ಹೆಬ್ರಿ ಪೊಲೀಸರ ಕಾರ್ಯಾಚರಣೆ : ಇಬ್ಬರ ಬಂಧನ – ಇಬ್ಬರು ಪರಾರಿ
ಹೆಬ್ರಿ : ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಳವುಗೈದು ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹೆಬ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ. 18ರ ಮುಂಜಾನೆ 3 ಗಂಟೆಗೆ ನಾಡ್ಪಾಲು ಗ್ರಾಮದ ಬೇಳಾರ್ ಬಳಿ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯ ತನಿಖೆ ವಿಭಾಗದ ಎಸ್‌ಐ ಮಹಾಂತೇಶ್ ನೇತೃತ್ವದ ತಂಡ ಆರೀಫ್ ಮತ್ತು ಮೊಹಮ್ಮದ್ ಮುಜಾಮಿರ್ ಎಂಬವರನ್ನು ವಶಕ್ಕೆ ಪಡೆದಿದೆ.
ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಸ್ ನಿಲ್ದಾಣದ ಬಳಿ ಮಲಗಿದ್ದ ಜಾನುವಾರುಗಳನ್ನು ಕಳವುಗೈದು ಆರೀಶ ಮತ್ತು ಹಸನಬ್ಬ ರಫೀಧ್ ಸಫಾನ್ ಎಂಬುವವರು ಗೂಡ್ಸ್‌ನಲ್ಲಿ ಸಾಗಾಟ ಮಾಡುತ್ತಿದ್ದರು. ಪೊಲೀಸರು ಗೂಡ್ಸ್ ಅನ್ನು ತಡೆದು ನಿಲ್ಲಿಸುವಾಗ ಆರೋಪಿಗಳು ಗೂಡ್ಸ್ ಬಿಟ್ಟು ಪರಾರಿಯಾಗಿರುತ್ತಾರೆ. ಆಪಾದಿತರಿಗೆ ಸ್ಕೂಟಿಯಲ್ಲಿ ಎಸ್ಕಾರ್ಟ್ ಮಾಡುತ್ತಿದ್ದ ಆರೀಫ್ ಮತ್ತು ಮೊಹಮ್ಮದ್ ಮುಜಾಮಿರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇವರು ಜನರ ಮತ್ತು ಪೊಲೀಸರ ಇರುವಿಕೆಯ ಬಗ್ಗೆ ಖಾತರಿ ಮಾಡಿಕೊಂಡು ಫೋನ್ ಕರೆಯ ಮೂಲಕ ಮಾಹಿತಿ ನೀಡುತ್ತಿದ್ದರು. ಗೂಡ್ಸ್ ವಾಹನದಲ್ಲಿ ಒಟ್ಟು 17 ಜಾನುವಾರುಗಳಿದ್ದು ಒಂದು ಜಾನುವಾರು ಮೃತಪಟ್ಟಿರುತ್ತದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.