ಇಂದು ಮೊಹಾಲಿಯಲ್ಲಿ ಭಾರತ-ಆಸ್ಟ್ರೇಲಿಯ ಪಂದ್ಯ

ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಕಿರುಸರಣಿ

ಮೊಹಾಲಿ: ವಿಶ್ವಕಪ್‌ ಕೂಟಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯ ತಂಡ ಕಿರುಸರಣಿಯೊಂದನ್ನು ಆಡಲಿದ್ದು, ಇದರ ಮೊದಲ ಪಂದ್ಯ ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್ ಅ.5ರಂದು ಪ್ರಾರಂಭವಾಗುವ ಮೊದಲು ಎರಡೂ ತಂಡಗಳಿಗೆ ಈ ಸರಣಿಯು ಅಂತಿಮ ತಯಾರಿಯಾಗಿದೆ. ಮೊದಲ ಎರಡು ಏಕದಿನ ಪಂದ್ಯದಿಂದ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾ ಪರ ಓಪನರ್ ಆಗಿ ಯಾರು ಆಡಲಿದ್ದಾರೆ ಎಂಬ ಗೊಂದಲ ಇದೆ. ಶುಭ್​ಮನ್ ಗಿಲ್, ಇಶಾನ್ ಕಿಶನ್ ಜತೆ ಋತುರಾಜ್ ಗಾಯಕ್‌ವಾಡ್ ಇರುವುದರಿಂದ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಅಂತೆಯೇ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದರ ನಡುವೆ ಈ ಸರಣಿಯ ಮೂಲಕ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅಂದರೆ ಏಷ್ಯಾಕಪ್ ಟೂರ್ನಿಗೆ ಅಶ್ವಿನ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವುದು ವಿಶೇಷ.error: Content is protected !!
Scroll to Top