ಕಾರ್ಕಳ : ನಗರದ ಆನೆಕೆರೆ ಬಳಿ ಕಾರ್ಯನಿರ್ವಹಿಸುತ್ತಿರುವ ಕಾವೇರಿ ಮೋಟಾರ್ಸ್ ಶೋರೂಂನಲ್ಲಿ ಸೆ. 23ರಂದು ಟಾಟಾ ನೆಕ್ಸಾನ್ ಕಾರು ಬಿಡುಗಡೆ ಮಾಡಲಾಯಿತು. ನಿಟ್ಟೆ ಯೂನಿವರ್ಸಿಟಿ ಸೀನಿಯರ್ ಅಡ್ವೈಸರ್ ಅಶೋಕ್ ಅಡ್ಯಂತಾಯ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ ವಂದನಾ ರೈ ಹೊಸ ಕಾರನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅಶೋಕ್ ಅಡ್ಯಂತಾಯರು, ಸುರಕ್ಷತೆ, ಬೇಡಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಟಾಟಾ ಸಂಸ್ಥೆಯಿಂದ ಅತ್ಯಾಕರ್ಷಕ ವೈಶಿಷ್ಟ್ಯ, ವಿನ್ಯಾಸ, ತಂತ್ರಜ್ಞಾನದೊಂದಿಗೆ ನೆಕ್ಸಾನ್ ಕಾರು ತಯಾರಿಯಾಗಿದೆ. ಇದು ಗ್ರಾಹಕರ ಅಚ್ಚುಮೆಚ್ಚಿನ ಕಾರು ಆಗಲಿದೆ ಎಂದರು.

ಪ್ರಥಮ ಗ್ರಾಹಕರಾದ ಎಲೀಸಾ ಫೆರ್ನಾಂಡಿಸ್, ವಿದ್ಯಾ ವಿಠಲ ಶೆಟ್ಟಿ ಮತ್ತು ಪ್ರಿವೇಲ್ ಡಿʼಸೋಜಾ ಅವರಿಗೆ ಬೀಗದ ಕೀಲಿ ಹಸ್ತಾಂತರಿಸಲಾಯಿತು. ಉದ್ಯಮಿ ಬೋರ್ಕಟ್ಟೆ ಗಣಪತಿ ಹೆಗ್ಡೆ, ಸದಾನಂದ ಪ್ರಭು, ಮಹಮ್ಮದ್ ಅಸ್ಲಾಂ, ಕಾವೇರಿ ಗ್ರೂಪ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮತ್ತು ಜನರಲ್ ಮ್ಯಾನೇಜರ್ ಉಮೇಶ್ ಮೂಲ್ಯ ಉಪಸ್ಥಿತರಿದ್ದರು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 9606025181 ಸಂಪರ್ಕಿಸಬಹುದಾಗಿದೆ.
