ಸುದ್ದಿ

ತೈವಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ

ಜಪಾನ್‌ ಸಹಿತ ಸುತ್ತಮುತ್ತಲ ದೇಶಗಳಿಗೆ ಸುನಾಮಿ ಎಚ್ಚರಿಕೆ ತೈಪಿ : ತೈವಾನ್‌ನಲ್ಲಿ ಇಂದು ಬೆಳಗ್ಗೆ ಹೊತ್ತಿಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಅತಿ ಪ್ರಬಲ ಭೂಕಂಪ ಎನ್ನಲಾಗಿದೆ. ಭೂಕಂಪದಿಂದಾಗಿ ಜಪಾನ್‌ನ ಯನಗುನಿ ದ್ವೀಪದಲ್ಲಿ ಸುನಾಮಿ ಅಪ್ಪಳಿಸುವ ಭೀತಿ ಉಂಟಾಗಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ. 1999ರಲ್ಲಿ ತೈವಾನ್‌ನಲ್ಲಿ ಸಂಭವಿಸಿದ 7.2 ತೀವ್ರತೆಯ ಭೂಕಂಪದಲ್ಲಿ 2,500ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದರು. ಇಂದು […]

ತೈವಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ Read More »

ಏ. 3 : ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ

ಯತ್ನಾಳ್, ಸಿ.ಟಿ. ರವಿ, ಸುನಿಲ್ ಕುಮಾರ್ ಭಾಗಿ ಕಾರ್ಕಳ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಏ. 3ರಂದು ನಾಮಪತ್ರ ಸಲ್ಲಿಸಲಿದ್ದು, ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ದಿಕ್ಸೂಚಿ ಭಾಷಣ ಮಾಡಲಿರುವರು. ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಏ. 3 : ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ Read More »

ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ

ಕಾರ್ಕಳ : ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ಸ್ಕೌಟ್ಸ್ – ಗೈಡ್ಸ್ ಮತ್ತು ಕಬ್ – ಬುಲ್‌ಬುಲ್ ವಿದ್ಯಾರ್ಥಿಗಳಿಗೆ 2 ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಎ. 2 ರಂದು ಶಿರ್ವ ಡಾನ್ ಬಾಸ್ಕೋ ಶಾಲೆ ಸ್ಕೌಟ್ಸ್ – ಗೈಡ್ಸ್ ಶಿಕ್ಷಕ ಉಮೇಶ್ ಕಾಂಚನ್ ಧ್ವಜಾರೋಹಣ ಮಾಡುವ ಮೂಲಕ ಸಾಂಕೇತಿಕವಾಗಿ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಉಪಸ್ಥಿತರಿದ್ದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ್

ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ Read More »

ಕಾರ್ಕಳ ಬಿಜೆಪಿ ಪದಾಧಿಕಾರಿಗಳ ಸಭೆ

ಗ್ರಾಮ ಮಟ್ಟದಿಂದ ಕಾರ್ಯಪ್ರವೃತ್ತರಾಗೋಣ – ಸುನಿಲ್‌ ಕುಮಾರ್‌ ಕಾರ್ಕಳ : ಪಕ್ಷದ ವಿವಿಧ ಹಂತದ ಜವಾಬ್ದಾರಿಗಳನ್ನು ಕಾರ್ಯಕರ್ತರಿಗೆ ವಹಿಸಲಾಗುತ್ತಿದೆ ಎಂದರೆ ಅಂತಹ ಕಾರ್ಯಕರ್ತರನ್ನು ಪಕ್ಷಕ್ಕಾಗಿ ಅವರು ನೀಡಿದ ಪೂರ್ಣ ಪ್ರಮಾಣದ ಸಮಯ ಮತ್ತವರ ಕಾರ್ಯವೈಖರಿಯ ಆಧಾರದ ಆಯ್ಕೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು. ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆ ಏ. 5ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಲಿರುವ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿಯಾಗಿ ಮಂಗಳವಾರ

ಕಾರ್ಕಳ ಬಿಜೆಪಿ ಪದಾಧಿಕಾರಿಗಳ ಸಭೆ Read More »

