರ್‌ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಯುಪಿ ಸರಕಾರವನ್ನ ಟೀಕಿಸಿದ್ದಾರೆ. 
ಇನ್ನು ಶಿವಸೇನೆಯ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡ ಟ್ವೀಟ್‌ ಮೂಲಕ ಎನ್‌ಕೌಂಟರ್ ಸಂಬಂಧ ಸರಕಾರವನ್ನ ವ್ಯಂಗ್ಯವಾಡಿದ್ದಾರೆ. ಒಂದು ಮೂಲವೇ ನಾಶವಾದ ಮೇಲೆ ಹೋರಾಟ ನಡೆಸುವುದಕ್ಕೆ ಯಾವುದೇ ಕಾರಣವಿರುವುದಿಲ್ಲ ಎಂದಿದ್ದಾರೆ. 

 ಕಾಂಗ್ರೆಸ್‌ ಮುಖಂಡ ಕಾರ್ತಿ ಚಿದಂಬರಂ ಕೂಡ ಟ್ವೀಟ್‌ ಮಾಡಿದ್ದು, ಊಹಿಸಿದಂತೆ ಈ ಘಟನೆ ನಡೆದಿದೆ. ಭಾರತದ ಅತಿದೊಡ್ಡ ಜನಸಮೂಹವೆಂದರೆ ಯುಪಿ ಪೊಲೀಸ್‌  ನೇತೃತ್ವದ ಡಾನ್ ಈಗ ಎಲ್ಲವೂ ಇತ್ಯರ್ಥಗೊಂಡಿದೆ. ಎಲ್ಲಾ ಅನನುಕೂಲ ಸತ್ಯಗಳನ್ನು ಒಳ್ಳೆಯದಕ್ಕಾಗಿ ಸಮಾಧಿ ಮಾಡಲಾಗಿದೆ ಎಂದಿದ್ದಾರೆ. 

ಹೀಗೆ ನಡೆಯಿತು ಎನ್‌ಕೌಂಟರ್‌

ಪೊಲೀಸರ ಅಧೀನದಲ್ಲಿದ್ದ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆ ವೇಳೆ ಸುರಿದ ಭಾರೀ ಮಳೆಗೆ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ. ಆಗ ವಿಕಾಸ್ ದುಬೆ ಗಾಯಗೊಂಡು ಬಿದ್ದ ಪೊಲೀಸರ ಬಳಿ ಇದ್ದ ಬಂದೂಕವನ್ನು ಕಿತ್ತುಕೊಂಡು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆ ವೇಳೆ ವಿಕಾಸ್ ದುಬೆಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ .

ವಿಕಾಸ್ ದುಬೆಯನ್ನು ಕರೆದೊಯ್ಯುತ್ತಿದ್ದ 12 ಕಾರುಗಳ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶುಕ್ರವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನದಿಂದ ಕಾನ್ಪುರಕ್ಕೆ ಬಂದಿತ್ತು. ಬೆಂಗಾವಲು ಕಾರಿನಲ್ಲಿದ್ದಾಗ ಅದು ಪಲ್ಟಿ ಹೊಡೆದ ನಂತರ ಅಪಘಾತಕ್ಕೀಡಾಯಿತು. ವಿಕಾಸ್ ದುಬೆ ಈ ವಾಹನದಲ್ಲಿ ಇದ್ದ ಎಂದು ಮೂಲಗಳು ತಿಳಿಸಿವೆ.

ಅಪಘಾತದ ನಂತರ ಪೊಲೀಸರು ಸಮೀಪದಲ್ಲಿದ್ದ ಜನರನ್ನು ತಕ್ಷಣವೇ ದೂರ ಕಳುಹಿಸಿದರು. ಸ್ವಲ್ಪ ಸಮಯದ ನಂತರ ಗುಂಡಿನ ಶಬ್ದ ಕೇಳಿಬಂದವು ಎಂದು ಘಟನೆಯ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. 

ಇದಕ್ಕೂ ಮೊದಲು ಯುಪಿ ಎಸ್‌ಟಿಎಫ್ ರೈಲುಗಳ ಕಾನ್ವಾಯ್ ಕಾನ್ಪುರದ ಟೋಲ್ ಪ್ಲಾಜಾದಲ್ಲಿ ವಿಕಾಸ್ ದುಬೆ ತಲುಪಿದ ಕೂಡಲೇ ಇತರ ರೈಲುಗಳ ಸಂಚಾರವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಟೋಲ್ ಪ್ಲಾಜಾಗೆ ಹೋಗುವ ಮತ್ತು ಹೋಗುವ ಎಲ್ಲಾ ವಾಹನಗಳನ್ನು ಪೊಲೀಸರು ಸುರಕ್ಷತೆಗಾಗಿ ಪರಿಶೀಲಿಸುತ್ತಿದ್ದಾರೆ.

Latest Articles

error: Content is protected !!