Author name: Newskarkala Desk

ಕಾರುಗಳ ಡಿಕ್ಕಿ : ಇಬ್ಬರಿಗೆ ಗಾಯ

ಕಾರ್ಕಳ: ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಳ ಗ್ರಾಮದ ಮುಳ್ಳೂರು ಅರಣ್ಯ ಚೆಕ್‌ಪೊಸ್ಟ್ ಬಳಿ ಭಾನುವಾರ ಸಂಜೆ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಶೃಂಗೇರಿ ಕಡೆಯಿಂದ ಬಜಗೋಳಿಯತ್ತ ಬರುತ್ತಿದ್ದ ಕಾರು ಕಾರ್ಕಳದಿಂದ ಶೃಂಗೇರಿಗೆ ಹೋಗುತ್ತಿದ್ದ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶೃಂಗೇರಿಗೆ ಹೋಗುತ್ತಿದ್ದ ಕಾರಿನಲ್ಲಿದ್ದ ಮೈಸೂರಿನ ಬಿಂದುಶ್ರೀ ಯು.ಪಿ. ಮತ್ತು ಅವರ ಗಂಡ ಅಭಿಜಿತ್‌ ಎಂಬವರು ಗಾಯಗೊಂಡಿದ್ದಾರೆ. ಅಪಘಾತದಿಂದ ಎರಡೂ ಕಾರುಗಳು ನುಜ್ಜುಗುಜ್ಜಾಗಿವೆ. ಶೃಂಗೇರಿ ಕಡೆಯಿಂದ ಬಂದ ಕಾರಿನ ಚಾಲಕಪ್ರಕಾಶ್‌ ಕುಮಾರ್‌ ಅವರ ಅತಿವೇಗ ಮತ್ತು […]

ಕಾರುಗಳ ಡಿಕ್ಕಿ : ಇಬ್ಬರಿಗೆ ಗಾಯ Read More »

ಪ್ರಧಾನಿಯನ್ನು ನಾಲಾಯಕ್‌ ಎಂದ ಪ್ರಿಯಾಂಕ್‌ ಖರ್ಗೆ ವಿರುದ್ಧ ದೂರು

ತಂದೆ ಬಳಿಕ ಮಗನಿಂದ ಮೋದಿ ನಿಂದನೆ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದು ನಿಂದಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷಸರ್ಪಕ್ಕೆ ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡ ಬೆನ್ನಿಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಸೋಮವಾರ ಮೋದಿ ಅವರನ್ನು ನಾಲಾಯಕ್ ಎಂದು ಕರೆದಿದ್ದಾರೆ.ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ ಏನು ಹೇಳಿದ್ರು?

ಪ್ರಧಾನಿಯನ್ನು ನಾಲಾಯಕ್‌ ಎಂದ ಪ್ರಿಯಾಂಕ್‌ ಖರ್ಗೆ ವಿರುದ್ಧ ದೂರು Read More »

ಆಪರೇಷನ್ ಕಾವೇರಿಯಡಿ ಸುಡಾನ್‌ನಿಂದ 3,400 ಭಾರತೀಯರ ರಕ್ಷಣೆ

ಬುಧವಾರಕ್ಕೆ ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಹೊಸದಿಲ್ಲಿ : ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ ಕನಿಷ್ಠ 3,400 ಭಾರತೀಯರನ್ನು ‘ಆಪರೇಷನ್ ಕಾವೇರಿ’ಯಡಿ ರಕ್ಷಿಸಲಾಗಿದೆ.ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಡಾನ್‌ನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸುವುದರೊಂದಿಗೆ ಇದು ಪ್ರಾರಂಭವಾಯಿತು ಮತ್ತು ನಂತರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರನ್ನು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಜೆದ್ದಾಕ್ಕೆ ಕಳುಹಿಸಿದರು. ಸೌದಿ ಸರ್ಕಾರ ಸಾಕಷ್ಟು ನೆರವು ನೀಡಿದ ಪರಿಣಾಮವಾಗಿ ನಮ್ಮ ನಾಗರಿಕರಿಗೆ

ಆಪರೇಷನ್ ಕಾವೇರಿಯಡಿ ಸುಡಾನ್‌ನಿಂದ 3,400 ಭಾರತೀಯರ ರಕ್ಷಣೆ Read More »

ಮೋದಿ ಬಂದ ಬಳಿಕ ಬದಲಾದ ಸಮೀಕ್ಷೆ ಲೆಕ್ಕಾಚಾರ

ಬಿಜೆಪಿಗೆ ಹೆಚ್ಚುಸ್ಥಾನ ಸಿಗುವ ನಿರೀಕ್ಷೆ ಬೆಂಗಳೂರು: ವಿವಿಧ ಚಾನೆಲ್‌ಗಳು, ಸಂಸ್ಥೆಗಳು, ಸ್ವತಹ ರಾಜಕೀಯ ಪಕ್ಷಗಳು ಇಷ್ಟರವರೆಗೆ ನಡೆಸಿದ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದೇ ಹೇಳಲಾಗುತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಖಾಡಕ್ಕೆ ಇಳಿದ ಬಳಿಕ ಈ ಸಮೀಕ್ಷೆಗಳೆಲ್ಲಾ ಬದಲಾಗಿದೆ. ಈ ಸಂಬಂಧ ನ್ಯೂಸ್ 18 ಕನ್ನಡ ಮತ್ತು ಕನ್ವರ್ಜೆಂಟ್ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿಯನ್ನು ಹಂಚಿಕೊಂಡಿದೆ. ಈ ಸಂಸ್ಥೆಗಳು ಇತ್ತೀಚಿಗೆ ನಡೆಸಿದ ಸಮೀಕ್ಷೆ ಪ್ರಕಾರ ಬಿಜೆಪಿ 105, ಕಾಂಗ್ರೆಸ್ 87 ಹಾಗೂ

