ಕೆಬಿಸಿಯಲ್ಲಿ ಗೆದ್ದಿದ್ದೀರಿ ಎಂದು ಹೇಳಿ ಮಹಿಳೆಗೆ 13 ಲ.ರೂ. ವಂಚನೆ

ವಂಚಕನ ಮಾತು ನಂಬಿ ಖಾತೆಗೆ ಹಣ ಹಾಕುತ್ತಲೇ ಹೋದ ಮಹಿಳೆ

ಮಂಗಳೂರು: ಕೌನ್‌ ಬನೇಗಾ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಪುತ್ತೂರಿನ ಮಹಿಳೆಗೆ 12.93 ಲಕ್ಷ ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ.
ಪುತ್ತೂರು ನಿವಾಸಿ ಝೀನತ್‌ ಬಾನು ಅವರಿಗೆ 2022ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಪ್‌ ಕರೆ ಮಾಡಿ ತಾನು ಕೌನ್‌ ಬನೇಗಾ ಕರೋಡ್‌ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹಾಗೂ 25 ಲಕ್ಷ ರೂ. ಗೆದ್ದಿರುವುದಾಗಿ ತಿಳಿಸಿದ್ದಾನೆ.
ಅನಂತರ ಆ ಹಣವನ್ನು ಪಡೆಯಲು ತೆರಿಗೆ ಹಾಗೂ ಇನ್ನಿತರ ಶುಲ್ಕಗಳ ಕಾರಣ ಹೇಳಿ 2022 ಮೇ ತಿಂಗಳಿನಿಂದ 2023 ಸೆಪ್ಟಂಬರ್‌ 13ರ ವರೆಗೆ ವಿವಿಧ ಬ್ಯಾಂಕ್‌ ಖಾತೆಗಳಿಗೆ 12,93, 200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.error: Content is protected !!
Scroll to Top