ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ನೇಮಕಾತಿ : 1365 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

2023ನೇ ಸಾಲಿನ ಅಗ್ನಿವೀರ್​ಗಳ ನೇಮಕಾತಿಗೆ ಭಾರತೀಯ ನೌಕಾಪಡೆ ಮುಂದಾಗಿದೆ. ಒಟ್ಟು 1365 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪೈಕಿ 273 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೇ 29ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಜೂನ್​ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://indiannavy.nic.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆ – ಭಾರತೀಯ ನೌಕಾಪಡೆ
ಯೋಜನೆ – ಅಗ್ನಿಪಥ್ ಯೋಜನೆ
ಒಟ್ಟು ಹುದ್ದೆಗಳು – 1365
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 29-05-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ – 15-06-2023
ವಯೋಮಿತಿ – 17.5 ರಿಂದ 23 ವರ್ಷ

ವಿದ್ಯಾರ್ಹತೆ:
1) ನಾವಿಕ (ಹಿರಿಯ ಸೆಕೆಂಡರಿ ನೇಮಕಾತಿ- SSR): ಅಭ್ಯರ್ಥಿಗಳು 10+2 ಪರೀಕ್ಷೆಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಕಡ್ಡಾಯ ವಿಷಯಗಳು.

2) ನಾವಿಕ (ಆರ್ಟಿಫೈಸರ್ ಅಪ್ರೆಂಟಿಸ್ – ಎಎ): ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ/ಜೀವಶಾಸ್ತ್ರ/ಕಂಪ್ಯೂಟರ್ ಸೈನ್ಸ್‌ ನೊಂದಿಗೆ ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3) ನಾವಿಕ (ಮೆಟ್ರಿಕ್ ನೇಮಕಾತಿ – MR): ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ದೈಹಿಕ ಸಾಮರ್ಥ್ಯ
1) ಅಭ್ಯರ್ಥಿಗಳು ಎತ್ತರ, ತೂಕ, ಎದೆಯ ಅಳತೆಗಳು ಮತ್ತು ದೃಷ್ಟಿ ತೀಕ್ಷ್ಣತೆ ಸೇರಿದಂತೆ ನಿಗದಿತ ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಪೂರೈಸಬೇಕು.

2) ಭಾರತೀಯ ನೌಕಾಪಡೆಯ ಮಾನದಂಡಗಳ ಪ್ರಕಾರ ವೈದ್ಯಕೀಯವಾಗಿ ಫಿಟ್ ಆಗಿರಬೇಕು.

ಆಯ್ಕೆ ಪ್ರಕ್ರಿಯೆ
1) ಲಿಖಿತ ಪರೀಕ್ಷೆ
2) ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
3) ಭೌತಿಕ ಮಾಪನ ಪರೀಕ್ಷೆ (PMT- Physical Measurement Test)
4) ದಾಖಲೆ ಪರಿಶೀಲನೆ
5) ವೈದ್ಯಕೀಯ ಪರೀಕ್ಷೆ

ಭಾರತೀಯ ನೌಕಾಪಡೆಯ ಅಗ್ನಿವೀರ್ ಸಂಬಳ
1 ನೇ ವರ್ಷ – ರೂ. ತಿಂಗಳಿಗೆ 30,000
2 ನೇ ವರ್ಷ – ರೂ. ತಿಂಗಳಿಗೆ 33,000
3 ನೇ ವರ್ಷ – ರೂ. ತಿಂಗಳಿಗೆ 36,500 ರೂ
4 ನೇ ವರ್ಷ – ರೂ. ತಿಂಗಳಿಗೆ 40,000



































































































































































































































































error: Content is protected !!
Scroll to Top