mumbai

ಕುಂದಾಪುರದಲ್ಲಿ ಕಳವಾದ ಆಭರಣ 8 ತಿಂಗಳ ಬಳಿಕ ಮುಂಬಯಿಯಲ್ಲಿ ವಶ

ಉಡುಪಿ : ಕಳೆದ ವರ್ಷ ಜೂನ್ 10ರಂದು ಕುಂದಾಪುರದ ಹೊಟೇಲ್ ಒಂದರಿಂದ ಕಳವಾಗಿದ್ದ ಚಿನ್ನಾಭರಣಗಳನ್ನು ಪೊಲೀಸರು ಮುಂಬಯಿಯಲ್ಲಿ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.ಹೋಟೆಲ್‌ನಲ್ಲಿ ತಂಗಿದ್ದ ಚಿನ್ನದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಒಬ್ಬರ ಬಳಿಯಿದ್ದ ಸುಮಾರು 22.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವುಗೈಯ್ಯಲಾಗಿತ್ತು. ಪರಾರಿಯಾಗಿದ್ದ ಆರೋಪಿ ಸಹಿತ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕುಂದಾಪುರ ಪೊಲೀಸರು ಮುಂಬೈನಲ್ಲಿ ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಖೋರ್ ಗ್ರಾಮದ ರಾನ್ ರಾಯಲ್ ಯಾನೆ ಬಾಳು ರಾಮ್(21) ಹಾಗೂ ಸೇವಾರಿಯ ಬರ್ಲಾಬೆರಾ […]

ಕುಂದಾಪುರದಲ್ಲಿ ಕಳವಾದ ಆಭರಣ 8 ತಿಂಗಳ ಬಳಿಕ ಮುಂಬಯಿಯಲ್ಲಿ ವಶ Read More »

ವಂದೇ ಭಾರತ್‌ ರೈಲು ಮುಂಬಯಿಗೆ ವಿಸ್ತರಿಸಲು ಒತ್ತಾಯ

ಮುಂಬಯಿಗೆ ಹಗಲು ರೈಲು ಬೇಕೆನ್ನುವುದು ಕರಾವಳಿಗರ ಬಹುಕಾಲದ ಬೇಡಿಕೆ ಮಂಗಳೂರು : ಮಡ್ಗಾಂವ್‌-ಮುಂಬಯಿ ನಡುವೆ ಸಂಚರಿಸುತ್ತಿರುವ ವಂದೇ ಭಾರತ್‌ ರೈಲನ್ನು ಮುಂಬಯಿ ತನಕ ವಿಸ್ತರಿಸುವ ಬೇಡಿಕೆಗೆ ಮತ್ತೆ ಬಲ ಬಂದಿದೆ. ಇತ್ತೀಚೆಗೆ ಶುರುವಾಗಿರುವ ಈ ರೈಲಿನಲ್ಲಿ ನಿರೀಕ್ಷಿಸಿದಷ್ಟು ಜನ ಪ್ರಯಾಣಿಸುತ್ತಿಲ್ಲ. ಹೀಗಾಗಿ ರೈಲು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ರೈಲನ್ನು ಮುಂಬಯಿಗೆ ವಿಸ್ತರಿಸಿದರೆ ಮತ್ತು ಹೆಚ್ಚು ನಿಲುಗಡೆ ಒದಗಿಸಿದರೆ ರೈಲು ತುಂಬಲಿದೆ ಎನ್ನಲಾಗುತ್ತಿದೆ.ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈಗಾಗಲೇ ರೈಲ್ವೆ ಸಚಿವ ಅಶ್ವಿನಿ

ವಂದೇ ಭಾರತ್‌ ರೈಲು ಮುಂಬಯಿಗೆ ವಿಸ್ತರಿಸಲು ಒತ್ತಾಯ Read More »

ಫೇಸ್‌ಬುಕ್‌ ಲೈವ್‌ನಲ್ಲೇ ಸ್ನೇಹಿತನ ಹತ್ಯೆ ಮಾಡಿ, ಆರೋಪಿ ಆತ್ಮಹತ್ಯೆ

ಮುಂಬಯಿ: ಮುಂಬಯಿ ಸಮೀಪ ದಹಿಸರ್‌ನಲ್ಲಿ ಉದ್ಧವ್ ಠಾಕ್ರೆ ಬಣದ ನಾಯಕ ಅಭಿಷೇಕ್ ಘೋಸಲ್ಕರ್ ಎಂಬವರನ್ನು ಫೇಸ್‌ಬುಕ್‌ ಲೈವ್‌ಸ್ಟ್ರೀಮಿಂಗ್‌ ಆಗುತ್ತಿರುವಾಗಲೇ ಗುಂಡಿಕ್ಕಿ ಸಾಯಿಸಿ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಕೊಲೆ ಆರೋಪಿಯನ್ನು ಮಾರಿಸ್ ನೊರೊನ್ಹಾ ಎಂದು ಗುರುತಿಸಲಾಗಿದೆ.ಆರೋಪಿ ತನ್ನ ಫೇಸ್‌ಬುಕ್ ಐಡಿಯಿಂದ ಶಿವಸೇನೆ ನಾಯಕನೊಂದಿಗೆ ಲೈವ್ ಮಾಡುತ್ತಿದ್ದ. ಅವನು ಮಾತು ಮುಗಿಸಿದ ತಕ್ಷಣ, ಮಾರಿಸ್ ಅವನನ್ನು ಗುಂಡಿಕ್ಕಿ ಕೊಂದಿದ್ದಾನೆ. ಶಿವಸೇನೆಯ ಮಾಜಿ ಕಾರ್ಪೋರೇಟರ್‌ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಘೋಸಲ್ಕರ್, ಮಾರಿಸ್

ಫೇಸ್‌ಬುಕ್‌ ಲೈವ್‌ನಲ್ಲೇ ಸ್ನೇಹಿತನ ಹತ್ಯೆ ಮಾಡಿ, ಆರೋಪಿ ಆತ್ಮಹತ್ಯೆ Read More »

ಹಫ್ತಾ ಪ್ರಕರಣ : ಆರೋಪಿಯಿಂದ ಎಂಪಿ 5 ಸಬ್‌ಮೆಶಿನ್ ಗನ್ ವಶ

ದಯಾನಾಯಕ್‌ ನೇತೃತ್ವದ ಕ್ರೈಂ ಬ್ರಾಂಚ್ ತಂಡದ ಕಾರ್ಯಾಚರಣೆ ಮುಂಬಯಿ : ರಿಯಲ್ ಎಸ್ಟೇಟ್ ಡೆವೆಲಪರ್‌ವೊಬ್ಬರಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ಖಾರ್ ನಿವಾಸಿ ಹಿರೇನ್ ಭಗತ್‌ನ ಮನೆಯಿಂದ ಎಂಪಿ5 ಸಬ್ ಮೆಶಿನ್ ಗನ್ ಸೇರಿದಂತೆ ಮತ್ತಿತರ ಅಮೂಲ್ಯ ವಸ್ತುಗಳನ್ನು ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್ ತಂಡ ವಶಪಡಿಸಿಕೊಂಡಿದೆ. ಇದಕ್ಕೂ ಮೊದಲು ಇದೇ ತಂಡ 6 ಮಂದಿ ಆರೋಪಿಗಳನ್ನು ಬಂಧಿಸಿತ್ತು. ವಶಪಡಿಸಿಕೊಂಡ ಗನ್ ಜಗತ್ತಿನಲ್ಲಿ ಹೆಚ್ಚು ಬಳಕೆಯಾಗುವ ಸಬ್‌ಮೆಶಿನ್ ಬಂದೂಕು ಆಗಿದ್ದು, ಮುಖ್ಯವಾಗಿ ಭಯೋತ್ಪಾದನೆ

ಹಫ್ತಾ ಪ್ರಕರಣ : ಆರೋಪಿಯಿಂದ ಎಂಪಿ 5 ಸಬ್‌ಮೆಶಿನ್ ಗನ್ ವಶ Read More »

ಪೂನಂ ಪಾಂಡೆ ವಿರುದ್ಧ ದೂರು ದಾಖಲು

ಪ್ರಚಾರಕ್ಕಾಗಿ ತನ್ನ ಸಾವಿನ ಸುದ್ದಿಯನ್ನು ತಾನೇ ಹಬ್ಬಿಸಿದ ನಟಿ ಮುಂಬಯಿ : ತನ್ನ ಸಾವಿನ ಸುದ್ದಿಯನ್ನೇ ತಾನೇ ಹಬ್ಬಿಸಿ ಮಾಧ್ಯಮಗಳನ್ನು ಬಕರಾ ಮಾಡಿದ್ದ ವಿವಾದಗಳ ರಾಣಿ ಎಂದೇ ಗುರುತಿಸಿಕೊಂಡಿರುವ ಬಾಲಿವುಡ್‌ ಸೆಲೆಬ್ರಿಟಿ ಪೂನಂ ಪಾಂಡೆ ವಿರುದ್ಧ ಇದೀಗ ಕೇಸ್‌ ದಾಖಲಾಗಿದೆ.ಪೂನಂ ಪಾಂಡೆ ನಿಧನ ಬಗ್ಗೆ ಸುಳ್ಳು ಸುದ್ದಿ​ ಹಬ್ಬಲು ಕಾರಣವಾದ ಎಲ್ಲರ ವಿರುದ್ಧ ತನಿಖೆ ನಡೆಸಿ, ಎಫ್​ಐಆರ್​ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ದೂರಿನಲ್ಲಿ ಹೇಳಲಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಪೂನಂ ಪಾಂಡೆ

ಪೂನಂ ಪಾಂಡೆ ವಿರುದ್ಧ ದೂರು ದಾಖಲು Read More »

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಸೀನಿಯರ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಭಡ್ತಿ

ಕಾರ್ಕಳ : ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಖ್ಯಾತಿಯ ಕಾರ್ಕಳ ಮೂಲದ ಮುಂಬೈ ಪೊಲೀಸ್‌ ಅಧಿಕಾರಿ ದಯಾ ನಾಯಕ್‌ ಸೀನಿಯರ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಪದೋನ್ನತಿ ಹೊಂದಿದ್ದಾರೆ. ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್‌ ಅವರು ಮಹಾರಾಷ್ಟ್ರ ಕ್ರೈಂ ಬ್ರಾಂಚ್‌ನಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಮುಂಬೈ ಕ್ರೈಂ ಬ್ರಾಂಚ್‌ ಸೀನಿಯರ್‌ ಇನ್ಸ್‌ಪೆಕ್ಟರ್‌ ಆಗಿ ಅಧಿಕಾರ ವಹಿಸಿದ್ದಾರೆ. 85 ಎನ್‌ಕೌಂಟರ್‌1995ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡ ದಯಾ ನಾಯಕ್‌ 2004ರ ವೇಳೆಗೆ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಸೀನಿಯರ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಭಡ್ತಿ Read More »

ಇಂದು ದೇಶದ ಅತಿ ಉದ್ದದ ಸಮುದ್ರ ಸೇತುವೆ ಉದ್ಘಾಟನೆ

ಮುಂಬಯಿಯಲ್ಲಿ ಸಮುದ್ರದ ಮಧ್ಯೆ ಹಾದುಹೋಗುವ ಸೇತುವೆ ಮುಂಬಯಿಯ : ದೇಶದ ಅತಿ ಉದ್ದದ ಸಾಗರ ಸೇತುವೆಯನ್ನು (ಮುಂಬೈ ಟ್ರಾನ್ಸ್‌ ಹಾರ್ಬರ್‌ ಲಿಂಕ್) ಪ್ರದಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.ಈ ಸೇತುವೆಯನ್ನು ದಕ್ಷಿಣ ಮುಂಬಯಿಯಿಂದ ನವಿಮುಂಬಯಿವರೆಗೆ ಸಮುದ್ರದಲ್ಲಿ ನಿರ್ಮಿಸಲಾಗಿದ್ದು, ಇದು ಬರೋಬ್ಬರಿ 21.8 ಕಿಲೋ ಮೀಟರ್‌ ಉದ್ದವಿದೆ. ದಕ್ಷಿಣ ಮುಂಬಯಿಯಿಂದ ನವಿಮುಂಬಯಿವರೆಗಿನ ಎರಡು ಗಂಟೆಗಳ ಪ್ರಯಾಣವನ್ನು ಇನ್ನು ಕೇವಲ 15-20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.ಸೇತುವೆಯಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸಮಯ, ಇಂಧನ ಉಳಿತಾಯವಾಗಲಿದ್ದು, ಅಟಲ್‌ ಸೇತುವೆಯಲ್ಲಿ ನಾಲ್ಕು ಚಕ್ರದ ವಾಹನಗಳ

ಇಂದು ದೇಶದ ಅತಿ ಉದ್ದದ ಸಮುದ್ರ ಸೇತುವೆ ಉದ್ಘಾಟನೆ Read More »

ಇಂದು ಮೊದಲ ಸೆಮಿ ಫೈನಲ್‌ : ಇಂಡಿಯಾ-ನ್ಯೂಜಿಲ್ಯಾಂಡ್‌ ಮುಖಾಮುಖಿ

2019ರ ಸೋಲಿನ ಸೇಡು ತೀರಿಸುವ ತವಕದಲ್ಲಿ ಟೀಂ ಇಂಡಿಯಾ ಮುಂಬಯಿ: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಇಂದು ನಡೆಯಲಿದ್ದು, ಈ ಪಂದ್ಯಕ್ಕಾಗಿ ಮುಂಬಯಿಯ ವಾಂಖೇಡೆ ಸ್ಟೇಡಿಯಂ ಸಜ್ಜಾಗಿದೆ. ಲೀಗ್‌ ಹಂತದ 9 ಪಂದ್ಯಗಳಲ್ಲಿ ಒಂಬತ್ತನ್ನೂ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಇದೀಗ ನಿಜವಾದ ಪರೀಕ್ಷೆ ಪ್ರಾರಂಭವಾಗಿದೆ. ಮೊದಲ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದು ಕೂಡ ಹೇಳಬಹುದು. ಯಾಕೆಂದರೆ ಕಿವೀಸ್ ವಿರುದ್ಧ 2019ರ ವಿಶ್ವಕಪ್ ಸೆಮಿ-ಫೈನಲ್​ನಲ್ಲಿ

