ಡೆಂಗ್ಯೂ ಭಯ ಬೇಡ – ಮುನ್ನೆಚ್ಚರಿಕೆ ಅಗತ್ಯ

ಕಾರ್ಕಳದಲ್ಲಿ ಪ್ರಸ್ತುತ 28 ಪ್ರಕರಣ

ಕಾರ್ಕಳ : ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಅಧಿಕ. ಈ ಸೊಳ್ಳೆಗಳಿಂದ ಅನೇಕ ರೋಗಗಳು ಹರಡುವುದು ಸಾಮಾನ್ಯ. ಸೊಳ್ಳೆಗಳಿಂದ ಹರಡುವಂತಹ ರೋಗಗಳಲ್ಲಿ ಡೆಂಗ್ಯೂ ಕೂಡ ಒಂದು. ಡೆಂಗ್ಯೂ ಜ್ವರವು ವೈರಲ್ ಫೀವರ್ ಆಗಿದ್ದು ಈ ರೋಗಕ್ಕೆ ಚಿಕಿತ್ಸೆ ಅಥವಾ ನಿರ್ದಿಷ್ಟ ಲಸಿಕೆ ಇಲ್ಲದಿರುವುದರಿಂದ ರೋಗಕ್ಕೆ ಅದರ ಲಕ್ಷಣಗನುಸಾರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈಡಿಸ್‌ ಎಂಬ ಸೊಳ್ಳೆಗಳಿಂದ ಡೆಂಗ್ಯೂ ಹರಡುವುದು. ಈ ಸೊಳ್ಳೆಗಳು ನೀರು ತುಂಬಿದ ಸ್ಥಳಗಳಲ್ಲಿ ಉತ್ಪತ್ತಿಯಾಗುತ್ತದೆ. ಎಳನೀರಿನ ಚಿಪ್ಪು, ಟಯರ್, ತೊಟ್ಟಿ ಹೀಗೆ ವಿವಿಧೆಡೆ ಸಂಗ್ರಹವಾದ ನೀರಿನಲ್ಲಿ ಈಡಿಸ್ ಸೊಳ್ಳೆಯು ಉತ್ಪತ್ತಿಯಾಗುವುದು. ರೋಗಕಾರಕ ಈಡಿಸ್‌ ಸೊಳ್ಳೆ ಕಚ್ಚುವುದರಿಂದ ವ್ಯಕ್ತಿಗೆ ಹರಡುವುದು.

ರೋಗ ಲಕ್ಷಣ
ವಿಪರೀತ ಜ್ವರ, ತಲೆನೋವು, ಮೈ – ಕೈ ನೋವು, ಕೀಲು ನೋವು, ವಾಕರಿಕೆ, ವಾಂತಿ, ಕಣ್ಣಿನ ಗುಡ್ಡೆಗಳ ಹಿಂಬಾಗದಲ್ಲಿ ನೋವು, ಇದನ್ನು ನಿವಾರಿಸದಿದ್ದರೆ ವಾಂತಿಯಲ್ಲಿ ರಕ್ತ, ಬಲಹೀನತೆ, ವಸಡಿನ ರಕ್ತಸ್ರಾವವಾಗುವುದು.

