ಭಾರತದಲ್ಲಿ ವಿಶ್ವಕಪ್ : ಭಾಗವಹಿಸುವ ಬಗ್ಗೆ ನಿರ್ಧರಿಸಲು ಸಮಿತಿ ರಚಿಸಿದ ಪಾಕ್ ಪ್ರಧಾನಿ

ಇಸ್ಲಾಮಾಬಾದ್ : 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾಗವಹಿಸುವ ಬಗ್ಗೆ ನಿರ್ಧರಿಸಲು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ತನ್ನ ಶಿಫಾರಸುಗಳನ್ನು ಷರೀಫ್‌ ಅವರಿಗೆ ಸಲ್ಲಿಸುವ ಮೊದಲು, ಕ್ರೀಡೆ ಮತ್ತು ನೀತಿಯನ್ನು ಹೊರತುಪಡಿಸಿ ಸರಕಾರದ ನೀತಿ, ಆಟಗಾರರು, ಅಧಿಕಾರಿಗಳು, ಅಭಿಮಾನಿಗಳು, ಮಾಧ್ಯಮಗಳು ಮತ್ತು ಭಾರತದ ಪರಿಸ್ಥಿತಿ ಸೇರಿದಂತೆ ಉಭಯ ದೇಶಗಳ ಸಂಬಂಧಗಳ ಕುರಿತು ಎಲ್ಲಾ …

ಭಾರತದಲ್ಲಿ ವಿಶ್ವಕಪ್ : ಭಾಗವಹಿಸುವ ಬಗ್ಗೆ ನಿರ್ಧರಿಸಲು ಸಮಿತಿ ರಚಿಸಿದ ಪಾಕ್ ಪ್ರಧಾನಿ Read More »

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ

ಹಿಂದೂ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ಘಟನೆ ಏ. 5ರಂದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನೊಬ್ಬ ಹಿಂದೂ ಸ್ನೇಹಿತೆಯೊಂದಿಗೆ ಮಾತನಾಡಿದ್ದಕ್ಕಾಗಿ ಆತನ ಮೇಲೆ ಗ್ಯಾಂಗ್‌ವೊಂದು ಹಲ್ಲೆ ನಡೆಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸಂತ್ರಸ್ತನನ್ನು ಮೊಹಮ್ಮದ್ ಜಹೀರ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕನನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕೃತ್ಯದ ಹಿಂದೆ ಬಜರಂಗದಳದ ಕಾರ್ಯಕರ್ತರು …

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ Read More »

ಇಸ್ಕಾನ್‌ನಿಂದ ಕಟುಕರಿಗೆ ಗೋವುಗಳ ಮಾರಾಟ : ಮನೇಕಾ ಗಾಂಧಿ ಆರೋಪ

ದೇಶವ್ಯಾಪಿ ಆಘಾತದ ಅಲೆಯೆಬ್ಬಿಸಿದ ಮಾಜಿ ಸಚಿವೆಯ ವೀಡಿಯೊ ಹೊಸದಿಲ್ಲಿ : ಇಸ್ಕಾನ್‌ ಬಹುದೊಡ್ಡ ವಂಚಕ ಸಂಸ್ಥೆ, ಅದು ತನ್ನ ಗೋಶಾಲೆಗಳಲ್ಲಿರುವ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂಬುದಾಗಿ ಬಿಜೆಪಿ ನಾಯಕಿ, ಮಾಜಿ ಸಚಿವೆ ಮನೇಕಾ ಗಾಂಧಿ ಹೇಳಿರುವ ವೀಡಿಯೋ ವೈರಲ್‌ ಆಗಿ ಆಘಾತದ ಅಲೆಯೆಬ್ಬಿಸಿದೆ.ಸೋಷಿಯಲ್‌ ಮೀಡಿಯಾದಲ್ಲಿ ಅಸಂಖ್ಯಾತ ಬಾರಿ ಶೇರ್‌ ಆಗಿರುವ ವೀಡಿಯೋದಲ್ಲಿ ಮನೇಕಾ ಗಾಂಧಿ ಇಸ್ಕಾನ್‌ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.ಇಸ್ಕಾನ್‌ ಗೋಶಾಲೆಗಳನ್ನು ಸ್ಥಾಪಿಸಿ ಸರಕಾರದಿಂದ ಭೂಮಿ ಮತ್ತು ಅನುದಾನ ಪಡೆಯುತ್ತದೆ. ಬಳಿಕ ಈ ಗೋಶಾಲೆಗಳಲ್ಲಿರುವ ಗೋವುಗಳನ್ನು …

