ದತ್ತಿ ಉಪನ್ಯಾಸದಿಂದ ಓದಿನ ಅಭಿರುಚಿ : ಶ್ರೀನಿವಾಸ ಭಂಡಾರಿ ಮುದ್ದೂರು

ಹೆಬ್ರಿ : ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಲು ದತ್ತಿ ಉಪನ್ಯಾಸದಂಥ ಕಾರ್ಯಕ್ರಮ ಸಹಕಾರಿ. ಕನ್ನಡ ಸಾಹಿತ್ಯ ಗ್ರಂಥಾಲಯದ ಸಹಯೋಗದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಿಂದ ಪರಿಷತ್ತಿನ ಉದ್ದೇಶ ಈಡೇರಿದೆ ಎಂದು ಪರಿಷತ್ತಿನ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರ ಹೆಬ್ರಿ
ಸಹಯೋಗದೊಂದಿಗೆ ಜರುಗಿದ ದತ್ತಿ ಉಪನ್ಯಾಸ ಹಾಗೂ ಓದುವ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ತಿಂಗಳ ಸಡಗರ ಕಾರ್ಯಕ್ರಮದಲ್ಲಿ ಅಂಬಲಪಾಡಿ ಜಾನಕಿ ವ್ಯಾಸ ಬಲ್ಲಾಳ ದತ್ತಿ ಹಾಗೂ ಸದಾನಂದ ಸುವರ್ಣ ದತ್ತಿ ಉಪನ್ಯಾಸ ಅ.ಪೊಳಲಿ ಬಾಲಕೃಷ್ಣ ಶೆಟ್ಟಿ ಮತ್ತು ಡಾ.ಶಿವರಾಮ ಕಾರಂತ ಬದುಕು ಮತ್ತು ಬರೆಹ ಎಂಬ ಎರಡು ದತ್ತಿ ಉಪನ್ಯಾಸಗಳನ್ನು ನಡೆಯಿತು.
ಅಮೃತ ಭಾರತಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮಹೇಶ್ ಹೈಕಾಡಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯತ್ ಗ್ರಂಥಾಲಯದ ಅರಿವು ಕೇಂದ್ರದ ವತಿಯಿಂದ ನಡೆಸಲಾದ ಓದುವ ಬೆಳಕು ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ತಾವು ಓದಿದ ಮೆಚ್ಚಿನ ಪುಸ್ತಕದ ಕುರಿತು ಮಾತನಾಡಿದರು.
ಹೆಬ್ರಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಅಶೋಕ್, ಸದಸ್ಯರಾದ ಎಚ್.ಜನಾರ್ದನ್, ಶಿಕ್ಷಣ ಪೌಂಡೇಷನ್ ತಾಲೂಕು ಸಂಯೋಜಕಿ ವಿಜಯಲಕ್ಷ್ಮಿ, ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹರಿಕಿರಣ್ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ಎಸ್ ಉಪನ್ಯಾಸದ ಕುರಿತು ಪ್ರತಿಸ್ಪಂದನ ಮಾತುಗಳನ್ನಾಡಿದರು.
ಗ್ರಂಥಪಾಲಕಿ ಪುಷ್ಪಾವತಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ
ಮಂಜುನಾಥ ಕೆ. ಶಿವಪುರ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರೀತೇಶ್ ಶೆಟ್ಟಿ ವಂದಿಸಿದರು. ಕ.ಸಾ.ಪ ಪದಾಧಿಕಾರಿಗಳು, ಗ್ರಂಥಾಲಯ ಓದುಗರು ಉಪಸ್ಥಿತರಿದ್ದರು.







































error: Content is protected !!
Scroll to Top