ಕಾರ್ಕಳ : ರಸ್ತೆಯಲ್ಲಿ ಸಿಕ್ಕಿದ ಬ್ಯಾಗ್ ಅನ್ನು ಬಂಗ್ಲೆಗುಡ್ಡೆ ನಿವಾಸಿಗಳಾದ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನ. 18ರಂದು ಕಾರ್ಕಳ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ನಗದು ಮತ್ತು ಇತರೆ ವಸ್ತುಗಳಿದ್ದ ಬ್ಯಾಗ್ ಇಬ್ರಾಹಿಂ ಸಾಹೇಬ್ ಮತ್ತು ಹರ್ಷದ್ ಎಂಬವರಿಗೆ ಸಿಕ್ಕಿದ್ದು ಅದನ್ನು ಪೊಲೀಸ್ ಠಾಣೆಗೆ ನೀಡಿರುತ್ತಾರೆ. ಇದು ಶಿವಪುರದ ಸಂದೇಶ್ ಶೆಟ್ಟಿ ಎಂಬವರಿಗೆ ಸೇರಿದ ಬ್ಯಾಗ್ ಎಂದು ಖಚಿತಪಡಿಸಿಕೊಂಡ ಪೊಲೀಸರು ಬಳಿಕ ವಾರಿಸುದಾರರಿಗೆ ಬ್ಯಾಗ್ ಹಸ್ತಾಂತರಿಸಿದರು.
ರಸ್ತೆಯಲ್ಲಿ ಸಿಕ್ಕಿದ ಬ್ಯಾಗ್ ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದ ಬಂಗ್ಲೆಗುಡ್ಡೆ ಯುವಕರು
