ಕಾರ್ಕಳ : ಡ್ರೈ ಫ್ರೂಟ್ಸ್ ಸಂಸ್ಕರಣೆ ಮತ್ತು ಸಿಹಿತಿಂಡಿ ಉತ್ಪಾದನೆಯಲ್ಲಿ ಪುಸಿದ್ಧಿ ಪಡೆದಿರುವ ಬೋಳಾಸ್ ಸಂಸ್ಥೆಗೆ ಕನ್ನಡದ ಹಿರಿಯ ನಟ ಅನಂತನಾಗ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸಹಜ ಅಭಿನಯ ಮತ್ತು ಸ್ವಂತ ವರ್ಚಸ್ಸಿನಿಂದ ಅಪಾರ ಜನಪ್ರಿಯತೆ ಗಳಿಸಿರುವ ಅನಂತನಾಗ್ ಅವರು ಬೋಳಾಸ್ ಮೌಲ್ಯವನ್ನು ಮತ್ತಷ್ಟು ಎತ್ತರಕ್ಕೇರಿಸಲಿದ್ದಾರೆ.
ಬೋಳಾಸ್ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಅನಂತನಾಗ್, ಉತ್ಕೃಷ್ಟ ಗುಣಮಟ್ಟದ ಡ್ರೈ ಫ್ರೂಟ್ಸ್ ವಿತರಣೆ ಮೂಲಕ ಬೋಳಾಸ್ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಹೊರಹೊಮ್ಮಿದೆ. ರಾಜ್ಯ ಮಾತ್ರವಲ್ಲದೇ ದೇಶ, ವಿದೇಶದಲ್ಲೂ ಹೆಸರುವಾಸಿಯಾಗಿರುವ ಇಂತಹ ಪ್ರತಿಷ್ಠಿತ ಸಂಸ್ಥೆಯ ಅಂಬಾಸಿಡರ್ ಆಗುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದರು.
1958ರಲ್ಲಿ ಸ್ಥಾಪನೆಯಾಗಿರುವ ನಮ್ಮ ಸಂಸ್ಥೆ 2012ರಲ್ಲಿ ಗೋಡಂಬಿ ಸಂಸ್ಕರಣೆಯೊಂದಿಗೆ ಇತರ ಡ್ರೈ ಫ್ರೂಟ್ಸ್ ಸಂಸ್ಕರಣೆ ಮಾಡಲು ಪ್ರಾರಂಭಿಸಿದೆ. 2020ರಲ್ಲಿ ʼಬೋಳಾಸ್’ ಮಳಿಗೆಗಳನ್ನು ತೆರೆಯುವುದರ ಮೂಲಕ ಅತ್ಯುತ್ತಮ ಗುಣಮಟ್ಟದ ಪೋಷಕಾಂಶಯುಕ್ತ ಡ್ರೈ ಫುಟ್‌ಗಳನ್ನು ಪೂರೈಸಲು ಆರಂಭಿಸಿದೆ. ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಲ್ಲೂ ಸಂಸ್ಥೆ ಮಳಿಗೆಗಳನ್ನು ತೆರೆದಿದ್ದು, ಸುಮಾರು 100ಕ್ಕೂ ಅಧಿಕ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಇದೀಗ ಬೋಳಾಸ್ ಸಂಸ್ಥೆಗೆ ಚಿತ್ರನಟ ಅನಂತನಾಗ್ ಅವರು ರಾಯಭಾರಿಯಾಗುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ದೊರೆಕಿದೆ.
ದಾಮೋದರ್ ಕಾಮತ್, ಪಾಲುದಾರರು