ಜಿಲ್ಲಾ

ನ.8 ರಿಂದ ತೆರೆಯಲಿದೆ ಅಂಗನವಾಡಿ | ಬರೋಬ್ಬರಿ 18 ತಿಂಗಳ ಬಳಿಕ ಕೇಳಲಿದೆ ಚಿಣ್ಣರ ಚಿಲಿಪಿಲಿ

ಬೆಂಗಳೂರು : ಕೋವಿಡ್ ಕಾರಣದಿಂದ ಮುಚ್ಚಿದ್ದ ಶೈಕ್ಷಣಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ತನಕ ಆರಂಭವಾಗಿದೆ.ಇದೀಗ ಒಂದೂವರೆ ವರ್ಷದ ಬಳಿಕ ಅಂಗನವಾಡಿಗಳನ್ನು ತೆರೆಯಲು ಸರಕಾರ ಸಜ್ಜಾಗಿವೆ. ನ. 8ರಿಂದ ಮುನ್ನೆಚ್ಚರಿಕ್ಕೆ ಕ್ರಮಗಳೊಂದಿಗೆ ಅಂಗನವಾಡಿಗಳನ್ನು ತೆರೆಯುವಂತೆ ಸರಕಾರ ಸೂಚಿಸಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಎಲ್ಲರಿಗೂ ಕೈ ತೊಳೆಯಲು ಸೋಪು ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಮಕ್ಕಳು ಪ್ರತೀ ಅರ್ಧಗಂಟೆಗೊಮ್ಮೆ ಕೈ ತೊಳೆಯಬೇಕು. ಪುಟಾಣಿಗಳ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹಾಗೂ […]

ನ.8 ರಿಂದ ತೆರೆಯಲಿದೆ ಅಂಗನವಾಡಿ | ಬರೋಬ್ಬರಿ 18 ತಿಂಗಳ ಬಳಿಕ ಕೇಳಲಿದೆ ಚಿಣ್ಣರ ಚಿಲಿಪಿಲಿ Read More »

ಇಂದು ಅಂತರಾಷ್ಟ್ರೀಯ ಕ್ರೀಡಾಪಟು ,ಚಲನ ಚಿತ್ರ ನಟ ರೋಹಿತ್ ಕುಮಾರ್ ಕಟೀಲ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರಿಗೆ ಬೆಂಗಳೂರಿನಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಿರು ಪರಿಚಯ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು(55) ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ. 1994ರಿಂದ 1999ರವರೆಗಿನ ಐದು ವರ್ಷಗಳಲ್ಲಿ ಎತ್ತರ ಜಿಗಿತದ ಹೊಸ ದಾಖಲೆ(2.04 ಮೀಟರ್)ಗಳನ್ನು ಬರೆದ ಇವರು, 1984ರಿಂದ 1992ರ ವರೆಗೆ ಎಂಟು ಬಾರಿ ಕರ್ನಾಟಕದ ಚಿನ್ನದ ಸಾಧನೆಯನ್ನು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ ಇವರು, ಎರಡು ಹೊಸ ಎತ್ತರ ಜಿಗಿತದ

ಇಂದು ಅಂತರಾಷ್ಟ್ರೀಯ ಕ್ರೀಡಾಪಟು ,ಚಲನ ಚಿತ್ರ ನಟ ರೋಹಿತ್ ಕುಮಾರ್ ಕಟೀಲ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ Read More »

ಇಂದು ಹಿರಿಯ ಪತ್ರಕರ್ತೆ ಡಾ.ಯು.ಬಿ.ರಾಜಲಕ್ಷ್ಮೀ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಹಿರಿಯ ಪತ್ರಕರ್ತೆ ಡಾ.ಯು.ಬಿ.ರಾಜಲಕ್ಷ್ಮೀ ಅವರಿಗೆ ಬೆಂಗಳೂರಿನಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಿರು ಪರಿಚಯ ಪತ್ರಿಕಾ ಕ್ಷೇತ್ರದಲ್ಲಿ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತರಂಗ ವಾರಪತ್ರಿಕೆಯ ಸಂಪಾದಕಿ ಹಾಗೂ ಹಿರಿಯ ಪತ್ರಕರ್ತೆ, ಕಾರ್ಕಳ ಕುಕ್ಕುಂದೂರಿನ ಡಾ.ಯು.ಬಿ. ರಾಜಲಕ್ಷ್ಮೀ(60) 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿರುವ ಮೊದಲ ಪತ್ರಕರ್ತೆ ಎಂಬ ಕೀರ್ತಿಗೆ ಪಾತ್ರರಾಗಿರುವ ಇವರು, 1983-87ರವರೆಗೆ ಮುಂಗಾರು, ಹೊಸ ದಿಗಂತ, ಟೈಮ್ಸ್ ಆಫ್ ಡೆಕ್ಕನ್

