ಭ್ರಷ್ಟಾಚಾರ ನಿಗ್ರಹ‌ಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಯೋಗಿ ಸರ್ಕಾರ

ಲಕ್ನೋ: ಭ್ರಷ್ಟಾಚಾರ‌ದ ನಿಗ್ರಹಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ಸಚಿವರು, ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಪ್ರತಿ ವರ್ಷ ತಮ್ಮ ಆಸ್ಥಿ ವಿವರವನ್ನು ಕಡ್ಡಾಯವಾಗಿ ಸರ್ಕಾರ‌ಕ್ಕೆ ಸಲ್ಲಿಸುವಂತೆ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ‌ದ ಅಧಿಕೃತ ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಸರ್ಕಾರ‌ದ ಮೂಲಗಳು ತಿಳಿಸಿವೆ. ಜೊತೆಗೆ ಸಚಿವರು, ಅಧಿಕಾರಿಗಳ ಕಾರ್ಯಕ್ಷೇತ್ರ‌ದಲ್ಲಿ ಅವರ ಕುಟುಂಬವರ್ಗ ಮೂಗು ತೂರಿಸುವಂತಿಲ್ಲ. ಹಾಗೆಯೇ ರಾಜ್ಯದ 18 ವಲಯಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಕ್ಷೇತ್ರ‌ಗಳಿಗೆ ತೆರಳಿ ಜನರೊಂದಿಗೆ ಸಂವಾದ ನಡೆಸಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಇದಕ್ಕಾಗಿ ವೇಳಾಪಟ್ಟಿ ಸಹ ಸಿದ್ಧಪಡಿಸಲಾಗುವುದಾಗಿ ಸರ್ಕಾರ‌ದ ಮೂಲಗಳು ಹೇಳಿವೆ.



































































































































































































































































error: Content is protected !!
Scroll to Top