ಮಹಿಳಾ ಮೀಸಲಾತಿ ಮಸೂದೆ ಇಂದು ಮೇಲ್ಮನೆಯಲ್ಲಿ ಮಂಡನೆ

ಲೋಕಸಭೆಯಲ್ಲಿ 454-2 ಮತಗಳ ಅಂತರದಿಂದ ಪಾಸ್‌

ಹೊಸದಿಲ್ಲಿ : ಮಹತ್ವದ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಬುಧವಾರ 454 ಮತಗಳ ಬಹುಮತದಿಂದ ಅಂಗೀಕರಿಸಲ್ಪಟ್ಟಿದೆ. ಮಸೂದೆಯೊಂದು ಇಷ್ಟು ಬಹಮತ ಪಡೆದಿರುವುದು ಕೂಡ ಇತಿಹಾಸ. ಸಂಸತ್ತಿನಲ್ಲಿ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯ ವಿರುದ್ಧ ಕೇವಲ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ.
ಮಸೂದೆಯನ್ನು ಬೆಂಬಲಿಸುವಾಗ, ಪ್ರತಿಪಕ್ಷಗಳು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೋಟಾವನ್ನು ವಿಸ್ತರಿಸಲು ಮತ್ತು ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಸೂದೆಯನ್ನು ತಕ್ಷಣದ ಅನುಷ್ಠಾನಕ್ಕೆ ತೀವ್ರ ಒತ್ತಡವನ್ನು ಸರ್ಕಾರವನ್ನು ಮೇಲೆ ಹೇರಿದ್ದಾರೆ.
ಸದನದಲ್ಲಿ ಹಾಜರಿದ್ದ ಮೂರನೇ ಎರಡರಷ್ಟು ಬಹುಮತದ ಸದಸ್ಯರೊಂದಿಗೆ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಮತದಾನದ ನಂತರ ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ಇಂದು ಮಸೂದೆ ರಾಜ್ಯಸಭೆಗೆ ಹೋಗಲಿದೆ. ಅದು ಕಾನೂನಾಗಲು ಕನಿಷ್ಠ ಅರ್ಧದಷ್ಟು ರಾಜ್ಯ ಅಸೆಂಬ್ಲಿಗಳು ಅದನ್ನು ಅಂಗೀಕರಿಸಬೇಕು.







































































error: Content is protected !!
Scroll to Top