ಉದ್ಯಮಿ ನಕುಲ್ ದಾಸ್ ಪೈ ಆತ್ಮಹತ್ಯೆ
ಕಾರ್ಕಳ : ಹೆರ್ಮುಂಡೆ ಪದ್ಮಾವತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ, ಅಜೆಕಾರು ನಿವಾಸಿ ನಕುಲ್ ದಾಸ್ ಪೈ (55) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ತನ್ನ ಫ್ಯಾಕರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉದ್ಯಮದಲ್ಲಿ ಉಂಟಾದ ಆರ್ಥಿಕ ನಷ್ಟವೇ ಆತ್ಯಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.