ಸರಕಾರ ಒಕ್ಕೂಟದಿಂದ ದೊರೆಯುವ ಸೌಲಭ್ಯ ಸದುಪಯೋಗಪಡಿಸಿ – ಜಯರಾಂ ಸಾಲ್ಯಾನ್
ಕಾರ್ಕಳ : ಬೋಳ ವಂಜಾರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ ಸೆ. 21 ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಜಯರಾಂ ಸಾಲ್ಯಾನ್ ಮಾತನಾಡಿ, ಸದಸ್ಯರ ಬೆಂಬಲ, ಸಹಕಾರದಿಂದಾಗಿ ವಂಜಾರಕಟ್ಟೆ ಹಾಲು ಉತ್ಪಾದಕರ ಸಂಘವು ಉತ್ತಮ ಸಂಘವೆಂದು ಗುರುತಿಸಿಕೊಳ್ಳುವಂತಾಗಿದೆ. ಹಾಲು ಉತ್ಪಾದಕರು ಒಕ್ಕೂಟದಿಂದ ಹಾಗೂ ಸರಕಾರದಿಂದ ಸಿಗುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ಒಕ್ಕೂಟದ ಯೋಜನೆ ಕುರಿತು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಆಡಳಿತ ಮಂಡಳಿ ನಿರ್ದೇಶಕರಾದ ಸುಂದರ ಆಚಾರ್ಯ, ಸಾಧು ಶೆಟ್ಟಿ, ಗೋಪಾಲ ದೇವಾಡಿಗ, ಜಯಂತಿ ಶೆಟ್ಟಿ, ಬೇಬಿ ಶೆಟ್ಟಿ, ಮಹಾಬಲ ಮೂಲ್ಯ, ನಾರಾಯಣ ಶೆಟ್ಟಿ, ರಮೇಶ್ ನಾಯ್ಕ, ಕೃಷ್ಣ, ಶಿವಾನಂದ ಪೂಜಾರಿ ಹಾಗೂ ಸಂಘದ ಸಿಬ್ಬಂದಿ ಗೀತಾ ಶೆಟ್ಟಿ, ಬಿ. ರವೀಂದ್ರ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕಾರ್ಯಕ್ರಮ ನಿರ್ವಹಿಸಿದರು.