ಮುನ್ನೆಚ್ಚರಿಕೆ ಕ್ರಮ
ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು.
ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸುವುದು. ಮಲಗುವಾಗ ಸೊಳ್ಳೆ ಪರದೆ ಬಳಸುವುದು. ದೂಪವನ್ನು ಹಚ್ಚಿ, ಕೈ – ಕಾಲುಗಳಿಗೆ ಸೊಳ್ಳೆ ಕಚ್ಚದಂತೆ ತೆಂಗಿನ ಎಣ್ಣೆ ಹಚ್ಚುವುದು.
ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಪದಾರ್ಥಗಳನ್ನು ಸೇವಿಸುವುದು.
ಯೋಗ, ಪ್ರಾಣಾಯಾಮ ಮಾಡುವುದು.
ಅರ್ಧ ಚಮಚ ಅಶ್ವಗಂಧ ಚೂರ್ಣವನ್ನು ಬಿಸಿಹಾಲಿನಲ್ಲಿ ಬೆರೆಸಿ ದಿನಕ್ಕೆರಡು ಸಲ ಸೇವಿಸುವುದು.
ಒಂದು ಚಮಚ ನೆಲ್ಲಿಕಾಯಿ ರಸವನ್ನು ಒಂದು ಚಮಚ ನೀರಿನ ಜೊತೆ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ಸೇವಿಸುವುದು.
ಅಮೃತ ಬಳ್ಳಿಯ ಕಷಾಯವನ್ನು ಸೇವಿಸಿ, ನಾಲ್ಕೈದು ತುಂಡು ಅಮೃತ ಬಳ್ಳಿಯ ಕಾಂಡವನ್ನು ಒಂದು ಲೋಟ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಸೇವಿಸುವುದು.
ಬಿಸಿ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯುವುದು. ಬಿಸಿ ಊಟ, ಶುದ್ಧ ಆಹಾರ ಸೇವಿಸುವುದು.
ಪಪ್ಪಾಯ ಎಲೆಯನ್ನು ಜಜ್ಜಿ ಅದರ ರಸ ತೆಗೆದು ಒಂದು ಚಮಚ ರಸವನ್ನು ದಿನಕ್ಕೆರಡು ಸಲ ಸೇವಿಸುವುದು.
ಒಂದು ಲೋಟ ನೀರಿಗೆ ನಾಲ್ಕೈದು ಎಲೆ ತುಳಸಿ ಎಲೆಯನ್ನು ಹಾಕಿ ಕುದಿಸಿ, ಸೋಸಿ ಸೇವಿಸುವುದು. ಇದೇ ರೀತಿ ಬೇವಿನ ಎಲೆಯಲ್ಲಿ ಕೂಡ ಕಷಾಯ ಮಾಡಬಹುದು.
ಒಂದು ಲೋಟ ನೀರಿಗೆ ನಾಲ್ಕೈದು ಎಲೆ ತುಳಸಿ ಎಲೆ, ಸ್ವಲ್ಪ ಅರಿಶಿಣ, ಬೆಲ್ಲ, ಒಂದು ಚಮಚ ಕರಿಮೆಣಸಿನ ಪುಡಿ ಹಾಕಿ ಅರ್ಧ ಗ್ಲಾಸ್ ಆಗುವ ತನಕ ಕುದಿಸಿ ಸೋಸಿ ಸೇವಿಸುವುದು ಉತ್ತಮ.

ಕಾರ್ಕಳದಲ್ಲಿ ಪ್ರಸ್ತುತ 28 ಡೆಂಗ್ಯೂ ಪ್ರಕರಣವಿದೆ. ಜನವರಿ ತಿಂಗಳಿನಲ್ಲಿ ಹಿರ್ಗಾನದಲ್ಲಿ ಒಬ್ಬರಿಗೆ, ಹೆಬ್ರಿ ಪರಿಸರದಲ್ಲಿ ಇಬ್ಬರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಫೆಬ್ರವರಿಯಲ್ಲಿ ಬಜಗೋಳಿ ಹಾಗೂ ನಿಟ್ಟೆ ಪರಿಸರದಲ್ಲಿ ಒಬ್ಬರಿಗೆ, ಮಾರ್ಚ್‌ ತಿಂಗಳಿನಲ್ಲಿ ಅಜೆಕಾರಿನ ಓರ್ವರಿಗೆ ಹಾಗೂ ಹೆಬ್ರಿ ಪರಿಸರದ ಇಬ್ಬರಿಗೆ ಡೆಂಗ್ಯೂ ಬಾಧಿಸಿದೆ. ಎಪ್ರಿಲ್‌ ತಿಂಗಳಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗಿಲ್ಲ. ಮೇ ತಿಂಗಳಲ್ಲಿ ಇರ್ವತ್ತೂರಿನ ಒಬ್ಬರಿಗೆ, ಜೂನ್‌ ತಿಂಗಳಲ್ಲಿ ಹೆಬ್ರಿಯ ಇಬ್ಬರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ.

ಜುಲೈ ತಿಂಗಳಲ್ಲಿ ಹೆಬ್ರಿಯ 8 ಮಂದಿಯಲ್ಲಿ, ಬೈಲೂರು, ದೊಂಡೆರಂಗಡಿ, ಹಿರ್ಗಾನ, ನಿಟ್ಟೆ ಪರಿಸರದ ಇಬ್ಬರಲ್ಲಿ, ಮಾಳದಲ್ಲಿ ಒರ್ವರಿಗೆ ಡೆಂಗ್ಯೂ ಗೋಚರಿಸಿಸದ್ದು, ಒಂದೇ ತಿಂಗಳಲ್ಲಿ 17 ಮಂದಿಗೆ ಡೆಂಗ್ಯೂ ಬಾಧಿಸಿದೆ.error: Content is protected !!
Scroll to Top