ಇಸ್ಕಾನ್‌ನಿಂದ ಕಟುಕರಿಗೆ ಗೋವುಗಳ ಮಾರಾಟ : ಮನೇಕಾ ಗಾಂಧಿ ಆರೋಪ Read More »

ಕಾವೇರಿ ಕಿಚ್ಚು : ಸೆ.29ರಂದು ಕರ್ನಾಟಕ ಬಂದ್‌

ಬೆನ್ನುಬೆನ್ನಿಗೆ ಎರಡು ಬಂದ್‌ಗಳಿಂದ ಗೊಂದಲ ಬೆಂಗಳೂರು: ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುವುದನ್ನು ಪ್ರತಿಭಟಿಸಿ ಬೆಂಗಳೂರು ಬಂದ್‌ ಮಾಡಿದ ನಾಲ್ಕೇ ದಿನದಲ್ಲಿ ಇನ್ನೊಂದು ಬಂದ್‌ಗೆ ರಾಜ್ಯ ಸಾಕ್ಷಿಯಾಗಲಿದೆ. ಸೆ.29ರಂದು ರಾಜ್ಯ ಬಂದ್‌ಗೆ ಕನ್ನಡ ಸಂಘಟನೆಗಳು ಕರೆ ನೀಡಿವೆ.ಬೆನ್ನುಬೆನ್ನಿಗೆ ಎರಡು ಬಂದ್‌ ನಡೆಸುವು ಕುರಿತಾಗಿ ಗೊಂದಲಗಳಿದ್ದರೂ ಶುಕ್ರವಾರದ ಬಂದ್‌ ಹಿಂದೆಗೆದುಕೊಳ್ಳುವುದಿಲ್ಲ ಎಂದು ಕನ್ನಡ ಸಂಘಟನೆಗಳು ಪಟ್ಟು ಹಿಡಿದಿವೆ.ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿದ್ದು, ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಹೀಗಿದ್ದರೂ …

ಕಾವೇರಿ ಕಿಚ್ಚು : ಸೆ.29ರಂದು ಕರ್ನಾಟಕ ಬಂದ್‌ Read More »

2,000 ರೂ. ನೋಟು ವಿನಿಮಯಕ್ಕೆ ಮೂರೇ ದಿನ ಬಾಕಿ

ಈಗಾಗಲೇ ಶೇ.93ರಷ್ಟು ನೋಟ್‌ ಬ್ಯಾಂಕ್‌ಗೆ ವಾಪಸ್‌ ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ ಸೆ.30ರ ಗಡುವಿಗೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿದೆ. ಗಡುವು ಮುಗಿದ ಬಳಿಕವೂ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಅ.1ರಂದು ಆರ್‌ಬಿಐ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗಡುವು ವಿಸ್ತರಿಸದೆ ನೋಟು ಅಮಾನ್ಯ ಮಾಡಬಹುದು ಎನ್ನಲಾಗುತ್ತಿದೆ.ಕಳೆದ ಮೇ ತಿಂಗಳಲ್ಲಿ 2,000 ರೂ. ನೋಟುಗಳನ್ನು ಚಲಾವಣೆಯಿಂದ …

2,000 ರೂ. ನೋಟು ವಿನಿಮಯಕ್ಕೆ ಮೂರೇ ದಿನ ಬಾಕಿ Read More »

ಇಂದು ಭಾರತ-ಆಸ್ಟ್ರೇಲಿಯ ಕೊನೆಯ ಪಂದ್ಯ

ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗರೂ ಟೀಮ್‌ ಪ್ಲಾನ್‌ ರಾಜ್‌ಕೋಟ್‌ : ಭಾರತ ಹಾಗೂ ಆಸ್ಟ್ರೇಲಿಯ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಇಂದು ರಾಜ್‌ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಹೀಗಿದ್ದರೂ ಟೀಮ್ ಇಂಡಿಯಾಕ್ಕಿದು ಔಪಚಾರಿಕ ಪಂದ್ಯವಲ್ಲ. ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಅಲ್ಲದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಗೆದ್ದು ಪ್ರತಿಷ್ಠೆ ಉಳಿಸಬೇಕಿದೆ. …

