ಅಧ್ಯಕ್ಷರಾಗಿ ಜಯ ಪೂಜಾರಿ – ಉಪಾಧ್ಯಕ್ಷರಾಗಿ ನಮಿರಾಜ್ ಜೈನ್
ಕಾರ್ಕಳ : ಕೆರ್ವಾಶೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ನಮಿರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೆ. 18ರಂದು ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸದಸ್ಯರೇ ಜಯ ಗಳಿಸಿದ್ದರು. ಬಿಜೆಪಿ ಬೆಂಬಲಿತ ನೋಣಯ್ಯ ಮೂಲ್ಯ , ಉದಯ ಪೂಜಾರಿ, ಗುಲಾಬಿ ಮೂಲ್ಯ, ಶಾಂತಿರಾಜ್ ಗುಡಿಗಾರ್, ನಾಗರಾಜ್ ಜೈನ್, ರಾಜಶೇಖರ್ ಭಟ್, ಲಲಿತಾ ಆಚಾರ್ಯ, ಚಂದ್ರರಾಜ ಹೆಗ್ಡೆ ಆಯ್ಕೆಯಾಗಿದ್ದರು. ಸೆ. 20ರಂದು ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು.