ಬೆಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿ ಬದಲು

35 ನಿಮಿಷ ಬೇಗನೇ ಮುರ್ಡೇಶ್ವರ ತಲುಪಲಿರುವ ರೈಲು

ಬೆಂಗಳೂರು: ಬೆಂಗಳೂರು-ಮುರುಡೇಶ್ವರ ರೈಲಿನ ವೇಳಾಪಟ್ಟಿಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಸೆ.24ರಿಂದ ಈ ರೈಲು 35 ನಿಮಿಷ ಮುಂಚಿತವಾಗಿ ಮುರುಡೇಶ್ವರ ತಲುಪಲಿದೆ.
ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆ ಬೆಂಗಳೂರು-ಮೈಸೂರು- ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಪ್ರಯಾಣಿಕರು ರೈಲಿನ ವೇಳಾಪಟ್ಟಿ ಅನುಕೂಲಕರವಾಗಿಲ್ಲ ಎಂಬ ಆಕ್ಷೇಪ ಎತ್ತಿದ್ದರು. ಈ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಬೆಂಗಳೂರು-ಮುರುಡೇಶ್ವರ ನಡುವೆ ಸಂಚಾರ ನಡೆಸುವ ರೈಲು ನಂಬರ್ 16585 ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.
ರೈಲು ಮಂಗಳೂರು ತಲುಪಿದ ಬಳಿಕ ನಿಧಾನವಾಗಿ ಸಾಗುತ್ತದೆ ಎಂಬುದು ಪ್ರಯಾಣಿಕರ ಆರೋಪವಾಗಿತ್ತು. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುರತ್ಕಲ್‌ ಮತ್ತು ಮುರುಡೇಶ್ವರ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸುರತ್ಕಲ್‌ಗೆ 10.32ರ ಬದಲಾಗಿ 9.48ಕ್ಕೆ ಆಗಮಿಸಲಿದ್ದು, 9.50ಕ್ಕೆ ನಿರ್ಗಮಿಸಲಿದೆ. ಮುಲ್ಕಿಗೆ 10.44ರ ಬದಲು 10.06ಕ್ಕೆ ಆಗಮನ, 10.08ಕ್ಕೆ ನಿರ್ಗಮನ, ಉಡುಪಿಗೆ 11.18ರ ಬದಲು 10.40ಕ್ಕೆ ಆಗಮನ, 10.42ಕ್ಕೆ ನಿರ್ಗಮನ, ಬಾರ್ಕೂರು 11.38ರ ಬದಲು 10.56ಕ್ಕೆ ಆಗಮನ, 10.58ಕ್ಕೆ ನಿರ್ಗಮನ. ಕುಂದಾಪುರಕ್ಕೆ 11.54ರ ಬದಲು 11.14ಕ್ಕೆ ಆಗಮನ, 11.16ಕ್ಕೆ ನಿರ್ಗಮನ. ಮೂಕಾಂಬಿಕಾ ರೋಡ್ ಬೈಂದೂರು 12.40ರ ಬದಲು 11.40ಕ್ಕೆ ಆಗಮನ, 11.42ಕ್ಕೆ ನಿರ್ಗಮನ, ಭಟ್ಕಳ 12.56ರ ಬದಲು 12 ಗಂಟೆಗೆ ಆಗಮನ, 12.02ಕ್ಕೆ ನಿರ್ಗಮನ. ಮುರುಡೇಶ್ವರ 1.35ರ ಬದಲು 12.55ಕ್ಕೆ ಆಗಮನ. ಪ್ರತಿದಿನದ ಈ ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮಂಗಳೂರಿಗೆ 8.15ಕ್ಕೆ ಆಗಮಿಸುತ್ತದೆ. ಅಲ್ಲಿಂದ ಸುರತ್ಕಲ್‌ಗೆ ಬರುವಾಗ 11 ಗಂಟೆ ಆಗುತ್ತಿತ್ತು. ಈ ಮೂರು ಗಂಟೆಯ ವಿಳಂಬ ತಪ್ಪಿಸಿ, ಅವೈಜ್ಞಾನಿಕವಾಗಿರುವ ವೇಳಾಪಟ್ಟಿ ಬದಲಾಯಿಸಿ ಎಂದು ಪ್ರಯಾಣಿಕರು ಆಗ್ರಹಿಸಿದ್ದರು. ಮಂಗಳೂರು ಸುರತ್ಕಲ್ ನಡುವಿನ ಅಂತರ ಸುಮಾರು 20 ಕಿ. ಮೀ. ಇದನ್ನು ಕ್ರಮಿಸಲು 3.30 ಗಂಟೆ ತೆಗೆದುಕೊಳ್ಳುವುದು ಏಕೆ?. ಈ ಅವೈಜ್ಞಾನಿಕ ವೇಳಾಪಟ್ಟಿಗೆ ಕಾರಣ ಏನು?. ವೇಳಾಪಟ್ಟಿ ಸರಿಪಡಿಸಿದರೆ ರೈಲನ್ನು ಗೋಕರ್ಣ, ಕಾರವಾರ ತನಕವೂ ವಿಸ್ತರಣೆ ಮಾಡಬಹುದು ಎಂದು ಪ್ರಯಾಣಿಕರು ಸಲಹೆ ನೀಡಿದ್ದರು.







































































error: Content is protected !!
Scroll to Top