newskarkala

ಮೊದಲ ಹಂತದ ಚುನಾವಣೆ : ಮತದಾನ ಆರಂಭ

ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಲು ಮೋದಿ ಮನವಿ ಹೊಸದಿಲ್ಲಿ: 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿತು. 1,600ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗಳಲ್ಲಿ ಭದ್ರವಾಗಲಿದೆ. ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು […]

ಮೊದಲ ಹಂತದ ಚುನಾವಣೆ : ಮತದಾನ ಆರಂಭ Read More »

ಮಂಗಳೂರಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಹೊಡೆದಾಟ

ಮಂಗಳೂರು : ಲೋಕಸಭಾ ಚುನಾವಣೆ ಪ್ರಚಾರ ನಡೆಸುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿಕೊಂಡು ಹೊಡೆದಾಡಿದ ಘಟನೆ ನಿನ್ನೆ ಮಂಗಳೂರಿನ ಉರ್ವ ಸಮೀಪ ಚಿಲಿಂಬಿಯಲ್ಲಿರುವ ಸಾಯಿ ಮಂದಿರದ ಎದರುರು ಸಂಭವಿಸಿದೆ.ರಾಮನವಮಿ ಹಿನ್ನೆಲೆಯಲ್ಲಿ ಸಾಯಿ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರ ಸಂಖ್ಯೆ ಅಧಿಕವಾಗಿತ್ತು. ಇದೇ ಸಂದರ್ಭ ಮಂದಿರದ ಎದುರಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತ ತೆರಳುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮಂದಿರದ ಬಳಿ ಪ್ರಚಾರ ನಡೆಸದಂತೆ ಸೂಚಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು.

ಮಂಗಳೂರಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಹೊಡೆದಾಟ Read More »

ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಹತ್ಯೆ

ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕನೂ ದುಷ್ಕರ್ಮಿಗಳಿಗೆ ಬಲಿ ಗದಗ : ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ತಡರಾತ್ರಿ ನಡೆದಿದೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ (27), ಸಂಬಂಧಿಕರಾದ ಪರಶುರಾಮ (55), ಅವರ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ಸುನಂದಾ ಬಾಕಳೆ ಪುತ್ರ ಕಾರ್ತಿಕ್​ ಅವರ ಮದುವೆ ತಯಾರಿ ಸಂಬಂಧ ಏಪ್ರಿಲ್​ 17ರಂದು ಸಂಬಂಧಿಕರಾದ

ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಹತ್ಯೆ Read More »

ಕಾಲೇಜ್‌ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಹತ್ಯೆ : ಬಿಜೆಪಿ, ಎಬಿವಿಪಿ ಪ್ರತಿಭಟನೆ

ಲವ್‌ ಜಿಹಾದ್‌ ಕೃತ್ಯ ಎಂದು ಅರೋಪಿಸಿದ ಹಿಂದು ಸಂಘಟನೆಗಳು ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಎಂಬಾಕೆಯನ್ನು ಮುಸ್ಲಿಂ ಯುವಕನೊಬ್ಬ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಲವ್‌ ಜಿಹಾದ್‌ ಕೃತ್ಯ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.ಪ್ರೀತಿಸಲು‌ ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಫಯಾಜ್ ಎಂಬಾತ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು

ಕಾಲೇಜ್‌ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಹತ್ಯೆ : ಬಿಜೆಪಿ, ಎಬಿವಿಪಿ ಪ್ರತಿಭಟನೆ Read More »

ತಜ್ಞರ ವರದಿ – ವೈದ್ಯಕೀಯ ವರದಿಯ ಮಹತ್ವ

ಯಾವುದೇ ವಿಷಯದಲ್ಲಿ ವಿಶೇಷವಾದ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಹಾಗೂ ವಿವಾದಿತ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವನ್ನು ನೀಡಲು ಸಮರ್ಥರಾಗಿರುವ ವ್ಯಕ್ತಿ ವೈಜ್ಞಾನಿಕ ತಜ್ಞ ಎಂಬುದಾಗಿ ಪರಿಗಣಿಸಲ್ಪಡುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯ ಅಥವಾ ಪೊಲೀಸ್ ತನಿಖಾಧಿಕಾರಿಗಳು ಸಂಬಂಧಪಟ್ಟ ವಿವಾದಾಂಶಗಳನ್ನು ತೀರ್ಮಾನಿಸಲು ತಜ್ಞರ ಸಹಾಯ ಪಡೆಯಬೇಕಾಗುತ್ತದೆ. ಕಾರಣ ಸಾಮಾನ್ಯವಾಗಿ ಎಲ್ಲರೂ ಅಂದರೆ ನ್ಯಾಯಾಧೀಶರು, ಪೊಲೀಸ್ ತನಿಖಾಧಿಕಾರಿಗಳು ಸಮೇತರಾಗಿ ಪ್ರತಿಯೊಂದು ವಿಷಯಗಳ ಬಗ್ಗೆ ವಿಶೇಷವಾದ ಪರಿಣತಿ ಅಥವಾ ಜ್ಞಾನವನ್ನು ಹೊಂದಿರುವುದಿಲ್ಲ. ಭಾರತೀಯ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್

ತಜ್ಞರ ವರದಿ – ವೈದ್ಯಕೀಯ ವರದಿಯ ಮಹತ್ವ Read More »

ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿ – ಮಂಜುನಾಥ ಭಂಡಾರಿ

ಕಾರ್ಕಳ : ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿ. ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕಾಂಗ್ರೆಸ್ ಮೇಲಿದ್ದ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇದು ಲೋಕಸಭಾ ಚುನಾವಣೆಯ ಗೆಲುವಿನ ಮುನ್ಸೂಚನೆ ಎಂದು ವಿಧಾನ ಪರಿಷತ್ ಸದಸ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು. ಅವರು ಏ. 17ರಂದು ಲೋಕಸಭಾ ಚುನಾವಣಾ ಪ್ರಚಾರದ ಪ್ರಯುಕ್ತ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿವಿಧ ಬೂತ್‌ಗಳಿಗೆ ಬೇಟಿ ನೀಡಿದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ

ನುಡಿದಂತೆ ನಡೆಯುವುದು ಕಾಂಗ್ರೆಸ್ ಸಂಸ್ಕೃತಿ – ಮಂಜುನಾಥ ಭಂಡಾರಿ Read More »

ಸಿಇಟಿಯಲ್ಲಿ ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ – ವಿದ್ಯಾರ್ಥಿಗಳು ಕಂಗಾಲು

ಕಾರ್ಕಳ : ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ವೆಟರಿನರಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಿರ್ಣಾಯಕವಾದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ-2024) ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಎರಡು ದಿನ ನಡೆಯಲಿದೆ. ಇಂದು ಬೆಳಗ್ಗೆ ಬಯೋಲಜಿ ಮತ್ತು ಗಣಿತ ಪರೀಕ್ಷೆ ನಡೆದಿದೆ. ಇವೆರಡರಲ್ಲೂ ಪಠ್ಯವನ್ನು ಹೊರತುಪಡಿಸಿದ ಪ್ರಶ್ನೆಗಳು ಬಂದಿದ್ದು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಕೆಲವು ಪಠ್ಯಗಳನ್ನು ತೆಗೆದು ಹಾಕಲಾಗಿತ್ತು. ಆದರೆ, ಈ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಂದು ನಡೆದ ಸಿಇಟಿಯಲ್ಲಿ

ಸಿಇಟಿಯಲ್ಲಿ ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ – ವಿದ್ಯಾರ್ಥಿಗಳು ಕಂಗಾಲು Read More »

ಏ. 19 : ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳ ಪ್ರವಾಸ

ಚುನಾಯಿತ ಪ್ರತಿನಿಧಿಗಳ ಸಭೆ – ಉದ್ಯಮಿಗಳ ಸಭೆ ಕಾರ್ಕಳ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಏ. 19ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಬೆಳಗ್ಗೆ 8.30ರಿಂದ ಪ್ರವಾಸ ಆರಂಭವಾಗಲಿದ್ದು, 11-30ಕ್ಕೆ ಕಾರ್ಕಳ ಶಾಸಕರ ಜನಸೇವಾ ಕಚೇರಿ ವಿಕಾಸದಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಯಲಿದ್ದು, ಸಂಜೆ 6 ಗಂಟೆಗೆ ಹೋಟೆಲ್‌ನಲ್ಲಿ ಉದ್ಯಮಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಯೊಂದಿಗೆ ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಹಾಗೂ

ಏ. 19 : ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳ ಪ್ರವಾಸ Read More »

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಾರ್ಕಳ : ಶಸ್ತಾಸ್ತ್ರ ಕಾಯ್ದೆ ಪ್ರಕರಣದಲ್ಲಿ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜ್ವಲ್ ಪೂಜಾರಿ (30) ಬಂಧಿತ ಆರೋಪಿ.ಕೊಲೆಗೆ ಯತ್ನ ಮತ್ತು ಶಸ್ತಾಸ್ತ್ರ ಕಾಯ್ದೆಯಡಿಯಲ್ಲಿ 2016 ರಲ್ಲಿ ಸುರತ್ಕಲ್ ಕಾಟಿಪಳ್ಳ ನಿವಾಸಿ ವಿಜ್ವಲ್‌ ಪೂಜಾರಿ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆದ್ದರಿಂದ ಈತನಿಗೆ ನ್ಯಾಯಾಲಯ ದಸ್ತಗಿರಿ ವಾರೆಂಟು ಹೊರಡಿಸಿತ್ತು. ಆರೋಪಿ ಮೈಸೂರಿನಲ್ಲಿರುವ ಸುಳಿವು ಸಿಕ್ಕ ಹಿನ್ನೆಲೆ ಕಾರ್ಕಳ

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕಾರ್ಕಳ ರಾಮಕ್ಷತ್ರಿಯ ಸಂಘ – ರಾಮ ನವಮಿ ಸಂಭ್ರಮಾಚರಣೆ

ಕಾರ್ಕಳ : ರಾಮಕ್ಷತ್ರಿಯ ಸಂಘ ಕಾರ್ಕಳ ಇದರ ವತಿಯಿಂದ ಏ. 17 ರಂದು ಬಂಡಿಮಠದಲ್ಲಿರುವ ಶ್ರೀ ರಾಮ ಸಭಾಭವನದಲ್ಲಿ ಶ್ರೀ ರಾಮ ನವಮಿ ಆಚರಣೆ ನಡೆಯಿತು. ಅಶೋಕ್ ಕುಮಾರ್ ಕೆ. ಎಸ್. ಜೋಡುರಸ್ತೆ ದಂಪತಿ ಪೂಜಾ ವಿಧಿ ವಿದಾನ ನೆರವೇರಿಸಿದರು. ಬಳಿಕ ರಾಮಕ್ಷತ್ರಿಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ರಾಮಕ್ಷತ್ರಿಯ ಸಂಘ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭ ರಾಮನ ಕುರಿತು ಉಪನ್ಯಾಸ ನೀಡಿದ ಭುವನೇಂದ್ರ ಪ್ರೌಢಶಾಲೆಯ

ಕಾರ್ಕಳ ರಾಮಕ್ಷತ್ರಿಯ ಸಂಘ – ರಾಮ ನವಮಿ ಸಂಭ್ರಮಾಚರಣೆ Read More »

error: Content is protected !!
Scroll to Top