ಮೋದಿ ಬಂದ ಬಳಿಕ ಬದಲಾದ ಸಮೀಕ್ಷೆ ಲೆಕ್ಕಾಚಾರ Read More »

ನಾಳೆ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ನಟ ದರ್ಶನ್‌ ಭಾಗಿ ಧರ್ಮಸ್ಥಳ : ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ 3ರಂದು ಸಂಜೆ 6.40ರ ಗೋಧೂಳಿ ಮುಹೂರ್ತದಲ್ಲಿ ನಡೆಯಲಿದೆ. ಈ ಸಲ 201 ಜೋಡಿಗಳು ನೋಂದಣಿ ಮಾಡಿಕೊಂಡಿವೆ.ಇಂದು ಎಲ್ಲರ ದಾಖಲೆಗಳನ್ನು ಪರಿಶೀಲಿಸಿ ವಧುವಿಗೆ ಸೀರೆ, ರವಿಕೆ ಕಣ ಮತ್ತು ವರನಿಗೆ ಧೋತಿ, ಶಾಲು ನೀಡಲಾಗುತ್ತದೆ. ಮೇ 3ರಂದು ಸಂಜೆ 5ರಿಂದ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ವಿವಾಹ ನೆರವೇರಲಿರುವ ಅಮೃತವರ್ಷಿಣಿ ಸಭಾ ಮಂಟಪಕ್ಕೆ

ನಾಳೆ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ Read More »

ಬಿಪಿಎಲ್ ಕುಟುಂಬಕ್ಕೆ ನಿತ್ಯ ಅರ್ಧ ಲೀಟರ್‌ ನಂದಿನಿ ಹಾಲು , ಯುಗಾದಿ, ದೀಪಾವಳಿ ಗಣೇಶ ಹಬ್ಬಕ್ಕೆ 3 ಸಿಲಿಂಡರ್ ಉಚಿತ

ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರ್ಜರಿ ಕೊಡುಗೆಗಳು ಬೆಂಗಳೂರು : ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಖಾಸಗಿ ಹೋಟೆಲಿಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಜನಪರ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮತದಾರರನ್ನು ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರ ಸಲಹೆ ಪಡೆದು ಈ ಪ್ರಣಾಳಿಕೆ ತಯಾರು

ಬಿಪಿಎಲ್ ಕುಟುಂಬಕ್ಕೆ ನಿತ್ಯ ಅರ್ಧ ಲೀಟರ್‌ ನಂದಿನಿ ಹಾಲು , ಯುಗಾದಿ, ದೀಪಾವಳಿ ಗಣೇಶ ಹಬ್ಬಕ್ಕೆ 3 ಸಿಲಿಂಡರ್ ಉಚಿತ Read More »

ಉಗ್ರರಿಗೆ ಸಂದೇಶ ರವಾನಿಸುತ್ತಿದ್ದ ಆ್ಯಪ್‌ಗಳಿಗೆ ನಿಷೇಧ

14 ಮೆಸೆಂಜರ್ ಆ್ಯಪ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರಕಾರ ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕ ಗುಂಪುಗಳು ರಹಸ್ಯ ಸಂದೇಶ ಕಳುಹಿಸಲು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.ಎನಿಗ್ಮಾ, ಸೇಫ್‌ವಿಸ್, ವಿಕ್ರ್ಮೆ, ಮೀಡಿಯಾಫೈರ್, ಕ್ರಿಪ್‌ವೈಸರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಜಂಗಿ, ಥ್ರೀಮಾ ಎಲಿಮೆಂಟ್ ಮತ್ತು ಸೆಕೆಂಡ್ ಲೈನ್ ಆ್ಯಪ್‌ಗಳನ್ನು ನಿಷೇಧಿಸಿದೆ.ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಈ ಆ್ಯಪ್‌ಗಳನ್ನು ಮಾಹಿತಿ

ಉಗ್ರರಿಗೆ ಸಂದೇಶ ರವಾನಿಸುತ್ತಿದ್ದ ಆ್ಯಪ್‌ಗಳಿಗೆ ನಿಷೇಧ Read More »