ಇಂದು ಮೊದಲ ಸೆಮಿ ಫೈನಲ್‌ : ಇಂಡಿಯಾ-ನ್ಯೂಜಿಲ್ಯಾಂಡ್‌ ಮುಖಾಮುಖಿ Read More »

ಭೂಕುಸಿತ : ಬೃಹತ್‌ ಗುಂಡಿಗೆ ಬಿದ್ದ 25 ವಾಹನಗಳು

ಕಾಮಗಾರಿಗಾಗಿ ಅಗೆದ ಗುಂಡಿ ಪಕ್ಕದಲ್ಲಿ ಕುಸಿದ ರಸ್ತೆ ಮುಂಬಯಿ : ಉಪನಗರ ಚೆಂಬೂರಿನ ರಾಹುಲ್‌ ನಗರ ಎಂಬಲ್ಲಿ ಭೂಕುಸಿತ ಸಂಭವಿಸಿ 25 ವಾಹನಗಳು ಗುಂಡಿಯೊಳಗೆ ಬಿದ್ದಿವೆ. ಈಸ್ಟರ್ನ್‌ ಎಕ್ಸ್‌ಪ್ರೆಸ್‌ ಹೈವೆ ಸಮೀಪ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ.ಕಾಮಗಾರಿಗಾಗಿ ಬೃಹತ್‌ ಹೊಂಡ ಅಗೆಯಲಾಗಿತ್ತು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭಾರಿ ಮಳೆಯಿಂದಾಗಿ ಈ ಹೊಂಡದ ಪಕ್ಕದಲ್ಲಿ ಭೂಕುಸಿತ ಸಂಭವಿಸಿದೆ. ಹೊಂಡದ ಬದಿಯಲ್ಲಿ ಹಾದುಹೋಗಿದ್ದ ರಸ್ತೆ ಕುಸಿದು ಹೊಂಡಕ್ಕೆ ಬಿದ್ದು ರಸ್ತೆಯಲ್ಲಿ ನಿಲ್ಲಿಸಿದ್ದ ಐದು

ಭೂಕುಸಿತ : ಬೃಹತ್‌ ಗುಂಡಿಗೆ ಬಿದ್ದ 25 ವಾಹನಗಳು Read More »

ಮುಂಬಯಿ ಜುಹು ಬೀಚ್‌ನಲ್ಲಿ ನಾಲ್ಕು ಹುಡುಗರು ನೀರು ಪಾಲು

ಲೈಫ್‌ಗಾರ್ಡ್‌ ಎಚ್ಚರಿಕೆ ಗಮನಿಸದೆ ಸಮುದ್ರಕ್ಕಿಳಿದು ದುರಂತ ಮುಂಬೈ: ನಗರದ ಜುಹು ಬೀಚ್‌ನಲ್ಲಿ ನಾಲ್ವರು ಬಾಲಕರು ಸಮುದ್ರ ಪಾಲಾದ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಬಿಪರ್‌ಜಾಯ್‌ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಘೋಷಿಸಿದ್ದರೂ ಲೈಫ್‌ಗಾರ್ಡ್‌ ಮಾತು ಕೇಳದೆ 8 ಮಂದಿ ಬಾಲಕರಿದ್ದ ತಂಡ ಸಮುದ್ರಕ್ಕಿಳಿದಿತ್ತು. ಅಲೆಗಳ ಹೊಡೆತಕ್ಕೆ ಐದು ಮಂದಿ ಕೊಚ್ಚಿ ಹೋಗಿದ್ದು, ಒಬ್ಬನನ್ನಷ್ಟೇ ಬದುಕಿಸಲು ಲೈಫ್‌ಗಾರ್ಡ್‌ಗಳಿಂದ ಸಾಧ್ಯವಾಗಿದೆ. ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಉಳಿದ ನಾಲ್ವರ ಶೋಧ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ.ಈ ನಾಲ್ವರು ಮಕ್ಕಳು ಬದುಕುಳಿದಿರುವ ಸಾಧ್ಯತೆ

ಮುಂಬಯಿ ಜುಹು ಬೀಚ್‌ನಲ್ಲಿ ನಾಲ್ಕು ಹುಡುಗರು ನೀರು ಪಾಲು Read More »

error: Content is protected !!
Scroll to Top