ಇಂದು ಭಾರತ-ಆಸ್ಟ್ರೇಲಿಯ ಕೊನೆಯ ಪಂದ್ಯ Read More »

ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 100 ಮಂದಿ ಸಾವು

ವಧು-ವರ ಕೂಡ ಸುಟ್ಟು ಕರಕಲು ಬಾಗ್ದಾದ್‌ : ಉತ್ತರ ಇರಾಕ್​ನ ಹಮ್ದುನಿಯಾಹ್ ಪಟ್ಟಣದಲ್ಲಿ ಮದುವೆ ಮಂಟಪದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 100ಕ್ಕೂ ಹೆಚ್ಚುಮಂದಿ ಸಾವಿಗೀಡಾಗಿ 200 ಮಂದಿ ಗಾಯಗೊಂಡಿದ್ದಾರೆ.ಈವೆಂಟ್​ ಹಾಲ್​ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಬೆಂಕಿ ದುರಂತ ಸಂಭವಿಸಿದೆ. ಪಟಾಕಿ ಸಿಡಿಸುವಾಗ ಮದುವೆ ಮಂಟಪಕ್ಕೆ ಬೆಂಕಿ ತಗುಲಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ 700 ಮಂದಿ ಭಾಗಿಯಾಗಿದ್ದರು.ನೆವೆಹ್ ಪ್ರಾಂತ್ಯವು ಮೊಸುಲ್‌ನ ಹೊರಗೆ ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿದೆ. ಈ ಬೆಂಕಿಯ …

ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 100 ಮಂದಿ ಸಾವು Read More »

ರಾಜಪಥ-ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳು

ಇಂದು ವಿಶ್ವ ಪ್ರವಾಸೋದ್ಯಮ ದಿನ ಭಾರತ ಎಲ್ಲ ವಿಭಾಗದಲ್ಲಿ ಕೂಡ ವಿಶ್ವಗುರು ಆಗಿರುವ ಹಾಗೆ ಪ್ರಾಕೃತಿಕ ಸೌಂದರ್ಯದಲ್ಲಿ ಕೂಡ ಶ್ರೇಷ್ಠವೇ ಆಗಿದೆ. ಹುಡುಕುತ್ತ ಹೋದರೆ ಹೆಜ್ಜೆಗೆ ಒಂದರಂತೆ ಅಚ್ಚರಿಯ ಮತ್ತು ವಿಸ್ಮಯದ ತಾಣಗಳು ಕಾಲಿಗೆ ತೊಡರುತ್ತವೆ. ಇಂದು (ಸೆಪ್ಟೆಂಬರ್ 27) ವಿಶ್ವ ಪ್ರವಾಸೋದ್ಯಮ ದಿನದ ನೆಪದಲ್ಲಿ ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳನ್ನು ಸುತ್ತಾಡಿಕೊಂಡು ಬರೋಣ ಬನ್ನಿ. 1) ಆಗ್ರಾ-ನೆನಪುಗಳ ಮೆರವಣಿಗೆ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ ಎಂದರೆ ತಾಜ್‌ಮಹಲ್. ಆಗ್ರಾದ ಹೃದಯ …

ರಾಜಪಥ-ಭಾರತದ ಟಾಪ್ ಟೆನ್ ಪ್ರವಾಸಿ ತಾಣಗಳು Read More »

ಕೈರಬೆಟ್ಟು ಶಾಲೆಯಲ್ಲಿ ಬೆಳ್ಮಣ್‌ ವೃತ್ತಮಟ್ಟದ ಕ್ರೀಡಾಕೂಟ

ಕಾರ್ಕಳ : ಕೈರಬೆಟ್ಟು ಶಾಲೆಯಲ್ಲಿ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಬೆಳ್ಮಣ್‌ ವೃತ್ತಮಟ್ಟದ ಕ್ರೀಡಾಕೂಟ ಹಾಗೂ ನೂತನ ತರಗತಿಯ ಉದ್ಘಾಟನಾ ಸಮಾರಂಭವು ಸೆ. 27 ರಂದು ನಡೆಯಲಿರುವುದು. ಸಮಾರಂಭದ ಉದ್ಘಾಟನೆಯನ್ನು ಕಾರ್ಕಳದ ಶಾಸಕ ಮಾಜಿ ಸಚಿವ ವಿ. ಸುನೀಲ್‌ ಕುಮಾರ್‌ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾ ಗ್ರಾ. ಪಂ. ಅಧ್ಯಕ್ಷೆ ಪೂಜಾ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್‌ ಕೋಟ್ಯಾನ್‌, ಪಂಚಾಯತ್‌ ಸದಸ್ಯರು, ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಸುನೀಲ್‌ ಕೋಟ್ಯಾನ್‌, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು …

ಕೈರಬೆಟ್ಟು ಶಾಲೆಯಲ್ಲಿ ಬೆಳ್ಮಣ್‌ ವೃತ್ತಮಟ್ಟದ ಕ್ರೀಡಾಕೂಟ Read More »

ಉಭಯ ತಾಲೂಕಿನ ನೀರೆ ಮತ್ತು ಮಡಾಮಕ್ಕಿ ಗ್ರಾ. ಪಂ. ಸೇರಿದಂತೆ ಉಡುಪಿ ಜಿಲ್ಲೆಯ ಏಳು ಗ್ರಾ. ಪಂ. ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ

ಉಡುಪಿ : 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಭಯ ತಾಲೂಕಿನ ನೀರೆ ಮತ್ತು ಮಡಾಮಕ್ಕಿ ಗ್ರಾಮ ಪಂಚಾಯತ್ ಸೇರಿದಂತೆ ಉಡುಪಿ ಜಿಲ್ಲೆಯ ಏಳು ಪಂಚಾಯತ್ ಆಯ್ಕೆಯಾಗಿರುತ್ತದೆ. ಬ್ರಹ್ಮಾವರದ ಕೋಡಿ, ಬೈಂದೂರಿನ ಕಾಲ್ತೋಡು, ಕಾಪುವಿನ ಬೆಳ್ಳೆ, ಕುಂದಾಪುರದ ಶಂಕರನಾರಾಯಣ ಹಾಗೂ ಉಡುಪಿಯ ಅಲೆವೂರು ಗ್ರಾಮ ಪಂಚಾಯತ್‌ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತದೆ. ಸೆ. 25ರಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅ. 2 ರಂದು …

ಉಭಯ ತಾಲೂಕಿನ ನೀರೆ ಮತ್ತು ಮಡಾಮಕ್ಕಿ ಗ್ರಾ. ಪಂ. ಸೇರಿದಂತೆ ಉಡುಪಿ ಜಿಲ್ಲೆಯ ಏಳು ಗ್ರಾ. ಪಂ. ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ Read More »

ತಮಿಳುನಾಡಿಗೆ ಮತ್ತೆ 18 ದಿನ ಕಾವೇರಿ ನೀರು ಹರಿಸುವಂತೆ ಸಿಡಬ್ಲುಆರ್‌ಸಿ ಆದೇಶ

ದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ರೈತ ಸಂಘಟನೆಗಳು ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದರ ಮಧ್ಯೆಯೇ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ (CWRC) ಇಂದು ನಡೆದ ಸಭೆಯಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಅಂದರೆ 18 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ. ಇಂದು ನಡೆದ …

ತಮಿಳುನಾಡಿಗೆ ಮತ್ತೆ 18 ದಿನ ಕಾವೇರಿ ನೀರು ಹರಿಸುವಂತೆ ಸಿಡಬ್ಲುಆರ್‌ಸಿ ಆದೇಶ Read More »

ಹಿರ್ಗಾನ ಮೂರ್ತೆದಾರರ ಸೇವಾ ಸಹಕಾರ ಸಂಘ ವಾರ್ಷಿಕ ಸಭೆ

10.46 ಲ. ರೂ. ಲಾಭ – ಶೇ. 10 ಡಿವಿಡೆಂಡ್ ಘೋಷಣೆ ಕಾರ್ಕಳ : ಹಿರ್ಗಾನ ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 24 ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ, ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ, ಸಿಬ್ಬಂದಿಯವರ ಕಾರ್ಯದಕ್ಷತೆ ಹಾಗೂ ಸಂಘದ ಸದಸ್ಯರ ಸಹಕಾರದಿಂದ ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಇನ್ನೊಂದು ಶಾಖೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಯೋಜಿಸಬೇಕಾಗಿದೆ ಎಂದರು. ಸಂಘದ ಸದಸ್ಯ …

ಹಿರ್ಗಾನ ಮೂರ್ತೆದಾರರ ಸೇವಾ ಸಹಕಾರ ಸಂಘ ವಾರ್ಷಿಕ ಸಭೆ Read More »

error: Content is protected !!
Scroll to Top