ಎಲ್ಲ ಟಿಕೆಟ್ ಕನ್ಫರ್ಮ್ ಆಗುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ
ಹೊಸದಿಲ್ಲಿ : ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಣಾಮಕಾರಿ ಸೇವೆ ನೀಡುವ ನಿಟ್ಟಿನಲ್ಲಿ ವೈಟಿಂಗ್ ಲಿಸ್ಟ್ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿದೆ. ಈ ಕುರಿತಾಗಿ ಅಧ್ಯಯನಗಳು ನಡೆಯುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಮಾಡುವಾಗ ವೈಟಿಂಗ್ ಲಿಸ್ಟ್ ಎಂಬ ಆಯ್ಕೆ ಇರುವುದಿಲ್ಲ.
ರೈಲ್ವೆ ಸಚಿವಾಲಯ ಮುಂದಿನ 4-5 ವರ್ಷಗಳಲ್ಲಿ ‘ವೇಟಿಂಗ್ ಲಿಸ್ಟ್’ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದೆ. ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಎಲ್ಲ ಟಿಕೆಟ್‌ಗಳು ಕನ್ಫರ್ಮ್ ಆಗುವುದಿಲ್ಲ, ಕೆಲವು ಟಿಕೆಟ್‌ಗಳು ವೈಟಿಂಗ್ ಲಿಸ್ಟ್‌ಗೆ ಹೋಗುತ್ತವೆ. ವೈಟಿಂಗ್ ಲಿಸ್ಟ್‌ನಲ್ಲಿದ್ದವರಿಗೆ ಯಾರಾದರೂ ಟಿಕೆಟ್ ರದ್ದು ಮಾಡಿದರೆ ಮಾತ್ರ ಪ್ರಯಾಣಿಸಲು ಅವಕಾಶ ಸಿಗುತ್ತದೆ.
ವೈಟಿಂಗ್ ಟಿಕೆಟ್ ಕನ್ಫರ್ಮ್ ಆಗುವುದು ಖಾತರಿಯಿಲ್ಲದಿದ್ದರೂ ಪ್ರಯಾಣಿಕರು ಆಗಬಹುದು ಎಂಬ ನಿರೀಕ್ಷೆಯಲ್ಲಿ ಟಿಕೆಟ್ ಬುಕ್ ಮಾಡಿ ಕೊನೆ ಗಳಿಗೆ ತನಕ ಕಾಯುತ್ತಿರುತ್ತಾರೆ. ಈ ಸಮಸ್ಯೆಯನ್ನು ತಪ್ಪಿಸಲು ಬುಕ್ಕಿಂಗ್ ಮಾಡುವ ಎಲ್ಲ ಟಿಕೆಟ್‌ಗಳು ಖಾತರಿಯಾಗುವ ವಿಧಾನವನ್ನು ಅಳವಡಿಸಿಕೊಳ್ಳುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.
ವೈಟಿಂಗ್ ಲಿಸ್ಟ್ ವ್ಯವಸ್ಥೆ ತೆರವು ಮಾಡುವುದರಿಂದ ರೈಲ್ವೇ ಸಚಿವಾಲಯ ಬೇಡಿಕೆಗೆ ತಕ್ಕಂತೆ ಸೀಟುಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಟಿಕೆಟ್‌ಗಳು ಬುಕ್ ಆಗುವುದರಿಂದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ. ಮತ್ತಷ್ಟು ಜನರು ರೈಲ್ವೆ ಪ್ರಯಾಣದತ್ತ ಮುಖ ಮಾಡುತ್ತಾರೆ.