ಮತ್ಸ್ಯಗಂಧ ಎಂಬ ಮತ್ಸ್ಯಕನ್ಯೆಗೆ 25ರ ಹರೆಯ

ಮುಂಬಯಿ-ಕರಾವಳಿ ನಡುವಿನ ಸಂಪರ್ಕ ಸೇತುಗೆ ಬೆಳ್ಳಿಹಬ್ಬದ ಸಂಭ್ರಮ ಉಡುಪಿ: ಮಂಗಳೂರು ಹಾಗೂ ಮುಂಬಯಿ ಮಧ್ಯೆ ಓಡಾಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಬೆಳ್ಳಿಹಬ್ಬದ ಸಂಭ್ರಮ. 1998ರ ಮೇ 1ರಂದು ಮೊದಲ ದಿನದ ಓಡಾಟ ಆರಂಭಿಸಿದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು 2023ರ ಮೇ 1ಕ್ಕೆ ಸಂಚಾರವನ್ನು ಆರಂಭಿಸಿ 25 ವರ್ಷ ಪೂರ್ಣಗೊಳ್ಳಲಿದೆ. ಕರಾವಳಿ ಕನ್ನಡಿಗರಿಗೆ ಮುಂಬಯಿ ಯಾನವನ್ನು ಅಪ್ಯಾಯಮಾನವಾಗಿಸಿದ ಮತ್ಸ್ಯಗಂಧ ರೈಲು ಜನಮಾನಸದಲ್ಲಿ ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ. ನಮ್ಮ ರೈಲು ಎಂಬ ಪ್ರೀತಿ ಈಗ ಕೊಂಕಣ ರೈಲು ಮಾರ್ಗದಲ್ಲಿ

ಮತ್ಸ್ಯಗಂಧ ಎಂಬ ಮತ್ಸ್ಯಕನ್ಯೆಗೆ 25ರ ಹರೆಯ Read More »

ಪೊನ್ನಿಯಿನ್ ಸೆಲ್ವನ್ ಎಂಬ ದೃಶ್ಯ ಕಾವ್ಯ ಹುಟ್ಟಿದ ಕಥೆ

ಮಣಿರತ್ನಂ ಎಂಬ ಮಾಂತ್ರಿಕ ನಿರ್ದೇಶಕನ ಕಲ್ಪನಾ ವಿಹಾರ ಕಲ್ಕಿ ಎಂಬ ತಮಿಳು ಲೇಖಕನ ಮಹಾಕಾದಂಬರಿ ಮಣಿರತ್ನಂ ನಿರ್ದೇಶನದಲ್ಲಿ ಒಂದು ಮೆಗ್ನಮಾಪಸ್ ಸಿನೆಮಾ ಆದದ್ದು ಹೇಗೆ? ಮತ್ತೆ ಒಂದು ದಕ್ಷಿಣ ಭಾರತದ ಸಿನೆಮಾ ಗೆದ್ದು ವಿಜೃಂಭಿಸಿದೆ. ಆ ಸಿನೆಮಾ ಹುಟ್ಟಿದ ಕತೆಯೂ ಸಿನೆಮಾಗಿಂತ ರೋಚಕ ಆಗಿದೆ. ಪೊನ್ನಿಯಿನ್ ಸೆಲ್ವನ್ (ಭಾಗ 1) ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಿ ತಮಿಳು ಚಿತ್ರರಂಗದ ಎಲ್ಲ ದಾಖಲೆ ಮುರಿದಿದ್ದರೆ ಅದೇ ಸಿನೆಮಾದ ಭಾಗ 2 ಈ ವಾರ ಬಿಡುಗಡೆ ಆಗಿ

ಪೊನ್ನಿಯಿನ್ ಸೆಲ್ವನ್ ಎಂಬ ದೃಶ್ಯ ಕಾವ್ಯ ಹುಟ್ಟಿದ ಕಥೆ Read More »

ಇಂದು ಬಿಜೆಪಿ, ನಾಳೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಕೊಡುಗೆಗಳ ಮೇಲಿದೆ ಭಾರಿ ನಿರೀಕ್ಷೆ ಬೆಂಗಳೂರು: ಚುನಾವಣಾ ಕಣದಲ್ಲಿ ಅಬ್ಬರಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಇದೀಗ ಪ್ರಣಾಳಿಕೆ ಬಿಡುಗಡೆಗೆ ತಯಾರಿ ಮಾಡುತ್ತಿವೆ. ಬಿಜೆಪಿ ಪ್ರಣಾಳಿಕೆ ಸೋಮವಾರ ಮತ್ತು ಕಾಂಗ್ರೆಸ್‌ ಪ್ರಣಾಳಿಕೆ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.ಬಿಜೆಪಿ ಪ್ರಣಾಳಿಕೆಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದುಕೊಂಡಿದೆ. ಈ ಆಂಶಗಳ್ನು ಸೇರಿಸಿಕೊಂಡು ಕಾಂಗ್ರೆಸ್‌ನ ಉಚಿತ ಕೊಡುಗೆಗಳನ್ನು ಕೌಂಟರ್‌ ಮಾಡಲು ಬಿಜೆಪಿ ಯಾವ ರೀತಿಯ ಭರವಸೆಗಳನ್ನು ನೀಡಲಿದೆ ಎಂಬ ಕುತೂಹಲವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ

ಇಂದು ಬಿಜೆಪಿ, ನಾಳೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ Read More »

error: Content is protected !!
Scroll to Top