ಜೈನ್‌ ಮಿಲನ್‌ ಮಾಸಿಕ ಸಭೆ – ಪಂಚಾಯತ್‌ ಅ‍ಧ್ಯಕ್ಷರಾಗಿ ಆಯ್ಕೆಯಾದ ಸಮಾಜ ಬಾಂಧವರಿಗೆ ಸನ್ಮಾನ

ಕಾರ್ಕಳ : ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಜೈನ್‌ ಮಿಲನ್‌ ಮಾಸಿಕ ಸಭೆಯಲ್ಲಿ ಇತ್ತೀಚೆಗೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೈನ ಸಮಾಜ ಬಾಂಧವರನ್ನು ಮತ್ತು ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನ ವಿರಂಜಯ‌ ಅವರನ್ನು ಸನ್ಮಾನಿಸಲಾಯಿತು. ಸಾಣೂರು ಪಂಚಾಯತ್‌ ಅಧ್ಯಕ್ಷ ಯುವರಾಜ್ ಜೈನ್, ಇರ್ವತ್ತೂರು ಪಂಚಾಯತ್‌ ಅಧ್ಯಕ್ಷ ಭರತ್ ಜೈನ್, ಹಿರ್ಗಾನ ಪಂಚಾಯತ್‌ ಅಧ್ಯಕ್ಷ ಮಹಾವೀರ್ ಜೈನ್, ಮುಡಾರು ಪಂಚಾಯತ್‌ ಅಧ್ಯಕ್ಷೆ ಶ್ರುತಿ ಡಿ. ಅಧಿಕಾರಿ, ಬಜಗೋಳಿ ಪಂಚಾಯತ್‌ ಅಧ್ಯಕ್ಷ ನಿರಂಜನ್‌ ಹೆಗ್ಡೆ ಬಂಡಸಾಲೆ ಅವರನ್ನು ಅಭಿನಂದಿಸಲಾಯಿತು.
ಜೈನ್‌ ಮಿಲನ್‌ ಕಾರ್ಕಳದ ಅಧ್ಯಕ್ಷೆ ಮಾಲತಿ ವಸಂತ ರಾಜ್ ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕೊಕ್ರಾಡಿ ಜೈನ ಧರ್ಮದ ಮಹತ್ವ ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಡಾ. ಎನ್. ಜಿನಚಂದ್ರ, ಬಿ. ಭರತ್ ರಾಜ್, ಡಾ. ಶ್ರೇಯಾಂಸ ಪಡಿವಾಳ್, ಕೆ. ಮಹಾವೀರ ಹೆಗ್ಡೆ, ಪ್ರಭಾತ್ ಕುಮಾರ್ ಎನ್. ಮೊದಲಾದವರು ಈ ಸಂದರ್ಭದಲ್ಲಿದ್ದರು.
ಅಭೀಜ್ಞ ಪ್ರಾರ್ಥಿಸಿದರು. ಮೋಹನ್ ಪಡಿವಾಳ್ ಸ್ವಾಗತಿಸಿ, ವಾಣಿ ಜೈನ್ ಮತ್ತು ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಪಿ.‌ ಅಭಯ ಕುಮಾರ್ ವಂದಿಸಿದರು.error: Content is protected !!
Scroll to Top