ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಹಾಗೂ ಹಿಂದೂ ಹೆಲ್ಪ್ ಲೈನ್ ಸಹಕಾರ
ಕಾರ್ಕಳ : ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮುನಿಯಾಲಿನ ಅಮೂಲ್ಯಳ ಚಿಕಿತ್ಸೆಗಾಗಿ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಹಾಗೂ ಹಿಂದೂ ಹೆಲ್ಪ್ ಲೈನ್ ಮುನಿಯಾಲು ಸಂಗ್ರಹಿಸಿದ 7 ಲಕ್ಷ ರೂ. ನೆರವನ್ನು ಮುನಿಯಾಲು ಶ್ರೀ ಗಣೇಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಹಸ್ತಾಂತರಿಲಾಯಿತು. ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಹಿಂದೂ ಹೆಲ್ಪ್ ಲೈನ್‌ನ ಅರ್ಜುನ್ ಭಂಡಾರ್ಕರ್ ಅವರಿಗೆ ಮುನಿಯಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದೇ ಸಂದರ್ಭದಲ್ಲಿ ಅಭಿನಂದಿಸಿದೆ.
ಮುನಿಯಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅಂಡಾರು, ಜನಪ್ರಿಯ ರೈಸ್ ಮಿಲ್ ಪಾಲುದಾರ ಬಿ. ಮಂಜುನಾಥ್, ವೇ. ಮೂ. ರಾಘವೇಂದ್ರ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.