ಡಾ| ಸುಧಾ ಮೂರ್ತಿ ಹೆಸರಲ್ಲಿ ವಂಚನೆ : ಇಬ್ಬರು ಮಹಿಳೆಯರ ವಿರುದ್ಧ ಕೇಸ್‌

ಬೆಂಗಳೂರು : ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ ಹೆಸರು ಬಳಸಿಕೊಂಡು ಇಬ್ಬರು ಮಹಿಳೆಯರು ವಂಚನೆ ಎಸಗಿದ ಕುರಿತು ದುರು ದಾಖಲಾಗಿದೆ. ಸುಧಾಮೂರ್ತಿಯವರ ಪಿಎ ಮಮತಾ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೃತಿ ಹಾಗೂ ಲಾವಣ್ಯ ಎಂಬವರು ಸೂಧಾ ಮೂರ್ತಿಯವರ ಹೆಸರು ಹೇಳಿ ಜನರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ ಜಾಹಿರಾತು ನೀಡಿ ಕಾರ್ಯಕ್ರಮ ಆಯೋಜನೆ ಮಾಡಿ ಟಿಕೆಟ್ ಮಾರಾಟ ಮಾಡಿ ವಂಚಿಸುತ್ತಿದ್ದರು.
ಕನ್ನಡ ಕೂಟ ನಾರ್ಥರ್ನ್‌ ಕ್ಯಾಲಿಫೋರ್ನಿಯ ಎಂಬ ಸಂಸ್ಥೆಯ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಇಮೇಲ್ ಮೂಲಕ ಸುಧಾಮೂರ್ತಿ ಸಂದೇಶ‌ ಕಳಿಸಿದ್ದರು. ಈ ಮಧ್ಯೆ ಕಿಡಿಗೇಡಿಗಳು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ ಕಾರ್ಯಕ್ರಮಕ್ಕೆ ಬರುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಕಾರ್ಯಕ್ರಮದ ಟಿಕೆಟ್ ಮಾರಾಟ ಮಾಡಿದ್ದಾರೆ. ಮೂರ್ತಿ ಟ್ರಸ್ಟ್​ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಅಸಿಸ್ಟೆಂಟ್ ಎಂದು ವಂಚಿಸಿದ್ದಾರೆ. ಈ ಬಗ್ಗೆ ಕಾರ್ಯಕ್ರಮ ಆಯೋಜನೆ ಮಾಡುವವರಿಗೆ ಕರೆ ಮಾಡಿ ವಿಚಾರಿಸಿದಾಗ ಸುಧಾಮೂರ್ತಿಯವರ ಅಸಿಸ್ಟೆಂಟ್ ಕರೆ ಮಾಡಿ ಸುಧಾಮೂರ್ತಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
ಪ್ರತಿ ಟಿಕೆಟ್​ಗೆ 40 ಡಾಲರ್ ಪಡೆದಿದ್ದಾರೆ. ಈ ರೀತಿ ಸುಧಾಮೂರ್ತಿಯವರಿಗೆ ತಿಳಿಯದೆಯೇ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ಕಂಪನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.error: Content is protected !!
Scroll to Top