ಕಾರ್ಕಳ : ಕಲ್ಯಾ ಗ್ರಾಮದ ಕೈರಬೆಟ್ಟು ದಡ್ಡುಮನೆ ನಿವಾಸಿ ರಾಜು ಪೂಜಾರಿಯವರು (78) ಅಲ್ಪಕಾಲದ ಅಸೌಖ್ಯದಿಂದ ಸೆ.19ರಂದು ನಿಧನರಾದರು. ಪ್ರಗತಿಪರ ಕೃಷಿಕ, ದೈವಭಕ್ತರಾಗಿದ್ದ ರಾಜು ಪೂಜಾರಿ ಸೌಮ್ಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರಾಜು ಪೂಜಾರಿಯವರ ಅಗಲಿಕೆಗೆ ಕಲ್ಯಾ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೈರಬೆಟ್ಟು ದಡ್ಡುಮನೆ ರಾಜು ಪೂಜಾರಿ ನಿಧನ