ಇಂದು ಹಿರಿಯ ಪತ್ರಕರ್ತೆ ಡಾ.ಯು.ಬಿ.ರಾಜಲಕ್ಷ್ಮೀ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ Read More »

ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಬರುವಾಗ ಸಿಡಿಲು ಬಡಿದು ಯುವಕ ಮೃತ್ಯು

ಮಂಗಳೂರು : ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ. ಮೃತ ಯುವಕನನ್ನು ಹರೇಕಳ ಗಾನದಬೆಟ್ಟು ಎಂಬಲ್ಲಿಯ ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33) ಎಂದು ಗುರುತಿಸಲಾಗಿದೆ. ರಹ್ಮಾನ್ ಅವರು ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ರಹ್ಮಾನ್

ಗದ್ದೆಯಲ್ಲಿ ಕಟ್ಟಿದ್ದ ದನವನ್ನು ಬಿಡಿಸಿಕೊಂಡು ಬರುವಾಗ ಸಿಡಿಲು ಬಡಿದು ಯುವಕ ಮೃತ್ಯು Read More »

ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಕಾರ್ಕಳ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ರೋಹಿತ್ ಕುಮಾರ್ ಕಟೀಲ್,ಡಾ.ಯು.ಬಿ.ರಾಜಲಕ್ಷ್ಮಿ,ಬನ್ನಂಜೆ ಬಾಬು ಅಮೀನ್ ,ಬೈಕಂಪಾಡಿ ರಾಮಚಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ Read More »

ಶಾರ್ಟ್ ಸರ್ಕ್ಯೂಟ್: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ

ಕಾರ್ಕಳ : ಚಲಿಸುತ್ತಿದ್ದ ಬಸ್ ನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಬಸ್‌ನ ಪೂರ್ತಿ ದಟ್ಟ ಹೊಗೆ ಕಾಣಿಸಿಕೊಂಡ ಘಟ‌ನೆ ಕುಂದಾಪುರ – ಬೈಂದೂರು ರಾ.ಹೆ. 66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಸ್ ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೆಳಗಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅವಘಢ ಸಂಭವಿಸಿದ್ದನ್ನು ತಪ್ಪಿಸಿದ್ದಾರೆ. ಬಸ್ ಬೈಂದೂರು ಕಡೆಯಿಂದ ಕುಂದಾಪುರಕ್ಕೆ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ Read More »

ಬೆಳ್ಮಣ್ : ಕ್ರಷರ್ ಮಾಲಿಕರಿಗೆ ಹಣದ ಬೇಡಿಕೆ,ಬೈಂದೂರು ರವಿ ಶೆಟ್ಟಿ ಸಹಿತ ಮೂವರ ವಿರುದ್ಧ ದೂರು

ಕಾರ್ಕಳ: ಹಣಕ್ಕೆ ಬೇಡಿಕೆಯಿಟ್ಟು ಬೆದರಿಸಿದ ಮೂವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ಮಣ್ ದುರ್ಗ ಕ್ರಷರ್ ಮಾಲಿಕ ನಿತ್ಯಾನಂದ ಶೆಟ್ಟಿ ದೂರುದಾರರು. ಬೈಂದೂರು ರವಿ ಶೆಟ್ಟಿ ಮತ್ತಿಬ್ಬರ ವಿರುದ್ದ ದೂರು ನೀಡಿದ್ದಾರೆ. ಬೈಂದೂರು ನಿವಾಸಿ ರವಿ ಶೆಟ್ಟಿ ಎಂಬವರು ಕಳೆದ ಅ.10 ರಂದು ನಿತ್ಯಾನಂದ ಶೆಟ್ಟಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತಾನಾಡಲು ಇದೆ ಎಂದಿದ್ದರು. ಬಳಿಕ ಅ.26ರಂದು ಇನೋವಾ ಕಾರಿನಿಂದ ಆಗಮಿಸಿದ ರವಿ ಶೆಟ್ಟಿ ಎಂಬಾತ, ಬೆಳ್ಮಣ್ ಪೆಟ್ರೋಲ್ ಪಂಪ್ ಬಳಿ ನಿತ್ಯಾನಂದ

ಬೆಳ್ಮಣ್ : ಕ್ರಷರ್ ಮಾಲಿಕರಿಗೆ ಹಣದ ಬೇಡಿಕೆ,ಬೈಂದೂರು ರವಿ ಶೆಟ್ಟಿ ಸಹಿತ ಮೂವರ ವಿರುದ್ಧ ದೂರು Read More »

