63.10 ಲಕ್ಷ ರೂ. ಲಾಭ, ಶೇ.12 ಡಿವಿಡೆಂಡ್ ಘೋಷಣೆ
ಬೆಳ್ಮಣ್ : ಬೆಳ್ಮಣ್ಣು ವ್ಯವಸಾಯ ಸೇವಾ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಸಂಘದ ಸಹಕಾರಿ ಸೌಧ ಸಭಾಭವನದಲ್ಲಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
2022-23ನೇ ಸಾಲಿನಲ್ಲಿ ಸಂಘ 42.45 ಕೋಟಿ ವ್ಯವಹಾರ ನಡೆಸಿ 63.10 ಲಕ್ಷ ಲಾಭಗಳಿಸಿದೆ ಹಾಗೂ ವರದಿ ವರ್ಷದಲ್ಲಿ ಸದಸ್ಯರಿಗೆ ಶೆ.12 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ 7 ಪ್ರಗತಿಪರ ರೈತರನ್ನು ಗೌರವಿಸಲಾಯಿತು. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿರ್ದೇಶಕ ಜೆರಾಲ್ಡ್ ಡಿಸೋಜ ಸ್ವಾಗತಿಸಿ, ಸಿಬ್ಬಂದಿ ರವಿರಾಜ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಸಂತ ಮೊಯ್ಲಿ 2022-23ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಜೂರಾತಿ ಮತ್ತು ನಿವ್ವಳ ಲಾಭದ ವಿಂಗಡಣೆ ಸಂಘದ ಉಪವಿಧಿಗಳ ಸಮಗ್ರ ತಿದ್ದುಪಡಿಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ನಿತ್ಯಾನಂದ ಶೆಟ್ಟಿ ವರದಿ ವರ್ಷದಲ್ಲಿ ಸಹಕರಿಸಿದ ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು. ನಿರ್ದೇಶಕ ದೇವೇಂದ್ರ ನಾಯಕ್ ಧನ್ಯವಾದ ಅರ್ಪಿಸಿದರು. ಉಪಾಧ್ಯಕ್ಷ ದಿನೇಶ್ ಕುಲಾಲ್ , ನಿರ್ದೇಶಕರಾದ ಕೆ. ಸಂಜೀವ ಶೆಟ್ಟಿ, ರಘುರಾಮ್ ರಾವ್, ಉದಯ ನಾಯಕ್, ವಿಶಾಲಾಕ್ಷಿ ಬಂಗೇರ, ಸೆವ್ರೀನ್ ಡೇಸಾ, ರಾಮಚಂದ್ರ ಎಂ, ಯೋಗೀಶ್ ದೇವಾಡಿಗ ಉಪಸ್ಥಿತರಿದ್ದರು.