ಕಾರ್ಕಳ ಕ್ರಿಯೇಟಿವ್‌ನಲ್ಲಿ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರ

ಮುಕ್ತವಾದ ಬದುಕು ಮುಖ್ಯ – ತನುಜಾ ಮಾಬೆನ್‌

ಕಾರ್ಕಳ : ನಮ್ಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ವಿಪರೀತ ಒತ್ತಡಕ್ಕೆ ಸಿಲುಕಬಾರದು. ಸಮತೋಲಿತ, ಸಕಾರಾತ್ಮಕ ಚಿಂತನೆ, ಸಮಚಿತ್ತವಾಗಿ ವ್ಯವಹರಿಸುವುದನ್ನು ರೂಢಿಸಿಕೊಳ್ಳುವುದು ಅಗತ್ಯ. ಅತಿಯಾದ ಒತ್ತಡ ಅನೇಕ ಅವಘಡಗಳನ್ನು ಉಂಟು ಮಾಡುವುದು. ಹಾಗಾಗಿ ಧನಾತ್ಮಕ ಅಂಶಗಳನ್ನು ಪ್ರಚೋದಿಸಿ ಒತ್ತಡದಿಂದ ಮುಕ್ತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದು ಜೇಸಿ ತರಬೇತಿದಾರೆ ತನುಜಾ ಮಾಬೆನ್‌ ಹೇಳಿದರು.
ಅವರು ಶನಿವಾರ ಕಾರ್ಕಳದ ಕ್ರಿಯೇಟಿವ್‌ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಒತ್ತಡ ನಿವಾರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಗುರಿಯ ಕಡೆಗೆ ಸಾಗುವಾಗ ಅನೇಕ ಅಡೆತಡೆಗಳು ಎದುರಾಗುವುದು ಸಾಮಾನ್ಯ. ಅದನ್ನು ಎದುರಿಸುವ ಮನ:ಸ್ಥಿತಿ, ದೃಢ ನಿರ್ಧಾರ ನಮ್ಮಲ್ಲಿರಬೇಕು. ಒತ್ತಡ ನಿವಾರಿಸುವ ಕಲೆ ಮೈಗೂಡಿಸಿಕೊಳ್ಳಬೇಕೆಂದು ತನುಜಾ ಹೇಳಿದರು.
ವಿದ್ಯಾ ಸಂಸ್ಥೆಯ ಸಂಸ್ಥಾಪಕ ಆದರ್ಶ ಎಂ. ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ಕಾರ್ಯಕ್ರಮ ನಿರ್ವಹಿಸಿದರು.error: Content is protected !!
Scroll to Top