ಕಾರ್ಕಳ : ಕುಕ್ಕುಂದೂರಿನಲ್ಲಿ ನಿಧಿ ಇದೆ ಎಂದು ನಂಬಿಸಿ ಹಣ ಪಡೆದು ವಂಚನೆ ,ಇಬ್ಬರ ಬಂಧನ

ಕಾರ್ಕಳ : ಜಮೀನಿನಲ್ಲಿ ನಿಧಿ ಇದೆ ಎಂದು ಹೇಳಿ ಅದನ್ನು ತೆಗೆದುಕೊಡುವುದಾಗಿ ನಂಬಿಸಿ ಮೋಸ ಮಾಡಿ ಹಣ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಕುಕ್ಕಂದೂರು ದೇವಸ್ಥಾನ ಬಳಿ ವಾಸವಾಗಿರುವ ಕೃಷ್ಣ ನಾಯ್ಕ ಎಂಬವರ ಮನೆಗೆ ಚಿತ್ರದುರ್ಗದ ಕಲ್ಲೇನಹಳ್ಳಿ ನಿವಾಸಿಗಳಾದ ಓಬಯ್ಯ ,ಅಜೇಯ ಎಂಬ ಇಬ್ಬರು ಬಂದು ಜಮೀಮಿನಲ್ಲಿ ನಿಧಿ ಇರುವುದಾಗಿ ಹೇಳಿ ಅದಕ್ಕೆ ಪೂಜೆ ಹೋಮಗಳನ್ನು ಮಾಡಲು 1ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ಕೃಷ್ಣ ನಾಯ್ಕ ಅವರಲ್ಲಿ ಹೇಳಿ 95

ಕಾರ್ಕಳ : ಕುಕ್ಕುಂದೂರಿನಲ್ಲಿ ನಿಧಿ ಇದೆ ಎಂದು ನಂಬಿಸಿ ಹಣ ಪಡೆದು ವಂಚನೆ ,ಇಬ್ಬರ ಬಂಧನ Read More »

ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ

ಮಂಗಳೂರು : ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅ. 30ರಂದು ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿಯಾಗಿ ನಾರಾವಿ ರಕ್ಷಿತ್ ಜೈನ್, ಉಪಾಧ್ಯಕ್ಷರಾಗಿ ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ, ಪುತ್ತೂರು ಚಂದ್ರಹಾಸ ಶೆಟ್ಟಿ, ಬೆಳ್ಳಿಪಾಡಿ ಕೈಪಾ ಕೇಶವ ಭಂಡಾರಿ, ಜಪ್ಪು ಮನ್ನುತೋಟ ಗುತ್ತು ಅನಿಲ್ ಶೆಟ್ಟಿ, ಕೊಳಕೆ ಇರ್ವತ್ತೂರು ಉದಯ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಮೂಡುಬಿದಿರೆ ನ್ಯೂ ಪಡಿವಾಲ್ಸ್

ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ Read More »

ಕಾರ್ಕಳ ಜ್ಞಾನಸುಧಾದ ಸುಕ್ಷಿತ್ ಪಿ.ಎಚ್‌ಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್

ಕಾರ್ಕಳ:ಇಂಡಿಯನ್‌ ಇನ್ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್ ಮತ್ತುರಿಸರ್ಚ್ (IISER)ಸೆಪ್ಟೆಂಬರ್ 17ರಂದು ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ(SCBವಿಭಾಗ) ಸಮಗ್ರ ವಿಭಾಗದಲ್ಲಿ 45ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಇದೇ ಪರೀಕ್ಷೆಯ ಜೀವಶಾಸ್ತ್ರ ದಲ್ಲಿ 25ರಲ್ಲಿ25 ಅಂಕಗಳಿಸಿದ್ದು, ಪ್ರತಿಷ್ಠಿತ IISER ಪುಣೆಯಲ್ಲಿ ವ್ಯಾಸಂಗ ಮಾಡಲು ಅರ್ಹತೆಯನ್ನು ಗಳಿಸಿದ್ದಾರೆ‌.ಇಂಡಿಯನ್‌ಕೌನ್ಸಿಲ್ ಫಾರ್‌ಅಗ್ರಿಕಲ್ಚರ್‌ರಿಸರ್ಚ್ (ICEAR) ಪರೀಕ್ಷೆಯಲ್ಲಿ 100 ಪರ್ಸೆಂಟೈಲ್ ಗಳಿಸಿ ರಾಷ್ಟ್ರ ಮಟ್ಟದ ಸಾಧನೆ ಈ ವಿದ್ಯಾರ್ಥಿಯಿಂದ ಈಗಾಗಲೇ ದಾಖಲಾಗಿದೆ‌. ಸುಕ್ಷಿತ್ ಪಿ.ಎಚ್ ಅವರ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಬಳಗ ಅಭಿನಂದಿಸಿದೆ.

ಕಾರ್ಕಳ ಜ್ಞಾನಸುಧಾದ ಸುಕ್ಷಿತ್ ಪಿ.ಎಚ್‌ಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್ Read More »

error: Content is protected !!
Scroll to Top