ನಿತ್ಯ ಭವಿಷ್ಯ

25-07-2020

ಮೇಷ

ಗುರು ನವಮದಲ್ಲಿರುವುದರಿಂದ ಉತ್ತಮ ದೈವಾನುಗ್ರಹವಿರುತ್ತದೆ. ರಾಶ್ಯಾಧಿಪತಿಯೂ ಅಷ್ಟಮಾಧಿಪತಿಯೂ ಆದ ಕುಜನು ವ್ಯಯದಲ್ಲಿರುವುದರಿಂದ ಆರ್ಥಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಬಹಳ ಜಾಗ್ರತೆಯಿಂದಿರಬೇಕು.

ವೃಷಭ

ಗುರು ಕೇತು ಅಷ್ಟಮದಲ್ಲಿರುವುದರಿಂದ ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ವೈದ್ಯರನ್ನು ಕಾಣುವಂತಹ ಸಾಧ್ಯತೆಯಿದೆ. ಬಂಧುಗಳ ಜೊತೆಗೆ ಮಾತನಾಡುವಾಗ ಮತ್ತು ಹಣದ ವ್ಯವಹಾರದಲ್ಲಿ ಎಚ್ಚರವಿರಲಿ.

ಮಿಥುನ

ಸಪ್ತಮದಲ್ಲಿ ಗುರುಕೇತು ಇರುವುದರಿಂದ ವೈವಾಹಿಕ ಜೀವನದಲ್ಲಿ ಕಿರಿಕಿರಿ ಅನುಭವಿಸುವಂತಾಗಲಿದೆ. ಶನಿ ಅಷ್ಟಮದಲ್ಲಿರುವುದರಿಂದ ನಿಮ್ಮ ಶಾರೀರಿಕ, ಆರ್ಥಿಕ, ಮಾನಸಿಕ ಸ್ಥಿತಿಯ ಬಗ್ಗೆ ಎಚ್ಚರವಿರಲಿ.

ಕರ್ಕಾಟಕ

ಗುರು ಮತ್ತು ಕೇತು ಷಷ್ಠದಲ್ಲಿದ್ದಾರೆ. ಹೀಗಾಗಿ ದೈವಾನುಗ್ರಹದ ಕೊರತೆಯಿದೆ. ವೈವಾಹಿಕ ಸಮಸ್ಯೆಗಳು ತಲೆದೋರುವ ಸಾಧ್ಯತೆಯಿದೆ.

ಸಿಂಹ

ಪಂಚಮದಲ್ಲಿ ಗುರು ಕೇತು ಇರುವುದರಿಂದ ಉತ್ತಮ ದೈವಾನುಗ್ರಹವಿರುತ್ತದೆ. ಗಣಪತಿ ದೇವರನ್ನು ಪ್ರಾರ್ಥಿಸಿರಿ. ಆರೋಗ್ಯದ ಕಡೆ ಗಮನವಿರಲಿ. ಮನಸ್ತಾಪ ಬರದಂತೆ ಎಚ್ಚರ ವಹಿಸಿ.

ಕನ್ಯಾ

ಚತುರ್ಥದಲ್ಲಿ ಗುರು ಕೇತು ಮತ್ತು ಪಂಚಮದಲ್ಲಿ ಶನಿ ಇರುವುದರಿಂದ ಮಿಶ್ರ ಫಲವಿದೆ. ಮಕ್ಕಳ ವಿಷಯದಲ್ಲೂ ಕಿರಿಕಿರಿ ಅನುಭವಿಸುವ ಸಾಧ್ಯತೆಯೂ ಇದೆ.

ತುಲಾ

ದೈವಾನುಗ್ರಹದ ಕೊರತೆ ಇರುವುದು ಮತ್ತು ಚತುರ್ಥದಲ್ಲಿ ಶನಿ ಇರುವುದರಿಂದ ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಎಚ್ಚರದಿಂದಿರುವುದು ಒಳಿತು. ತಾಯಿ ಪ್ರೀತಿ ಕಡಿಮೆ ಆಗದಿರಲಿ.

ವೃಶ್ಚಿಕ

ಉತ್ತಮ ದೈವಾನುಗ್ರಹವಿದ್ದರೂ ಸುಖ ಸ್ಥಾನದ ಕುಜ ಭೂ ಸಂಬಂಧವಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಮನೆಯಿಂದಲೇ ಹೊರಬರಲಿದ್ದೀರಿ. ಅಷ್ಟಮದ ರಾಹು ಬುಧರಿಂದ ಆರೋಗ್ಯವನ್ನು ಕಳೆದುಕೊಳ್ಳಲಿದ್ದೀರಿ.ನಾಗದೇವರನ್ನ ಪ್ರಾರ್ಥಿಸಿರಿ.

ಧನು

ಜನ್ಮದಲ್ಲಿ ಗುರು ಕೇತುವಿದ್ದರೂ ದ್ವಿತೀಯದ ಶನಿ ಸಾಡೇಸಾತ್‌ ದೋಷವನ್ನು ಕೊಡುತ್ತಾನೆ.ಸಹೋದರನ ಜೊತೆಗೆ ವಾದ-ವಿವಾದ ಬೇಡ.

ಮಕರ

ಜನ್ಮದ ಶನಿ ಸಾಡೇಸಾತ್‌ ಶನಿಯಾಗಿದ್ದು, ಇನ್ನೂ 5 ವರ್ಷಗಳ  ಕಾಲ ಇರುತ್ತದೆ. ಸಾಲ ಮಾಡಬೇಡಿ, ಕೊಡಬೇಡಿ. ಜಾಮೀನು ಯಾರಿಗೂ ನಿಲ್ಲಬೇಡಿ. ಸಹೋದರ ವರ್ಗದವರಲ್ಲಿ ಭೂಮಿ ಸಂಬಂಧವಾಗಿ ವಿಚಾರ ಪ್ರಸ್ತಾಪವಾಗಲಿದೆ.

ಕುಂಭ

ಸಾಡೇಸಾತ್‌ ಶನಿಯ ಕಾಟದ ಆರಂಭದಲ್ಲಿದ್ದರೂ ದೈವಾನುಗ್ರಹ ತುಂಬ ಉತ್ತಮವಾಗಿರುವುದರಿಂದ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೀವಾಡುವ ನಿಷ್ಠುರ ಮಾತುಗಳು ನಿಮಗೆ ಸಮಸ್ಯೆಯಾಗಲಿದೆ.

ಮೀನ

ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಹಲವು ಮೂಲಗಳಿಂದ ಲಾಭ ಹರಿದುಬರಲಿದೆ. ಆದರೂ ಆರೋಗ್ಯದ ಕಡೆ ಗಮನವಿರಲಿ.

ಕೆ. ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

97414 89529