ರೋಟರಿ ಕ್ಲಬ್ ಕಾರ್ಕಳ ವಜ್ರಮಹೋತ್ಸವ – 6ನೇ ವರ್ಷದ ಗೂಡುದೀಪ ಸ್ಪರ್ಧೆ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಸಂಸ್ಥೆಯ ವಜ್ರಮಹೋತ್ಸವದ ಪ್ರಯುಕ್ತ ನ. 19 ರಂದು ರೋಟರಿ ಬಾಲ ಭವನದಲ್ಲಿ 6ನೇ ವರ್ಷದ ದೀಪಾವಳಿ ಗೂಡುದೀಪ ಸ್ಪರ್ಧೆ ನಡೆಯಿತು.

ಫಲಿತಾಂಶ
ಆಧುನಿಕ ವಿಭಾಗ:
ಗಿಜಿಗಿಜಿ ಕಾಯಿಯಿಂದ ವಿಠಲ್ ಭಟ್ ರಥಬೀದಿ ಮಂಗಳೂರು ಇವರು ತಯಾರಿಸಿದ ಗೂಡುದೀಪ ಪ್ರಥಮ, 40 ಬಗೆಯ ಹಣ್ಣು ಹಂಪಲಿನ ಬೀಜಗಳಿಂದ ಜಗದೀಶ್ ಅಮೀನ್ ಸುಂಕದ ಕಟ್ಟೆ ತಯಾರಿಸಿದ ಗೂಡುದೀಪ ದ್ವಿತೀಯ, ಬಾಳೆ ಗೀಡದಿಂದ ರಾಜೇಶ್ ಚಿಲಿಂಬಿಯವರು ತಯಾರಿಸಿದ ಗೂಡುದೀಪ ತೃತೀಯ ಸ್ಥಾನ ಪಡೆಯಿತು.

ಸಾಂಪ್ರದಾಯಿಕ ವಿಭಾಗ :
ಆದಿತ್ಯ ಭಟ್ ಗುರುಪುರ (ಪ್ರಥಮ), ರಕ್ಷಿತ್ ಕುಮಾರ್ (ದ್ವಿತೀಯ), ಉಮೇಶ್ ಕಾವೂರು (ತೃತೀಯ)

ಕಾರ್ಕಳದ ಪ್ರತ್ಯೇಕ ಸ್ಪರ್ಧೆ :
ಕಾರ್ಕಳದ ಸ್ಥಳೀಯರಿಗೆ ನಡೆಸಿದ ಸ್ಪರ್ಧೆಯಲ್ಲಿ ಚೇತನ್ ರಾವ್ (ಪ್ರಥಮ), ರಾಜೇಶ್ ನಕ್ರೆ (ದ್ವಿತೀಯ), ನಾಗೇಶ್ ಹೆಗ್ಡೆ (ತೃತೀಯ)

ವಿನುತ ವಿನೀತ್, ಕೀರ್ತಿ ಪೂಜಾರಿ, ಅಮೃತ್ ರಾವ್ ಹಾಗೂ ಟೀಂ ಬ್ಲಾಕ್ ಸ್ಪೆಕ್ಟರ್ ಸಮಾಧಾನಕರ ಬಹುಮಾನ ಪಡೆದರೆ ದ್ರುವ ಕಾಮತ್ ವಿಶೇಷ ಪ್ರೋತ್ಸಾಹಕ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಶೃಜನ್ ಕಾಮತ್, ಸುಜಯ ಕಾಮತ್, ಯಶ್ವಿತಾ ಹಾಗೂ ಸಾನ್ವಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಚಿನ್ನದ ಪದಕ, ನಗದು, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಆಯೋಜಕ ಶುಭದ ರಾವ್ ವಿಜೇತರ ವಿವರಗಳನ್ನು ನೀಡಿದರು.

ರೋಟರಿ ಕ್ಲಬ್ ಅದ್ಯಕ್ಷ ಜಾನ್ ಆರ್ ಡಿ ಸಿಲ್ವ, ವಜ್ರಮಹೋತ್ಸವ ಸಮಿತಿಯ ಅದ್ಯಕ್ಷ ತುಕಾರಾಮ್ ನಾಯಕ್, ಯೋಗೀಶ್ ಪ್ರಭು, ಬಾಲಾಜಿ ಪ್ರಶಾಂತ್ ಶೆಣೈ, ನವೀನ್ ರಾವ್ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ವಸಂತ ಎಂ. ಕಾರ್ಯಕ್ರಮ ನಿರೂಪಿಸಿ, ಇಕ್ಬಾಲ್ ಅಹಮ್ಮದ್ ವಂದಿಸಿದರು. ಮಂಗಳೂರು, ಉಡುಪಿ, ಮತ್ತು ಕಾರ್ಕಳದ ಸ್ಪರ್ಧಿಗಳು ಆಕರ್ಷಕ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.







































error: Content is protected !!
Scroll to Top