School

ಶಾಲೆಯಲ್ಲೇ ಇಲಿ ಪಾಷಾಣ ಸೇವಿಸಿದ್ದ ವಿದ್ಯಾರ್ಥಿನಿ ಸಾವು

ಶಿಕ್ಷಕನ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪ ಧರ್ಮಸ್ಥಳ: ಧರ್ಮಸ್ಥಳದ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆತ್ಮಹತ್ಯೆಗೆ ಈ ಶಾಲೆಯ ಶಿಕ್ಷಕ ಕಾರಣ ಎಂದು ಆರೋಪಿಸಲಾಗಿದೆ. ಶಿಕ್ಷಕ ಮಾನಹಾನಿಕಾರಕ ಮೆಸೇಜ್ ಕಳಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.ಧರ್ಮಸ್ಥಳದ ಪಿಜತ್ತಡ್ಕದ ಕಿಶೋರ್-ಸೌಮ್ಯಾ ದಂಪತಿ ಪುತ್ರಿ ತ್ರಿಶಾ(16) ಮೃತ ವಿದ್ಯಾರ್ಥಿನಿ. ಧರ್ಮಸ್ಥಳದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಫೆಬ್ರವರಿ 5ರಂದು ಶಾಲೆಯ […]

ಶಾಲೆಯಲ್ಲೇ ಇಲಿ ಪಾಷಾಣ ಸೇವಿಸಿದ್ದ ವಿದ್ಯಾರ್ಥಿನಿ ಸಾವು Read More »

ಸ್ಕೂಟಿಗೆ ಲಾರಿ ಡಿಕ್ಕಿ : ಬಾಲಕಿ ಸಾವು

ತಂದೆ ಜೊತೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿ ಅಪಘಾತಕ್ಕೆ ಬಲಿ ಮಂಗಳೂರು: ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿರುವ ಘಟನೆ ಸುರತ್ಕಲ್‌ ಸಮೀಪ ನಿನ್ನೆ ಸಂಜೆ ಸಂಭವಿಸಿದೆ. ಮಗಳನ್ನು ಶಾಲೆಯಿಂದ ತಂದೆ ಸ್ಕೂಟಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಮುಕ್ಕ ಇಂಡಿಯನ್ ಪೆಟ್ರೋಲ್ ಪಂಪ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.ಮುಕ್ಕ ಮಿತ್ರಪಣ್ನ ನಿವಾಸಿ ಯಶವಂತ್ ಎಂಬವರ ಮಗಳು ಮಾನ್ವಿ(12) ಮೃತಪಟ್ಟ ಬಾಲಕಿ. ತಂದೆಯ ಜೊತೆ ಶಾಲೆಯಿಂದ ಸ್ಕೂಟಿಯಲ್ಲಿ ಮುಕ್ಕದ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ

ಸ್ಕೂಟಿಗೆ ಲಾರಿ ಡಿಕ್ಕಿ : ಬಾಲಕಿ ಸಾವು Read More »

ಬಿಜೆಪಿ ಅವಧಿಯ ಇನ್ನೊಂದು ಅಕ್ರಮ ತನಿಖೆಗೆ ನಿರ್ಧಾರ

ಶಾಲಾ ಮಕ್ಕಳ ಸಮವಸ್ತ್ರ ಪೂರೈಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಬೆಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಇನ್ನೊಂದು ಅಕ್ರಮದ ಬಗ್ಗೆ ತನಿಖೆ ನಡಡಸಲು ಕಾಂಗ್ರೆಸ್‌ ಸರಕಾರ ನಿರ್ಧರಿಸಿದೆ. ವಿದ್ಯಾವಿಕಾಸ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಭಂಡಾರದಿಂದ ಕಳಪೆ ಸಮವಸ್ತ್ರ ಪೂರೈಕೆ ಮಾಡುವ ಮೂಲಕ ಕೋಟ್ಯಂತರ ರು. ಅಕ್ರಮ ನಡೆಸಿರುವ ಬಗ್ಗೆ ಇಲಾಖಾ ತನಿಖೆ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೆಗೆದುಕೊಂಡ ತೀರ್ಮಾ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್‌.ಕೆ.

