ಕಾರ್ಕಳ : ಯುವಕ ನಾಪತ್ತೆ

ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಕಾಣೆಯಾದ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕು ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಗುಂಡ್ಯ ಮನೆ ಪ್ರಸಾದ (25) ಎಂಬವರೇ ನಾಪತ್ತೆಯಾದ ಯುವಕ. 4 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತ ಸೆ. 16 ರಿಂದ ನಾಪತ್ತೆಯಾಗಿರುತ್ತಾರೆ.

error: Content is protected !!
Scroll to Top