ಗ್ಯಾಸ್‌ ಬೆಲೆ ತುಸು ಇಳಿಕೆ

ಹೊಸದಿಲ್ಲಿ : ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ತುಸು ಇಳಿಕೆಯಾಗಿದೆ. ಸದ್ಯಕ್ಕೆ ನಾಲ್ಕು ಮೆಟ್ರೋ ನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್​ಗೆ 57.50 ರೂ.ಕಡಿಮೆ ಆಗಿದೆ. ದಿಲ್ಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ ಮಹಾನಗರಗಳಲ್ಲಿ ಸದ್ಯ ಈ ಬೆಲೆ ಇಳಿಕೆ ಆಗಿರುವುದನ್ನು ಪ್ರಕಟಿಸಲಾಗಿದೆ. ನ.16ರಿಂದಲೇ ಹೊಸ ದರ ಜಾರಿಗೆ ಬಂದಿದೆ ಎಂದು ತೈಲ ಕಂಪನಿಗಳು ಹೇಳಿವೆ. ದೀಪಾವಳಿಗೆ ಮುನ್ನ ಸಿಲಿಂಡರ್​ಗೆ 101.5 ರೂನಷ್ಟು ಬೆಲೆ ಏರಿಕೆಯ ಬಿಸಿ ಕಂಡಿದ್ದ ಜನರಿಗೆ ಈಗ ತುಸು ನಿರಾಳವಾಗಿದೆ.
ತೈಲ ಕಂಪನಿಗಳು ಪ್ರಕಟಿಸಿರುವ ಗ್ಯಾಸ್ ಬೆಲೆ ಇಳಿಕೆ ಕೇವಲ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳದ್ದು ಮಾತ್ರ ಅನ್ವಯವಾಗುತ್ತದೆ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ತತ ಎರಡು ತಿಂಗಳು ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಾಗಿ. ಅಕ್ಟೋಬರ್ 1ರಂದು 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆಗಳನ್ನು 209 ರೂಗಳಷ್ಟು ಹೆಚ್ಚಿಸಲಾಗಿತ್ತು. ನವೆಂಬರ್ 1ರಂದು ಸುಮಾರು ನೂರು ರೂ.ಗಳಿಗೂ ಹೆಚ್ಚು ಏರಿಕೆ ಮಾಡಲಾಗಿತ್ತು.







































error: Content is protected !!
Scroll to Top