ಬಿಜೆಪಿ ಅವಧಿಯ ಇನ್ನೊಂದು ಅಕ್ರಮ ತನಿಖೆಗೆ ನಿರ್ಧಾರ Read More »

ಭಾರಿ ಮಳೆ ಹಿನ್ನೆಲೆ : ನಾಳೆ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನಾಳೆ (ಜುಲೈ 1) ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಮಳೆಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಸೂಚನೆ

ಭಾರಿ ಮಳೆ ಹಿನ್ನೆಲೆ : ನಾಳೆ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ Read More »

ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ | ಪುಟಾಣಿಗಳ ಸ್ವಾಗತಕ್ಕೆ ಶಿಕ್ಷಕರ ಕಾತರ

ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ತೆರಳದ ಪುಟಾಣಿ ಮಕ್ಕಳು ಇಂದಿನಿಂದ ಶಾಲೆಗೆ ಹೆಜ್ಜೆ ಹಾಕಲಿದ್ದಾರೆ.ಕಳೆದೊಂದು ವರ್ಷದಿಂದ ಕೇವಲ ಆನ್‌ಲೈನ್‌ ತರಗತಿಗೆ ಒಗ್ಗಿಕೊಂಡಿದ್ದ ಪುಟಾಣಿಗಳು ಅ. 25ರಿಂದ ಶಾಲೆಯತ್ತ ಹೆಜ್ಜೆ ಇಡಲಿದ್ದಾರೆ.ಶಾಲೆಯಲ್ಲಿ ಇಂದಿನಿಂದ ಮತ್ತೆ ಚಿಣ್ಣರ ಚಿಲಿಪಿಲಿ ಕೇಳಲಿದೆ. ಪುಟಾಣಿಗಳನ್ನು ಸ್ವಾಗತಿಸಲು ಶಾಲೆಯ ಶಿಕ್ಷಕರು ಕಾತರದಲ್ಲಿದ್ದಾರೆ. ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ತರಗತಿ ಮರು ಆರಂಭಗೊಳ್ಳುತ್ತಿದ್ದು ನಗರ ಪ್ರದೇಶದ ಪ್ರಾಥಮಿಕ ತರಗತಿಗಳು ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ. ಒಂದೂವರೆ ವರ್ಷದಿಂದ ಶಾಲಾ ವಾತಾವರಣದಿಂದ ದೂರವಾಗಿದ್ದ

ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ | ಪುಟಾಣಿಗಳ ಸ್ವಾಗತಕ್ಕೆ ಶಿಕ್ಷಕರ ಕಾತರ Read More »

ಉಡುಪಿ ಜಿಲ್ಲೆಯಾದ್ಯಂತ 1-5ನೇ ತರಗತಿ ಆರಂಭಕ್ಕೆ ಸಿದ್ಧತೆ

ಉಡುಪಿ ಜಿಲ್ಲೆಯಾದ್ಯಂತ ಅ.25ರಿಂದ ಒಂದರಿಂದ ಐದನೇ ತರಗತಿ ಗಳು ಪ್ರಾರಂಭವಾಗುತ್ತಿದ್ದು, ಇದಕ್ಕೆ ಬೇಕಾದ ಹಲವು ಶೈಕ್ಷಣಿಕ, ಭೌತಿಕ, ಆರೋಗ್ಯ, ಶಾಲಾ ಸ್ವಚ್ಚತೆ, ಊಟದ ತಯಾರಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಂದರಿಂದ ಐದನೇ ತರಗತಿವರೆಗಿನ ಸರಕಾರಿ 220(ದಾಖಲಾತಿ- 29861 ವಿದ್ಯಾರ್ಥಿಗಳು), ಅನುದಾನಿತ 6(8747), ಖಾಸಗಿ 15(38056)ಮತ್ತು ಇತರ 8(277) ಸೇರಿದಂತೆ ಒಟ್ಟು 249 ಶಾಲೆಗಳಿವೆ. ಅ.21ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಶಿಕ್ಷಕರು

ಉಡುಪಿ ಜಿಲ್ಲೆಯಾದ್ಯಂತ 1-5ನೇ ತರಗತಿ ಆರಂಭಕ್ಕೆ ಸಿದ್ಧತೆ Read More »

error: Content is protected !!
Scroll to Top