ಗಣೇಶ್ ಕಾರ್ಣಿಕ್‌ಗೆ ಮಾತೃ ವಿಯೋಗ

ಕಾರ್ಕಳ : ವಿಧಾನ ಪರಿಷತ್ ಮಾಜಿ ಸದಸ್ಯ ಕೆರ್ವಾಶೆ ಗ್ರಾಮದ ಗಣೇಶ್ ಕಾರ್ಣಿಕ್ ಅವರ ತಾಯಿ ಅಂಬಾ ಸಾವಿತ್ರಿ ಕಾರ್ಣಿಕ್ (95) ಎ. 2 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ರಿಟೈರ್ಡ್ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಹರೀಶ್ ಕಾರ್ಣಿಕ್, ಪಾಂಡುರಂಗ ಕಾರ್ಣಿಕ್, ದಿನೇಶ್ ಕಾರ್ಣಿಕ್, ಸುದೀಶ್ ಕಾರ್ಣಿಕ್, ಪ್ರದ್ಯುಮ್ನ ಕಾರ್ಣಿಕ್ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಇಂದು ಸಂಜೆ 6 ಗಂಟೆಗೆ ಕೆರ್ವಾಶೆ ಗುಡ್ಡೆಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ

ಗಣೇಶ್ ಕಾರ್ಣಿಕ್‌ಗೆ ಮಾತೃ ವಿಯೋಗ Read More »

ಎ. 5 : ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಚರ್ಮ ರೋಗ ತಪಾಸಣಾ ಶಿಬಿರ

ಕಾರ್ಕಳ : ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಎ. 5 ರಂದು ಉಚಿತವಾಗಿ ಚರ್ಮ ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ 9:30ರಿಂದ ಸಂಜೆ 5 ಗಂಟೆಯವರೆಗೆ ಆಸ್ಪತ್ರೆಯ ಚರ್ಮ ರೋಗ ಚಿಕಿತ್ಸಾಲಯದಲ್ಲಿ ನಡೆಯಲಿದೆ. ಮೊಡವೆಗಳು/ಪಿಂಪಲ್ಸ್ , ಪಿಗ್ ಮೆಂಟೇಷನ್ ಮತ್ತು ನೆರಿಗೆ, ಬಿಳಿ ಕಲೆಗಳು, ಉರಿಗುಳ್ಳೆ ಮತ್ತು ಸನ್ ಬರ್ನ್, ಕೂದಲು ಉದುರುವಿಕೆ, ಫಂಗಲ್ ಸೋಂಕು, ಚರ್ಮದಲ್ಲಿನ ಯಾವುದೇ ಭಾಗದಲ್ಲಿ ನಿರಂತರ ತುರಿಕೆ ಸೇರಿದಂತೆ ಎಲ್ಲಾ ರೀತಿಯ ಚರ್ಮ, ಕೂದಲು ಮತ್ತು ಉಗುರು ಸಂಬಂಧಿತ

ಎ. 5 : ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಚರ್ಮ ರೋಗ ತಪಾಸಣಾ ಶಿಬಿರ Read More »

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಮಂಗಳೂರು : ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎ. 2ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಭವಿಸಿದೆ. ಶ್ರೀಧರ ಹೆಗಡೆ ಆತ್ಮಹತ್ಯೆಗೆ ಯತ್ನಿಸಿದವರು. ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರಾಗಿದ್ದರು. 2019ರಿಂದ ಬೆಳ್ತಂಗಡಿಯ ಕಡಿರು ಉದ್ಯಾವರ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆಯಾಗಿದ್ದರು. ಹಾಗಾಗಿ ಶ್ರೀಧರ ಹೆಗಡೆ ಅವರು ಫೆಬ್ರವರಿಯಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು. ಕೂಡಲೇ ಅವರನ್ನು ನಗರದ ಜಿಲ್ಲಾ ಸರ್ಕಾರಿ ವೆನ್ ಲಾಕ್

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ Read More »

ಪತಂಜಲಿ ಜಾಹೀರಾತು ಪ್ರಕರಣ – ಬಾಬಾ ರಾಮ್‌ದೇವ್‌ ಸುಪ್ರೀಂ ಕೋರ್ಟ್‌ಗೆ ಹಾಜರು

ದೆಹಲಿ : ಪತಂಜಲಿ ಸುಳ್ಳು ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ್ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಎ. 2ರಂದು ಸುಪ್ರೀಂ ಕೋರ್ಟ್‌ಗೆ ಹಾಜರಾದರು.ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ವಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಹಾಜರಾಗಿದ್ದು, ವಿಚಾರಣೆ ನಡೆಯುತ್ತಿದೆ. ಪತಂಜಲಿ ಉತ್ಪನ್ನಗಳ ಜಾಹೀರಾತುಗಳು ಮತ್ತು ಅವುಗಳ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಂಪನಿಯು ವಿಫಲವಾದ ನಂತರ

