ಕಾರ್ಕಳ : ಹಿರ್ಗಾನದಲ್ಲಿರುವ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವವನ್ನು ಸಂಭ್ರಮದಲ್ಲಿ ಆಚರಿಸಲಾಯಿತು. ಕಾರ್ಕಳದ ಎಣ್ಣೆಹೊಳೆಯಿಂದ ತೆರೆದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಕಾಲೇಜಿಗೆ ಮೆರವಣಿಗೆ ಮುಖಾಂತರ ಕರೆತರಲಾಯಿತು. ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ವಿಶೇಷವಾಗಿ ಗಣಹೋಮ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಅವರು ಚೌತಿ ಹಬ್ಬ ಬಗ್ಗೆ ಮಾತನಾಡಿದರು.
ಶ್ರೀ ದೇವಿ ಬಯಲಾಟ ಸಮಿತಿ ರಂಗನಪಲ್ಕೆ ತಂಡದಿಂದ ಅಸಹಾಯಕ ಬಡರೋಗಿಗಳ ಸಹಾಯಾರ್ಥ ಹುಲಿಕುಣಿತ ಪ್ರದರ್ಶನ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಸಾಯಂಕಾಲ ರುದ್ರಶಿವ ಮೂಡಬಿದ್ರೆ ತಂಡದಿಂದ ನಾಸಿಕ್ ಬ್ಯಾಂಡ್ ಹಾಗೂ ಸಾಯಂ ಕಾಲ 4.30 ಗಂಟೆಗೆ ದುರ್ಗಾಪರಮೇಶ್ವರಿ ಜೋಡುರಸ್ತೆ ಇವರಿಂದ ಹುಲಿ ಕುಣಿತ ನಡೆಯಿತು. ಸಂಜೆ ಗಣೇಶ ಮೂರ್ತಿಯನ್ನು ಕುಕ್ಕುದಕಟ್ಟೆಯಲ್ಲಿ ವಿಸರ್ಜಿಸಲಾಯಿತು. ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಅಶ್ವತ್ ಎಸ್.ಎಲ್., ಆದರ್ಶ ಎಂ.ಕೆ., ಅಮೃತ್ ರೈ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ನರೇಶ್ ಹಾಗೂ ಪ್ರವೀಣ್ ಸಹಕರಿಸಿದರು.
ಕಾರ್ಕಳ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವ
