Modi

ದ್ವಾರಕೀಶ್‌ ನಿಧನಕ್ಕೆ ಮೋದಿ ಸಂತಾಪ

ಬೆಂಗಳೂರು: ಕನ್ನಡ ನಟ ದ್ವಾರಕೀಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಕೊಡುಗೆ ಅಪಾರ ಎಂದು ಬಣ್ಣಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಅವರ ಕೊಡುಗೆ ಅಪಾರವಾಗಿದೆ. ದಶಕಗಳ ಕಾಲ ಸದಾ ನೆನಪಿನಲ್ಲಿ ಉಳಿಯುವ ನಟನೆ ಹಾಗೂ ಸಿನಿಮಾಗಳನ್ನು ನೀಡಿದ್ದಾರೆ. ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಹಾಗೂ ಹೊಸಬರನ್ನು ಬೆಂಬಲಿಸುವ ಮೂಲಕ ಕನ್ನಡ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನಿಧನದಿಂದ ದುಃಖವಾಗಿದೆ. ಅವರ ಅದ್ಭುತ ಸಿನೆಮಾ ಯಾನವನ್ನು ನಾವು ಸ್ಮರಿಸುತ್ತೇವೆ. […]

ದ್ವಾರಕೀಶ್‌ ನಿಧನಕ್ಕೆ ಮೋದಿ ಸಂತಾಪ Read More »

ಮೋದಿ ನಿಂದನೆ : ಸಿದ್ದರಾಮಯ್ಯ ವಿರುದ್ಧ ಇನ್ನೊಂದು ದೂರು

ಹಿಟ್ಲರ್‌, ಮುಸ್ಸೋಲಿನಿ ಎಂದು ಕರೆದಿರುವ ಸಿದ್ದರಾಮಯ್ಯ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್, ಮುಸ್ಸೋಲಿನಿಗೆ ಹೋಲಿಸಿ ಅವಹೇಳನ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಶಾಸಕ ಎಸ್.ಸುರೇಶ್ ಕುಮಾರ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಘಟಕದ ಅಧ್ಯಕ್ಷ ವಿವೇಕ್ ಎಸ್. ರೆಡ್ಡಿ ನೇತೃತ್ವದ ನಿಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅವರನ್ನು ಶನಿವಾರ

ಮೋದಿ ನಿಂದನೆ : ಸಿದ್ದರಾಮಯ್ಯ ವಿರುದ್ಧ ಇನ್ನೊಂದು ದೂರು Read More »

ಬಿಜೆಪಿಯಿಂದ ʼಮೋದಿಗಾಗಿ ಮೀಸಲು ಈ ಭಾನುವಾರʼ ಅಭಿಯಾನ

ಲೋಕಸಭೆ ಚುನಾವಣೆಗೆ ವಿಶೇಷ ರೀತಿಯಲ್ಲಿ ಪ್ರಚಾರ ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಿನಕ್ಕೊಂದು ವಿನೂತನ ಅಭಿಯಾನ ನಡೆಸುತ್ತಿರುವ ಬಿಜೆಪಿ ‘ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಎಂಬ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ಕಾರ್ಯಕರ್ತರು, ಮುಖಂಡರು ಹಾಗೂ ಸ್ಟಾರ್‌ ಪ್ರಚಾರಕರನ್ನು ಹೊರತುಪಡಿಸಿ ಕೇವಲ ಮೋದಿ ಅಭಿಮಾನಿಗಳನ್ನು ಮಾತ್ರ ಬಳಸಿಕೊಂಡು ಈ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 21ರಂದು ಹಾಗೂ ಎರಡನೇ ಹಂತದ ಚುನಾವಣೆ ನಡೆಯುವ

ಬಿಜೆಪಿಯಿಂದ ʼಮೋದಿಗಾಗಿ ಮೀಸಲು ಈ ಭಾನುವಾರʼ ಅಭಿಯಾನ Read More »

ಏ. 14ರಂದು ಮೋದಿ ರಾಜ್ಯಕ್ಕೆ

ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಚುನಾವಣೆ ಪ್ರಚಾರ ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಂತೆಯೇ ಪ್ರಧಾನಿ ನರೇಂದ್ರ ಮೊದಿ ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 14ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಪ್ರಧಾನಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ದೇವನಹಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಅಲ್ಲದೇ ಅದೇ ದಿನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.ಬೆಂಗಳೂರಿನಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡು

