ಮಕ್ಕಳ ಹೋಂ ವರ್ಕ್‌ ವಿಚಾರ : ಪೊಲೀಸ್‌ ಠಾಣೆ ಮೆಟ್ಟಿಲೇರಿದ ದಂಪತಿ ಜಗಳ

ಕಾರ್ಕಳ : ಮಕ್ಕಳ ಹೋಂವರ್ಕ್‌ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳ ನಡೆದು ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ. ದುರ್ಗಾ ಗ್ರಾಮದ ಅಶೋಕ್‌ ಹಾಗೂ ಅವರ ಪತ್ನಿ ವಿನಂತಿ ಅವರ ಮಧ್ಯೆ ಜಗಳವಾಗಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ನ. 19ರ ರಾತ್ರಿ 11:30ರ ವೇಳೆ ವಿನಂತಿ ಅವರು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ನೀಡಿದ ಮನೆಕೆಲಸವನ್ನು ಮಾಡುವಂತೆ ತಿಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪತಿ ಅಶೋಕ್ ಅವರು ಅವಾಚ್ಯ ಶಬ್ದಗಳಿಂದ ಬೈಯ್ದು, ಗಾಂಧಿ ಮೈದಾನದಲ್ಲಿರುವ ತಮ್ಮ ಫ್ಲ್ಯಾಟಿನ ಕೀಯನ್ನು ಕೊಡುವಂತೆ ಒತ್ತಾಯಿಸಿರುತ್ತಾರೆ. ಆಗ ವಿನಂತಿ ಅವರು ಬೆಳಗ್ಗೆ ಹೋಗುವಂತೆ ತಿಳಿಸಿದಾಗ ಏಕಾಏಕಿ ಕೋಪಗೊಂಡಿರುವ ಅಶೋಕ್‌ ವಿನಂತಿ ಅವರ ಮೇಲೆ ಹಲ್ಲೆ ನಡೆಸಿರುತ್ತಾರೆ.

ನೀರಿನ ಬಾಟಲಿಯಲ್ಲಿ ಹಲ್ಲೆ
ಅಶೋಕ್‌ ಅವರು ಹಲ್ಲೆ ನಡೆಸಿದ ಸಂದರ್ಭ ವಿನಂತಿ ಕಿರುಚಿಕೊಂಡಿದ್ದು ಈ ವೇಳೆ ಅಶೋಕ್‌ ನೀರಿನ ಪ್ಲಾಸ್ಟಿಕ್ ಬಾಟಲಿಯಿಂದ ಮುಖಕ್ಕೆ ಹಲ್ಲೆ ನಡೆಸಿರುತ್ತಾರೆ ಎಂದು ವಿನಂತಿಯವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.







































error: Content is protected !!
Scroll to Top