ಪತಂಜಲಿ ಜಾಹೀರಾತು ಪ್ರಕರಣ – ಬಾಬಾ ರಾಮ್‌ದೇವ್‌ ಸುಪ್ರೀಂ ಕೋರ್ಟ್‌ಗೆ ಹಾಜರು Read More »

ಉದ್ಯಮಿಯ ಆಸ್ತಿಗಾಗಿ ಮಕ್ಕಳ ಜಗಳ

ವೀಲುನಾಮೆ, ಕಾರು ಕಳವು ಮಾಡಿದ ಕುರಿತು ದೂರು ಕಾರ್ಕಳ : ತಂದೆಯ ಮರಣದ ನಂತರ ಅವರ ಆಸ್ತಿಗಾಗಿ ಮಕ್ಕಳ ನಡುವೆ ಮನಸ್ತಾಪ ಉಂಟಾಗಿ ಮಕ್ಕಳೇ ವೀಲುನಾಮೆ, ಕಾರು, ಆಭರಣ ಕಳವುಗೈದ ಘಟನೆ ಸಾಣೂರಿನಲ್ಲಿ ಸಂಭವಿಸಿದೆ.ಸಾಣೂರು ಗ್ರಾಮದ ಅಶ್ವಿನಿ ಎಂಬವರ ತಂದೆ ಗಣೇಶ್ ಸಾಣೂರು ಗ್ರಾಮದಲ್ಲಿ ಗೇರು ಬೀಜ ಕಾರ್ಖಾನೆಯ ವ್ಯವಹಾರ ಮಾಡಿಕೊಂಡಿದ್ದರು. ಇವರಿಗೆ ಅಶ್ವಿನಿ ಮತ್ತವರ ಗಂಡ ಸಹಾಯ ಮಾಡಿಕೊಂಡಿದ್ದರು. ಗಣೇಶ್‌ ಅವರು ಮಾ. 12ರಂದು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಗಣೇಶ್ ಮೃತಪಡುವ ಮೊದಲು ಅವರ ಆಸ್ತಿಯನ್ನು ವೀಲುನಾಮೆ

ಉದ್ಯಮಿಯ ಆಸ್ತಿಗಾಗಿ ಮಕ್ಕಳ ಜಗಳ Read More »

ವಿಶ್ಲೇಷಣೆ – ವೈರುದ್ಧ್ಯ, ವಿರೋಧಾಭಾಸಗಳ ಕೂಟ I.N.D.I.A

ಕೆಲವು ಕಡೆ ದೋಸ್ತಿ ಕೆಲವು ಕಡೆ ಕುಸ್ತಿ ಎಂಬ ಗೊಂದಲದ ನಿಲುವು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಪ್ರಚಾರವೂ ಬಿರುಸಿನಿಂದ ನಡೆಯುತ್ತಿದೆ. ಅಭ್ಯರ್ಥಿಗಳ ಹೆಸರು ಪ್ರಕಟವಾಗಿ ಒಂದು ಹಂತಕ್ಕೆ ಚುನಾವಣೆಯ ಸ್ಥೂಲ ಚಿತ್ರಣ ಸಿಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ನಡುವೆ ಸಮರ ನಡೆಯುವಂತೆ ಗೋಚರಿಸುತ್ತದೆ. ಇಂಡಿಯಾ ಎನ್ನುವುದು ಕಾಂಗ್ರೆಸ್‌ ನೇತೃತ್ವದ ಹಿಂದಿನ ಯುಪಿಎ ಮೈತ್ರಿಕೂಟಕ್ಕಿಟ್ಟ ಹೊಸ ಹೆಸರಷ್ಟೇ. ಅವೇ ಹಳೆ ಪಕ್ಷಗಳು ಇದರೊಳಗೆ ಇವೆ. ಕೆಲವು ಹೊಸತು ಸೇರ್ಪಡೆಯಾಗಿರಬಹುದು, ಕೆಲವು ಹೋಗಿರಬಹುದು ಅಷ್ಟೇ. ದೇಶದ

ವಿಶ್ಲೇಷಣೆ – ವೈರುದ್ಧ್ಯ, ವಿರೋಧಾಭಾಸಗಳ ಕೂಟ I.N.D.I.A Read More »

error: Content is protected !!
Scroll to Top