ಏ. 14ರಂದು ಮೋದಿ ರಾಜ್ಯಕ್ಕೆ Read More »

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬೆರಳನ್ನೇ ಕತ್ತರಿಸಿ ಕಾಳಿಮಾತೆಗೆ ಅರ್ಪಣೆ

ಕಾರವಾರದಲ್ಲೊಬ್ಬ ವಿಲಕ್ಷಣ ಮೋದಿ ಭಕ್ತ ಕಾರವಾರ : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ ವ್ಯಕ್ತಿಯೊಬ್ಬ ಎಡಗೈ ಬೆರಳನ್ನು ಕತ್ತರಿಸಿ ರಕ್ತ ಅರ್ಪಿಸಿದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ. ಕೈಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ವ್ಯಕ್ತಿಯನ್ನು ಅರುಣ್ ವರ್ಣೇಕರ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮೋದಿಗಾಗಿ ಗುಡಿಯೊಂದನ್ನು ನಿರ್ಮಿಸಿ ಪೂಜೆ ಕೂಡ ಮಾಡುತ್ತಿದ್ದಾರೆ.ಬೆರಳು ಕತ್ತರಿಸಿಕೊಂಡು ಅರುಣ್​, ‘ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಗೋಡೆ ಮೇಲೆ ರಕ್ತದಲ್ಲಿ ಬರೆದಿದ್ದಾರೆ. ಬೆರಳು ಕತ್ತರಿಸಿ

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬೆರಳನ್ನೇ ಕತ್ತರಿಸಿ ಕಾಳಿಮಾತೆಗೆ ಅರ್ಪಣೆ Read More »

ಇಲೆಕ್ಟ್ರೋಲ್‌ ಬಾಂಡ್‌ನಿಂದ ಹಿನ್ನೆಡೆಯಾಗಿಲ್ಲ : ಮೋದಿ

2014ರ ಮೊದಲು ಪಕ್ಷಗಳಿಗೆ ಯಾರು ಹಣ ಕೊಡುತ್ತಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ ಹೊಸದಿಲ್ಲಿ : ಇಲೆಕ್ಟ್ರೋಲ್‌ ಬಾಂಡ್‌ ಕುರಿತು ನ್ಯಾಯಾಲಯ ನೀಡಿದ ತೀರ್ಪಿನಿಂದ ಸರಕಾರಕ್ಕೆ ಹಿನ್ನಡೆಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇಲೆಕ್ಟ್ರೋಲ್‌ ಬಾಂಡ್‌ ವಿಚಾರದಲ್ಲಿ ಖುಷಿಯಿಂದ ಕುಣಿಯುತ್ತಿರುವವರೆಲ್ಲ ಪಶ್ಚಾತ್ತಾಪ ಪಡುವ ಕಾಲ ಬರಲಿದೆ. ಯಾವ ವ್ಯವಸ್ಥೆಯೂ ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲ. ಇಲೆಕ್ಟ್ರೋಲ್‌ ಬಾಂಡ್‌ ವ್ಯವಸ್ಥೆಯನ್ನು ಸುಧಾರಿಸಲು ಅವಕಾಶವಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. 2014ರ ಮೊದಲು ಪಕ್ಷಗಳಿಗೆ ಯಾರು ದೇಣಿಗೆ ಕೊಡುತ್ತಾರೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಈಗ ಕನಿಷ್ಠ

ಇಲೆಕ್ಟ್ರೋಲ್‌ ಬಾಂಡ್‌ನಿಂದ ಹಿನ್ನೆಡೆಯಾಗಿಲ್ಲ : ಮೋದಿ Read More »

ಮೋದಿ ವಿರುದ್ಧ ಅಜಯ್‌ ರಾಯ್‌ ಕಾಂಗ್ರೆಸ್‌ ಅಭ್ಯರ್ಥಿ

ಸೆಂಥಿಲ್‌ಗೆ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಂದ ಕಣಕ್ಕಿಳಿಯುವ 46 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅಜಯ್ ರಾಯ್‌ ಸ್ಪರ್ಧಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್‌ ಸೆಂಥಿಲ್​ ಅವರನ್ನು ಕಾಂಗ್ರೆಸ್‌ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೆಂಥಿಲ್‌ ವಾರ್‌ ರೂಮ್‌ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರಪ್ರದೇಶ,

ಮೋದಿ ವಿರುದ್ಧ ಅಜಯ್‌ ರಾಯ್‌ ಕಾಂಗ್ರೆಸ್‌ ಅಭ್ಯರ್ಥಿ Read More »

ಫೋಟೋಗ್ರಾಫರ್‌ಗೆ ಎಂಪಿ ಟಿಕೆಟ್‌ ದೊರೆತಿರುವುದು ಅಭಿಮಾನದ ಸಂಗತಿ – ಪದ್ಮಪ್ರಸಾದ್‌ ಜೈನ್‌

ಉಡುಪಿ : ಫೋಟೋಗ್ರಾಫರ್‌ ಓರ್ವರು ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿರುವುದು ವೃತ್ತಿ ಬಾಂಧವರಾದ ನಮಗೆ ಅತ್ಯಂತ ಸಂತಸದ ಸಂಗತಿ ಎಂದು ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಅಭಿಪ್ರಾಯಪಟ್ಟರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓರ್ವ ಸಾಮಾನ್ಯ ಫೋಟೋಗ್ರಾಫರ್‌ ಕೂಡ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನ ಪಡೆಯಬಹುದು ಎಂಬುದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರೇ ನಿದರ್ಶನ. ಕೋಟದಲ್ಲಿ ಸ್ವಾತಿ ಸ್ಟುಡಿಯೋ ಹೊಂದಿದ್ದ ಶ್ರೀನಿವಾಸ ಪೂಜಾರಿ ಅವರು ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದವರು. ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು

ಫೋಟೋಗ್ರಾಫರ್‌ಗೆ ಎಂಪಿ ಟಿಕೆಟ್‌ ದೊರೆತಿರುವುದು ಅಭಿಮಾನದ ಸಂಗತಿ – ಪದ್ಮಪ್ರಸಾದ್‌ ಜೈನ್‌ Read More »

ಮೋದಿಗೆ ಕಾಲಲ್ಲಿರುವುದರಲ್ಲಿ ಹೊಡೆಯಬೇಕೆಂದು ಹೇಳಿದ ಕೈ ನಾಯಕ

ಸಿಲಿಂಡರ್‌ ಬೆಲೆ ಕಡಿಮೆ ಮಾಡಿದ್ದಕ್ಕೆ ವ್ಯಂಗ್ಯ ಬೆಂಗಳೂರು: ಚುನಾವಣೆ ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್. ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಚಿತ್ರದುರ್ಗದ ಹಿರಿಯೂರಿನಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗನಾಗಿ ಈ ಮಾತನ್ನು ಹೇಳುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ನೀವೆಲ್ಲರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು.

ಮೋದಿಗೆ ಕಾಲಲ್ಲಿರುವುದರಲ್ಲಿ ಹೊಡೆಯಬೇಕೆಂದು ಹೇಳಿದ ಕೈ ನಾಯಕ Read More »

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಶತಾಯುಷಿ ಅಜ್ಜಿ ಪಾದಯಾತ್ರೆ

ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿರುವ ಅಜ್ಜಿಯ ವೀಡಿಯೊ ವೈರಲ್‌ ಚಾಮರಾಜನಗರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಹಾರೈಸಿ 102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ.ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಮಾದಪ್ಪನ ದರ್ಶನಕ್ಕೆ 18 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಶತಾಯುಷಿ ಅಜ್ಜಿ ಕ್ರಮಿಸಿದ್ದಾರೆ. ಮೋದಿಗಾಗಿ ಪಾದಯಾತ್ರೆ ನಡೆಸಿದ ಅಜ್ಜಿಯನ್ನು ತುಮಕೂರು ಜಿಲ್ಲೆ ತಿಪಟೂರು ಮೂಲದ ಪಾರ್ವತಮ್ಮ ಎಂದು ಗುರುತಿಸಲಾಗಿದೆ. ಅಜ್ಜಿ ಪಾದಯಾತ್ರ ಮಾಡುತ್ತಿಒರುವ ವೀಡಿಯೋ ತುಣುಕುಗಳು

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಶತಾಯುಷಿ ಅಜ್ಜಿ ಪಾದಯಾತ್ರೆ Read More »

error: Content is protected !!
Scroll to Top