ನಿಟ್ಟೆ : ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ : ವಿಶ್ವಕರ್ಮರು ಕುಲ ಕಸುಬು ಮುಂದುವರಿಸಬೇಕು – ಪಾಂಡುರಂಗ ಆಚಾರ್ಯ

ಕಾರ್ಕಳ : ಆಧುನಿಕ ಯುಗಕ್ಕೆ ಮಾರು ಹೋಗದೇ ವಿಶ್ವಕರ್ಮ ಸಮಾಜದ ಬಂಧುಗಳು ತಮ್ಮ ಕುಲ ಕಸುಬನ್ನು ಮುಂದುವರೆಸಿಕೊಂಡು ಹೋಗಬೇಕು. ತಮ್ಮಲ್ಲಿನ ಕಲೆ, ಕೌಶಲ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು. ವಿಶ್ವಕರ್ಮರು ಎಂದು ಹೇಳಿಕೊಳ್ಳಲು ಸಮಾಜದವರಿಗೆ ಯಾವುದೇ ಹಿಂಜರಿಕೆ ಬೇಡವೆಂದು ಸ್ಪ್ಯಾನ್‌ ಅಸೋಸಿಯೇಟ್ಸ್‌ ಮಾಲಕ ಪಾಂಡುರಂಗ ಆಚಾರ್ಯ ಹೇಳಿದರು.

ಅವರು ಸೆ. 17ರಂದು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ನಿಟ್ಟೆ ಹಾಗೂ ವಿಶ್ವಕರ್ಮ ಯುವ ವೇದಿಕೆ ನಿಟ್ಟೆ ಸಹಭಾಗಿತ್ವದಲ್ಲಿ ನಿಟ್ಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸಮಾಜ ಕಲ್ಯಾಣಾರ್ಥವಾಗಿ ವಿಶ್ವಕರ್ಮ ಪೂಜಾ ಮಹೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಹರ್ಷವರ್ಧನ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನ್ಯೂಸ್‌ ಕಾರ್ಕಳ ಜಾಹೀರಾತು ವಿಭಾಗದ ಮುಖ್ಯಸ್ಥೆ ಜ್ಯೋತಿ ರಮೇಶ್‌, ವಿಶ್ವಕರ್ಮ ಮಹಿಳಾ ಸಮಿತಿ ಗೌರವಾಧ್ಯಕ್ಷೆ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷ ಉದಯ ಸುಧಾಕರ ಆಚಾರ್ಯ, ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷ ಅನೂಪ್ ಆಚಾರ್ಯ, ಉಪಾಧ್ಯಕ್ಷ ಪ್ರದೀಪ್ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ವತ್ಸಲಾ ಉಮೇಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ಸಮಾಜದ ಸಾಧಕರಾದ ರಂಗೋಲಿ ಕಲಾವಿದ ಸೂರ್ಯ ಪುರೋಹಿತ್‌ ಹಾಗೂ ಯಕ್ಷಗಾನ ಕಲಾವಿದೆ ಸರೋಜಿನಿ ವಸಂತ್ ಆಚಾರ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರತ್ನ
ಕೆಮ್ಮಣ್ಣು ತೆಂಕುಮನೆ ರತ್ನಾವತಿ ಮತ್ತು ಮೋನಯ್ಯ ಆಚಾರ್ಯ ಅವರ ಸ್ಮರಣಾರ್ಥ ಅವರ ಮೊಮ್ಮಕ್ಕಳು ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರತಿಭಾನ್ವಿತ 61 ವಿದ್ಯಾರ್ಥಿಗಳಿಗೆ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಆಚಾರ್ಯ ನಿಟ್ಟೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಾರ್ಷಿಕ ವರದಿ ವಾಚಿಸಿದರು. ವಾರುಣಿ ನಾಗರಾಜ್, ಮಂಗಳಾದೇವಿ, ಶ್ರೇಯಾ ಆಚಾರ್ಯ ಕೆಮ್ಮಣ್ಣು ನಿರೂಪಿಸಿದರು. ಶ್ರೀ ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಈಶ್ವರ ಎಂ. ಬಡಿಗೇರ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರದೀಪ್ ಆಚಾರ್ಯ ಕೆಮ್ಮಣ್ಣು ತಂಡದಿಂದ ಮತ್ತು ಸಮಾಜ ಬಾಂಧವರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.error: Content is protected !!
Scroll to Top